Home Mangalorean News Kannada News ಯುವತಿಗೆ ಏರ್ಫೋರ್ಸ್ ನಲ್ಲಿ ತರಬೇತಿ ಸೀಟು ಕೊಡಿಸುವುದಾಗಿ ವಂಚನೆ

ಯುವತಿಗೆ ಏರ್ಫೋರ್ಸ್ ನಲ್ಲಿ ತರಬೇತಿ ಸೀಟು ಕೊಡಿಸುವುದಾಗಿ ವಂಚನೆ

Spread the love

ಯುವತಿಗೆ ಏರ್ಫೋರ್ಸ್ ನಲ್ಲಿ ತರಬೇತಿ ಸೀಟು ಕೊಡಿಸುವುದಾಗಿ ವಂಚನೆ

ಉಡುಪಿ: ಯುವತಿಯೋರ್ವರಿಗೆ ಏರ್ ಫೋರ್ಸ್ ನಲ್ಲಿ ತರಬೇತಿಯ ಸೀಟು ಕೊಡಿಸುವುದಾಗಿ ರೂ 1.20 ಲಕ್ಷ ವಂಚಿಸಿದ ಕುರಿತು ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದ ರೇವತಿ ಅವರ ಮಗಳಾದ ನಿಧಿ (20) ಮಂಗಳೂರಿನ ಹಂಪನಕಟ್ಟೆಯಲ್ಲಿ ಏರ್ ಹೊಸ್ಟೆಸ್ ತರಬೇತಿಯನ್ನು ಮಾಡಿದ್ದು, ಆ ಸಮಯದಲ್ಲಿ ಅವಳಿಗೆ ರಜತ್ ಎಂಬ ಹುಡುಗನ ಪರಿಚಯವಾಗಿದ್ದು, ಅವನು 2015 ರ ಆಗಸ್ಟ್ ತಿಂಗಳಿನಲ್ಲಿ ರೇವತಿಯವರು ತನ್ನ ಮಗಳು ನಿಧಿಯನ್ನು ಜೊತೆಗೆ ಕರೆದುಕೊಂಡು ಉಡುಪಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋದಾಗ ಅಲ್ಲಿ ರಜತ್ ಇದ್ದು ನಿಧಿ ತನ್ನ ತಾಯಿಗೆ ಇತನನ್ನು ಪರಿಚಯಿಸಿದ್ದಾಳೆ. ಆ ನಂತರ ರಜತ್ ನಿಧಿಗೆ ಏರ್‌ಫೋರ್ಸ್‌ನಲ್ಲಿ ತರಬೇತಿಯ ಸೀಟ್ ಕೊಡಿಸುವುದಾಗಿ ರೂಪಾಯಿ 1,20,000 ಹಣವನ್ನು ತೆಗೆದುಕೊಂಡಿದ್ದು, ಬೆಂಗಳೂರಿನಲ್ಲಿರುವಾಗ ಅವಳನ್ನು ಜೆ ಪಿನಗರದಲ್ಲಿರುವ ಅವನ ಮನೆಗೆ ಕರೆದುಕೊಂಡು ಹೋಗಿ ಅಶ್ಲೀಲವಾಗಿ ವರ್ತಿಸಿದ್ದು, ನಂತರ 2016 ಅಗಸ್ಟ್ ತಿಂಗಳವರೆಗೂ ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದಲ್ಲಿರುವ ನಿಧಿಗೆ ರಜತ್ ಫೋನ್ ಮಾಡಿ ಬೆಂಗಳೂರಿಗೆ ಬರುವಂತೆ ಒತ್ತಾಯಿಸಿದ್ದು, ರಜತ್ ಇಲ್ಲಿಯವರೆಗೂ ತಲೆ ಮರೆಸಿಕೊಂಡಿದ್ದು, ಅಕ್ಟೋಬರ್ 9 ರಂದು ಆತ ಉಡುಪಿಯ ಕಡೆಕಾರಿನವನೆಂದು ತಿಳಿದು ಬಂದಿದ್ದು ಈ ಕಾರಣ ಆತನ ವಿರುದ್ದು ನಿಧಿಯ ತಾಯಿ ರೇವತಿ ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ಮಹಿಳಾ ಠಾಣೆಯವರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.


Spread the love

Exit mobile version