ಯುವ ಸೇವಾ ಸಂಘ ಹಾಗೂ ಟೀಮ್ ಯುವ ಟೈಗರ್ಸ್ ವತಿಯಿಂದ ಸಹಾಯಧನ ವಿತರಣೆ
ಉಡುಪಿ: ಯುವ ಸೇವಾ ಸಂಘ (ರಿ.) ಹಾಗೂ ಟೀಮ್ ಯುವ ಟೈಗರ್ಸ್ ಬಡಗಬೆಟ್ಟು, ದುಗ್ಲಿಪದವು ಮಂಚಿ, ಉಡುಪಿ ಇವರ ವತಿಯಿಂದ ಅಷ್ಟಮಿ ಸಂದರ್ಭ ಹುಲಿವೇಷ ಧರಿಸಿ ಹಾಗೂ ನವರಾತ್ರಿಯಲ್ಲಿ “ಪರೋಪಕಾರಃ ಪುಣ್ಯಾಯಃ” ಎಂಬ ಧ್ಯೇಯ ವಾಕ್ಯದೊಂದಿಗೆ ವಿಶೇಷ ವೇಷ ಧರಿಸಿ ನರ ದೌರ್ಬಲ್ಯದಿಂದ ಹಾಸಿಗೆ ಹಿಡಿದಿರುವ ಮುಗ್ಧ ಹೆಣ್ಣು ಮಗಳು ಕಿರಣಳ ಚಿಕಿತ್ಸೆಗಾಗಿ ಸಂಗ್ರಹಿಸಿದ ಸುಮಾರು 2,71,925 ರೂಪಾಯಿಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಹಾಗೆಯೇ ಪ್ರಗತಿ ನಗರದ ನಿವಾಸಿಗಳಾದ ಸುರೇಶ್ರವರ ವೈದ್ಯಕೀಯ ಚಿಕಿತ್ಸೆಗೆ 25000 ರೂ ನೆರವನ್ನು ನೀಡಲಾಯಿತು.
ನಿವೃತ ಸೇನಾನಿ ಅಶೋಕ್ ಕೋಟ್ಯಾನ್ರವರ ನೇತೃತ್ವದ ತಂಡ ವೀಲ್ ಚೇರ್ನ ಕೊಡುಗೆ ಯನ್ನು ನೀಡಿ ಸಂಘಕ್ಕೆ ಹಸ್ತಾಂತರಿಸಿದರು
ಈ ಸಂದರ್ಭ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ನಗರ ಸಭಾ ಸದಸ್ಯರಾದ ಚಂದ್ರ ಶೇಖರ್ ಸೇರಿಗಾರ್, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ಅಲೆವೂರು ಪಂಚಾಯತ್ ಅಧ್ಯಕ್ಷರಾದ ಯತೀಶ್ ಅಲೆವೂರು, ಮಾಜಿ ಅಧ್ಯಕ್ಷರಾದ ಪುಷ್ಪ ಅಂಚನ್, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಜಲ್ಲೆಶ್ ಶೆಟ್ಟಿ, ನ್ಯಾಯವಾದಿಗಳಾದ ಗಣೇಶ್ ಕುಮಾರ್ ಮಟ್ಟು, ಯುವ ಉದ್ಯಮಿ ಸುಭಾಷ್ ಕುಂತಳನಗರ , ಸುಮತಿ ಸೇರಿಗಾರ್ ಮಂಚಿಕೆರೆ, ಅಭಿನಯ ತಂಡದ ಅಧ್ಯಕ್ಷರಾದ ಉಮೇಶ್ ಅಲೆವೂರು, ಸಂಘದ ಅಧ್ಯಕ್ಷರಾದ ನರಸಿಂಹ ನಾಯ್ಕ್, ಸತೀಶ್ ಕುಮಾರ್ ಮಂಚಿ, ಪ್ರಕಾಶ್ ಚಂದ್ರ, ಶಬರೀಶ್ ಸುವರ್ಣ ಅಲೆವೂರು ಹಾಗೂ ಸಂಘದ ಸದಸ್ಯರು ಊರಿನ ಬಾಂಧವರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.
ನಾಗರಾಜ್ ವರ್ಕಾಡಿ ಕಾರ್ಯಕ್ರಮ ನಿರೂಪಿಸಿ ವಿನೋದ್ ಮಂಚಿ ಧನ್ಯವಾದ ನೆರವೇರಿಸಿದರು.