Home Mangalorean News Kannada News ಯುವ ಕಾಂಗ್ರೆಸ್, ಎನ್ ಎಸ್ ಯು ಐ ಕಾರ್ಕಳ ವತಿಯಿಂದ ಯುವ ಚೈತನ್ಯ -2016

ಯುವ ಕಾಂಗ್ರೆಸ್, ಎನ್ ಎಸ್ ಯು ಐ ಕಾರ್ಕಳ ವತಿಯಿಂದ ಯುವ ಚೈತನ್ಯ -2016

Spread the love

ಯುವ ಕಾಂಗ್ರೆಸ್, ಎನ್ ಎಸ್ ಯು ಐ ಕಾರ್ಕಳ ವತಿಯಿಂದ ಯುವ ಚೈತನ್ಯ -2016

ಕಾರ್ಕಳ: ಯುವ ಕಾಂಗ್ರೆಸ್ ಸಮಿತಿ ಕಾರ್ಕಳ ವಿಧಾನಸಭಾ ಕ್ಷೇತ್ರ ಮತ್ತು ಎನ್ ಎಸ್ ಯು ಐ ಕಾರ್ಕಳ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಗ್ಯಾಲೆಕ್ಸಿ ಮಲ್ಟಿಪರ್ಪಸ್ ಸಭಾಂಗಣದಲ್ಲಿ ಶನಿವಾರ ಪ್ರತಿಭಾನ್ವೇಷಣೆ ಹಾಗೂ ಸಾಂಸ್ಕ್ರತಿಕ ಸಮಾವೇಶ ಯುವ ಚೈತನ್ಯ -2016 ಆಯೋಜಿಸಲಾಗಿತ್ತು.

youth-congres-yuva-chaithanya-karkala-00

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ನಡೆಸಿ ಇಂದು ದೇಶದಲ್ಲಿ ಕೋಮು ವೈಷಮ್ಯದ ಮೂಲಕ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದ್ದು ಇದು ಸಂವಿಧಾನ ವಿರೋಧಿಯಾಗಿದೆ. ಜ್ಯಾತ್ಯಾತೀತ ನಿಲುವಿನಲ್ಲಿ ದೇಶ ಕಟ್ಟುವ ಮೂಲಕ ಶಾಂತಿ ಸೌಹಾರ್ದತೆ ಕಾಪಾಡುವ ಕೆಲಸ ಕಾಂಗ್ರೆಸಿನಿಂದ ಮಾತ್ರ ಸಾಧ್ಯ. ಮತ ಪಡೆಯುವುದಕ್ಕಾಗಿ ಬಿಜೆಪಿ ಸಮಾಜದಲ್ಲಿ ನಿರಂತರ ಗೊಂದಲ, ಗಲಭೆ ಸೃಷ್ಟಿಸುತ್ತಿದೆ. ಬಿಜೆಪಿಯು ದ್ವೇಷ ರಾಜಕಾರಣ ಮತ್ತು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಜಾತಿ-ಜಾತಿಗಳ ನಡುವೆ ಅಂತರ ಹೆಚ್ಚಿಸಿ ಕಪಟ ದೇಶಪ್ರೇಮ ಪ್ರದರ್ಶಿಸುತ್ತಿದೆ. ಅಗತ್ಯ ಬಿದ್ದರೆ ತಮ್ಮ ಕಾರ್ಯಕರ್ತರಿಂದಲೇ ಇನ್ನೊಬ್ಬ ಕಾರ್ಯಕರ್ತನನ್ನು ಹತ್ಯೆ ಮಾಡುವ ಕೆಲಸ ಕೂಡ ಮಾಡುತ್ತದೆ. ಆದರೆ ಮೃತಪಟ್ಟವರ ಪೈಕಿ ನಾಯಕರ ಮಕ್ಕಳಾರೂ ಈವರೆಗೆ ಮೃತಪಟ್ಟಿಲ್ಲ ಬದಲಿಗೆ ಬಡ ಕಾರ್ಯಕರ್ತರು ಮಾತ್ರ ಎನ್ನುವುದನ್ನು ತಿಳಿದುಕೊಳ್ಳಬೇಕು. ದೇಶದಲ್ಲಿ ನೈಜ ದೇಶಪ್ರೇಮವನ್ನು ಹುಟ್ಟುಹಾಕಿ ಎಲ್ಲರನ್ನೂಜಾಗೃತಗೊಳಿಸುವ ಕೆಲಸ ಯುವ ಮತ್ತು ವಿದ್ಯಾರ್ಥಿ ಕಾಂಗ್ರೆಸಿನಿಂದ ನಡೆಯಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಅವರು ಯುವ ಜನತೆಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯವ ಮೂಲಕ ದೇಶದ ಹಿತಾಸಕ್ತಿ ಕಾಯ್ದುಕೊಳ್ಳುವ ಕೆಲಸ ನಡೆಯಬೇಕು. ಸ್ವಾತಂತ್ರ್ಯ ಸಂದರ್ಭ ಈ ದೇಶದಲ್ಲಿ ಕಾಂಗ್ರೆಸ್ ನಡೆಸಿದ ತ್ಯಾಗ ಮತ್ತು ಬಲಿದಾನದ ಬಗ್ಗೆ ನೆನಪಿಸುವ ಕೆಲಸವಾಗಬೇಕು ಎಂದರು.

ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ ಎಂ. ಎನ್. ರಾಜೇಂದ್ರ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ನೀರೆ ಕೃಷ್ಣ ಶೆಟ್ಟಿ, ನಗರಾಧ್ಯಕ್ಷ ಸುಭಿತ್ ಎನ್. ಆರ್. ಹಿಂದುಳಿದ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ದಕ್ಷಿಣ ಕನ್ನಡ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಆಶೀತ್ ಪಿರೇರಾ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕಾಂಗ್ರೆಸ್ ಪದಾಧಿಕಾರಿಗಳಾದ ವಿಘ್ನೇಶ್ ಶೆಣೈ, ಚೇತನ್ ರಾವ್, ರವಿಶಂಕರ್, ಅಕ್ಷಯ್ ಬಂಗೇರ, ಸ್ವಾತಿ ಶೆಣೈ ಪ್ರಮಾಣವಚನ ಸ್ವೀಕರಿಸಿದರು. ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ಶುಭದ ರಾವ್ ಸ್ವಾಗತಿಸಿ, ಅಜಿತ್ ಹೆಗ್ಡೆ ವಿಜೇತರ ಪಟ್ಟಿ ವಾಚಿಸಿದರು. ವಿಘ್ನೇಶ್ ಕಿಣಿ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version