ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ

Spread the love

ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ

ನಮ್ಮ ಮಂಗಳೂರಿನ ನಾಗರಿಕರಿಗೆ ಒಂದು ಹೆಮ್ಮೆಯ ವಿಷಯ. ಭಾರತದ ನಾನಾದಿಕ್ಕುಗಳಿಂದ, ಹಲವು ರಾಜ್ಯಗಳಿಂದ 400 ಯುವಕ ಯುವತಿಯರು ದೇರಳಕಟ್ಟೆಯಲ್ಲಿರುವ ಮಂಗಳೂರಿನ ಯೆನಪೆÇೀಯಾ ವಿಶ್ವವಿದ್ಯಾನಿಲಯದಲ್ಲಿ ಇದೇ ಮೇ 1 ರಿಂದ 7 ರವರೆಗೆ ಶಾಂತಿ – ಏಕತಾ ಶಿಬಿರದಲ್ಲಿ ಭಾಗವಹಿಸುವರು. ನಾನಾ ರಾಜ್ಯಗಳಿಂದ, ನಾನಾ ಧರ್ಮದವರಾಗಿ, ವಿವಿಧ ಭಾಷೆಗಳನ್ನು ಮಾತನಾಡುವ ಇವರೆಲ್ಲರೂ ಒಂದು ವಾರ ಒಂದೇ ಪರಿವಾರದ ಸದಸ್ಯರಂತೆ ಇದ್ದು ಭಾರತದ ಏಕತೆಯ ಸಂದೇಶವನ್ನು ಸಾರಲಿದ್ದಾರೆ.

ಇಂದು ನಮ್ಮ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳಿಂದ ಹಿಡಿದು ಬೀದಿಯ ದೇಶ ಪ್ರೇಮಿಯವರೆಗೆ ಎಲ್ಲರೂ ಭಾರತದಲ್ಲಿ ಸಹಿಷ್ಟುತೆಗಾಗಿ ಚಿಂತಿಸುತ್ತಿದ್ದಾರೆ. ಸಣ್ಣ ಸಣ್ಣ ಮಾತಿನಿಂದ ದಂಗೆಗಳಾಗುತ್ತವೆ. ಸಣ್ಣ ಸಣ್ಣ ಕಾರಣಗಳಿಂದ ನಮ್ಮ ಜನ, ವಿಶೇಷವಾಗಿ ಯುವ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಶಾಂತಿ, ಭ್ರಾತೃತ್ವ, ಏಕತೆ ಸದ್ಭಾವನೆಗಳ ಅಗತ್ಯವಿದೆ. ಸದ್ಭಾವನೆ – ಸಹಿಷ್ಣುತೆಯ ಮಾತು ಬೇಕಾದಷ್ಟು ಕೇಳಿ ಬಂದರೂ ಆ ಸಹಿಷ್ಣುತೆಯ ಪ್ರಯೋಗವನ್ನು ಈ ಶಿಬಿರದಲ್ಲಿ ಕಾಣಬಹುದಾಗಿದೆ.

ಬೆಳಗಿನ ವೇಳೆ 400 ಯುವ ಶಿಭಿರಾರ್ಥಿಗಳು ಜನರು ಗುದ್ದಲಿ-ಪಿಕಾಸಿ ಹಿಡಿದು ‘ಶ್ರಮ ಸಂಸ್ಕಾರ’ದಲ್ಲಿ ಭಾಗವಹಿಸುವರು. ಯಾವ ರೀತಿಯಲ್ಲಿ ನಮ್ಮ ಸೈನ್ಯದ ಸೈನಿಕರಿಗೆ ಕವಾಯತು ಮೂಲಕ ಶಿಸ್ತು ಸಿಗುತ್ತದೆಯೋ, ಅದೇ ರೀತಿ ನಾಗರಿಕರಿಗೆ ರಚನಾತ್ಮಾಕ ಕಾರ್ಯದ ಮೂಲಕ ಶಿಸ್ತು ಸಿಗುತ್ತದೆ.

ಹೊರಗಿನ ರಾಜ್ಯದ ಶಿಬಿರಾಥಿಗಳೆಲ್ಲರಿಗೂ ಕನ್ನಡ ಕಲಿಸಲಾಗುವುದು ಹಾಗೂ ಕರ್ನಾಟಕದ ಶಿಬಿರಾರ್ಥಿಗಳು ಹಿಂದಿ ಮತ್ತು ಇತರ ರಾಜ್ಯಗಳ ಭಾಷೆಗಳನ್ನು ಕಲಿಯುವ ವಿಶೇಷ ಅವಕಾಶ ಕಲ್ಪಿಸಲಾಗುವುದು.

ಇವರು ಸಂಜೆ ನಗರದÀ ವಿವಿಧ ಭಾಗಗಳಲ್ಲಿ ಯುವ ಜನರ ಸರ್ವ ಧರ್ಮ ಪ್ರಾರ್ಥನೆ ಮತ್ತು 18 ಭಾಷೆಗಳು ಏಕತಾ ಕಾರ್ಯಕ್ರಮಗಳ ಮೂಲಕ ರಾಷ್ಟ್ರೀಯ ಏಕತೆಯ ಸಂದೇಶ ಹರಡಲಿದ್ದಾರೆ.

ಪ್ರಸ್ತುತ ವಿಶ್ವದ ದೊಡ್ಡ ಸಂಸ್ಥೆಯಾದ ವಿಶ್ವಸಂಸ್ಥೆಯಲ್ಲಿ 193 ರಾಷ್ಟ್ರ ಸದಸ್ಯ ರಾಷ್ಟ್ರಗಳಿವೆ. ಈ 193 ರಾಷ್ಟ್ರಗಳಲ್ಲಿ ಸೋವಿಯತ್ ರಷ್ಯಾ ಮಾತ್ರವೇ ಭಾರತಕ್ಕೆ ಹೋಲುತ್ತಿತ್ತು. ಕಾರಣ ಸೋವಿಯತ್ ರಾಷ್ಟ್ರದ ಸಂವಿಧಾನದಲ್ಲಿ 16 ಭಾಷೆಗಳು ಮಾನ್ಯ ಪಟ್ಟಿದ್ದುವು. ಭಾರತ ಸಂವಿಧಾನದಲ್ಲಿ 18 ಭಾಷೆಗಳಿವೆ. ಆದರೆ ಇಂದು ಸೋವಿಯತ್ ರಾಷ್ಟ್ರ ತುಂಡು ತುಂಡಾಗಿ ಹೋಗಿದೆ. ಇಂದಿಗೂ ಯಗೋಸ್ಲೋವಿಯಾದಲ್ಲಿ ಕೇವಲ ಮೂರು ಭಾಷೆಗಳಿದ್ದು ಆ ಸುಂದರ ದೇಶ ಮೂರು ತುಂಡಾಗಿ ಹೋಗಿದೆ. ಜೆಕೋಸ್ಲೊವಾಕಿಯಾದಲ್ಲಿ ಎgಡು ಭಾಷೆಗಳಿದ್ದು, ಅದು ಎರಡು ತುಂಡಾಗಿರುವುದನ್ನು ಗಮನಿಸಬಹುದು.

ಭಾರತದ ನಾಗರೀಕರಾದ ನಾವೆಲ್ಲಾ ಹಾಗೂ ನಮ್ಮ ಸರಕಾರ ಕಲಿಯಬೇಕಾದ ಮುಖ್ಯ ಪಾಠವೊಂದಿದೆ. ಭಾರತದಂತಹ ಹಿರಿಯ ದೇಶ ಅಖಂಡವಾಗಿರಬೇಕಾದಲ್ಲಿ ಬಂದೂಕು ಕೆಲಸಕ್ಕೆ ಬರುವುದಿಲ್ಲ. ನಮ್ಮೆಲ್ಲರ, ಅದೂ ಮುಖ್ಯವಾಗಿ ನಮ್ಮ ಯುವ ಜನರ ದೊಡ್ಡ ಹೃದಯ ಬೇಕು; ಜನರಲ್ಲಿ ಎಲ್ಲಾ ಭಾರತದ ನಾಗರೀಕರ ಬಗ್ಗೆ ಆದರ ಮತ್ತು ಪ್ರೇಮ ಬೇಕು. ಈ ರಾಷ್ಟ್ರೀಯ ಏಕತಾ ಶಿಬಿರದಲ್ಲಿ ಈ ಪ್ರಯೋಗವನ್ನು ಕಾಣಬಹುದಾಗಿದೆ.

ನಿಮಗೆ ನೆನಪಿರಬಹುದು, ಮುಸಲ್ಮಾನ ಬಂಧುಗಳಿಗಾಗಿ ಬೇರೆ ದೇಶ ಪಾಕೀಸ್ತಾನ ಅಗತ್ಯ ಇಲ್ಲ. ಭಾರತದಲ್ಲಿ ಹಿಂದು, ಮುಸಲ್ಮಾನ, ಸಿಖ್, ಜೈನ್, ಬೌದ್ಧ, ಪಾರಸಿ, ಕ್ರಿಶ್ಚಿಯನ್, ಬಹಾಯಿ ಎಲ್ಲಾ ಧರ್ಮಗಳ ಜನರೂ ಸೌಹಾರ್ದದಿಂದ ಇದ್ದಾರೆ ಎಂದು ಎಷ್ಟು ಹೇಳಿದರೂ ಕೆಲವರು ತೋರಿಸಿದ ವಿರೋಧದಿಂದ ಪಾಕಿಸ್ತಾನದ ಉದ್ಭವವಾಯಿತು. ಪಾಕೀಸ್ತಾನಕ್ಕೆ ನಮ್ಮ ಶುಭ ಕಾಮನೆಗಳು. ಆದರೆ, ಒಂದೇ ಧರ್ಮ ತಳಹದಿಯ ಮೇಲೆ ಕಟ್ಟಿದ ಪಾಕೀಸ್ತಾನವು ಭಾಷೆಯ ಕಾರಣ ಎರಡು ಭಾಗಗಳಾಯಿತು.

ವಿಶ್ವದ ಎಲ್ಲ ಭಾಷೆಗಳಿದ್ದು, 18 ಮುಖ್ಯ ಭಾಷೆಗಳಲ್ಲದೆ 1652 ಮಾತೃ ಭಾಷೆಗಳುಳ್ಳ ನಮ್ಮ ಭಾರತದ ಅಖಿಂಡತೆ ಹೇಗೆ ಗಟ್ಟಿಯಾಗಿ ನಿಲ್ಲಲು ಸಾಧ್ಯ?
ಮಂಗಳೂರಿನ ದೇರಳಕಟ್ಟೆಯ ಯೆನಪೆÇೀಯಾ ವಿಶ್ವವಿದ್ಯಾನಿಲಯದಲ್ಲಿ ಮೇ 1 ರಿಂದ 7 ರವರೆಗೆ ನಡೆಯುವ ರಾಷ್ಟ್ರೀಯ ಯುವ ಯೋಜನೆಯ ರಾಷ್ಟ್ರೀಯ ಏಕತಾ ಶಿಬಿರಕ್ಕೆ ಬಂದು ಕಾಣಿರಿ ಹಾಗೂ ಅನುಭವಿಸಿರಿ.


Spread the love