ಯುವ ಇಂಟೆಕ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ದಿನಕರ ಶೆಟ್ಟಿ ಆಯ್ಕೆ
ಮಂಗಳೂರು: ಯುವ ಇಂಟೆಕ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ದಿನಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಯುವಕರಿಗೆ ರಾಜಕೀಯವಾಗಿ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಂಟೆಕ್ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ರಾಕೇಶ್ ಮಲ್ಲಿಯವರು ಯುವ ಇಂಟೆಕ್ ಕಾರ್ಮಿಕ ಸಂಘಟನೆ ಅಸ್ತಿತ್ವಕ್ಕೆ ತಂದು, ರಾಷ್ಟ್ರ ಮಟ್ಟದಲ್ಲಿ ಇದನ್ನು ಇಂಟೆಕ್ನ ಅವಿಭಾಜ್ಯ ಅಂಗವಾಗಿ ಮಾನ್ಯತೆ ಕೊಡಿಸಿ, ರಾಜ್ಯದಲ್ಲಿ ಯುವಕರನ್ನು ಹೆಚ್ಹಿನ ಸಂಖ್ಯೆಯಲ್ಲಿ ಈ ಸಂಘಟನೆಯಲ್ಲಿ ತೊಡಗಿಸುವಂತೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಂಘಟನೆ ಬಹಳ ಬಲಿಷ್ಟವಾಗಿ ಬೆಳೆಯಲು ನ್ಯಾಯವಾದಿ ದಿನಕರ ಶೆಟ್ಟಿಯವರ ಪಾತ್ರ ಬಹಳ ದೊಡ್ಡದು. ಸಾವಿರಾರು ಯುವಕರಿಗೆ ಯುವ ಇಂಟೆಕ್ ನಲ್ಲಿ ಜವಾಬ್ದಾರಿ ನೀಡಿ, ಕಾರ್ಮಿಕರ ಹಾಗೂ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತೆ ಮಾಡಿದರು. ಬಹಳ ಶಿಸ್ತುಬದ್ಧವಾಗಿ ಅಲ್ಪ ಸಮಯದಲ್ಲಿ ರಾಜ್ಯ ಮಟ್ಟದಲ್ಲಿ ಕೂಡ ಬೆಳೆಯಲು ಅವಿರತವಾಗಿ ಶ್ರಮಿಸಿರುತ್ತಾರೆ.
ದಿನಕರ ಶೆಟ್ಟಿಯವರು ವಿಧ್ಯಾರ್ಥಿ ಜೀವನದಲ್ಲಿ ವಿಧ್ಯಾರ್ಥಿ ನಾಯಕನಾಗಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷರಾಗಿ ಸೇವೆ ಮಾಡಿರುತ್ತಾರೆ. ಅಲ್ಲದೆ ಸಮಾಜದ ವಿವಿಧ ಸಂಘಟನೆಗಳ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿರುತ್ತಾರೆ. ಸಮಾಜದ ಅನೇಕ ಬ್ರಹತ್ ಮಟ್ಟದ ಹೋರಾಟದ ನಾಯಕತ್ವವನ್ನು ವಹಿಸಿ ಜನರ ಮನದಲ್ಲಿ ಒಬ್ಬ ಉತ್ತಮ ಸಮಾಜ ಸೇವಕ ಎನ್ನಿಸಿಕೊಂಡಿರುತ್ತಾರೆ.
ವಿವಿಧ ಸಂಘಟನೆ ಮೂಲಕ ಯುವಕರಿಗೆ ಕ್ರೀಡೆ, ಶಿಕ್ಷಣ, ಸಾಂಸ್ಕ್ರತಿಕ, ಹಾಗೂ ರಾಜಕೀಯವಾಗಿ ವೇದಿಕೆ ನಿರ್ಮಾಣ ಮಾಡಿರುತ್ತಾರೆ. ಸಾವಿರಾರು ವಿಧ್ಯಾರ್ಥಿಗಳಿಗೆ ನಾಯಕತ್ವ ನೀಡಿ ಅವರನ್ನು ನಾಯಕರನ್ನಾಗಿ ಮಾಡಿ ಸಮಾಜದ ವಿವಿಧ ಸಂಘಟನೆಗಳ, ವಿವಿಧ ರಾಜಕೀಯ ಪಕ್ಷದ ನೇತ್ರತ್ವ ವಹಿಸುವಂತೆ ಮಾಡಿರುತ್ತಾರೆ. ಧರ್ಮದ ರಕ್ಷಣೆಯಲ್ಲಿ ತನ್ನದೇ ತತ್ತ್ವದ ಮೂಲಕ ಸೇವೆ ಮಾಡಿಕೊಂಡು ಬಂದಿರುತ್ತಾರೆ. ತನ್ನ ಜೊತೆ 20 ವರ್ಷದ ಸುಧೀರ್ಘ ಸಾರ್ವಜನಿಕ ಜೀವನದಲ್ಲಿ ಬಂದ ಎಲ್ಲಾ ಯುವಕರನ್ನು ಹಿಂಬಾಲಕರನ್ನಾಗಿ ಮಾಡದೇ ಉತ್ತಮ ನಾಯಕರನ್ನಾಗಿ ರೂಪುಗೊಳಿಸಿದ್ದು ಪ್ರಶಂಸನೀಯ. ಇವರ ಪಾರದರ್ಶಕ ಸಾಮಾಜಿಕ ಹೋರಾಟಕ್ಕೆ ಇಂದಿಗೂ ಸಾವಿರಾರು ಯುವಕರು ಕೈ ಜೋಡಿಸುತ್ತಿರುವುದು, ಇವರ ಉತ್ತಮ ತಾಳ್ಮೆ, ಸ್ರಜನಿಕೆ, ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಂತಿದೆ. ಇಂತಹ ಯುವ ನಾಯಕ ಕಾರ್ಮಿಕರ ಸೇವೆಗಾಗಿ ಕಳೆದ 5 ವರ್ಷದಿಂದ ಇಂಟೆಕ್ ನ ಕಾನೂನು ಸಲಹೆ ಗಾರರಾಗಿ ಸೇವೆ ಮಾಡಿರುತ್ತಾರೆ. ಇವರ ನಾಯಕತ್ವದ ಚಾತೂರ್ಯತೆಯನ್ನು ಗಮನಿಸಿ ಇಂಟೆಕ್ ನ ರಾಜ್ಯ ಹಾಗೂ ರಾಷ್ಟೀಯ ಪದಾಧಿಕಾರಿಗಳು ಯುವ ಇಂಟಕ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುತ್ತಾರೆ. ಇವರ ಈ ನೇಮಕದಿಂದ ರಾಜ್ಯದಲ್ಲಿ ಇಂಟೆಕ್ ಸಂಘಟನೆ ಬೆಳವಳಿಗೆಗೆ ದೊಡ್ಡ ಶಕ್ತಿ ಬಂದಿದೆಯೆಂದರೆ ತಪ್ಪಾಗಲಿಕ್ಕಿಲ್ಲ. ಸಮಾಜದ ಎಲ್ಲಾ ವರ್ಗದ ಜನರು ಇವರ ಆಯ್ಕೆಗೆ ಅಭಿನಂದನೆ ಸಲ್ಲಿಸಿರುತ್ತಿರುವುದು ಇವರ ಸಂಘಟನೆ ಸಾಮರ್ಥ್ಯವನ್ನು ತೋರಿಸುತ್ತದೆ.