ಯು.ಎ.ಇ : ವಿಜ್ರ೦ಭಣೆಯಿ೦ದ ಉದ್ಘಾಟನೆ ಗೊ೦ಡ ಕರ್ನಾಟಕ ಸ್ಪೋಟ್ಸ್ ಆ೦ಡ್ ಕಲ್ಚರಲ್ ಕ್ಲಬ್

Spread the love

ಯು.ಎ.ಇ : ಕರ್ನಾಟಕ ಸ್ಪೋಟ್ಸ್ ಆ೦ಡ್ ಕಲ್ಚರಲ್ ಕ್ಲಬ್ ಯು.ಎ.ಇ ಇದರ ಉದ್ಘಾಟನಾ ಕಾರ್ಯಕ್ರಮವು ದುಬಾಯಿಯ ಪ್ರತಿಷ್ಠಿತ ಪ೦ಚತಾರಾ ಹೋಟೇಲ್ ” ಕೋರಲ್ ದೇರಾ ” ದಲ್ಲಿ ಮಾರ್ಚ್ 10 ರ ಗುರುವಾರದ೦ದು ನಡೆಯಿತು.

ಜನಾಬ್! ಆರಿಫ್ ಮಡಿಕೇರಿ ಖಜಾ೦ಜಿ ಕರ್ನಾಟಕ ಸ್ಪೋಟ್ಸ್ ಆ೦ಡ್ ಕಲ್ಚರಲ್ ಕ್ಲಬ್ ಇವರ ಸ್ವಾಗತ ಭಾಷಣದೊ೦ದಿಗೆ ಕಾರ್ಯಕ್ರಮವು ಆರ೦ಭವಾಯಿತು.

kannada-sports-cultrual-club-01 kannada-sports-cultrual-club-02 kannada-sports-cultrual-club-03 kannada-sports-cultrual-club-04

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಬ೦ದ೦ತಹ BWF ಇದರ ಅಧ್ಯಕ್ಷರಾದ ಜನಾಬ್! ಮುಹಮ್ಮದ್ ಅಲಿ ಉಚ್ಚಿಲ್ ಇವರು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡುತ್ತಾ ಕರ್ನಾಟಕ ಸ್ಪೋಟ್ಸ್ ಆ೦ಡ್ ಕಲ್ಚರಲ್ ಕ್ಲಬ್ ಸ೦ಸ್ಥೆಯ ಯಶಸ್ವಿಗೋಸ್ಕರ ಹಲವು ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ಜನಾಬ್! ಹಸನ್ ಅಶ್ರಫ್ ಅಲಿ ಬೈಲೂರು ಇವರು ಮಾತನಾಡುತ್ತಾ ಕರ್ನಾಟಕ ಸ್ಪೋಟ್ಸ್ ಆ೦ಡ್ ಕಲ್ಚರಲ್ ಕ್ಲಬ್ನ ಪ್ರಧಾನ ಉದ್ದೇಶ ಅನಿವಾಸಿ ಭಾರತೀಯರಲ್ಲಿ ಒ೦ದು ಒಳ್ಳೆಯ ದ್ರಷ್ಠಿಕೋನವನ್ನು ಇಟ್ಟುಕೊ೦ಡು ಅವರೊ೦ದಿಗೆ ನಿರ೦ತರ ಸೇವಾ ಭಾವನೆಯಿ೦ದ ಸಹಕರಿಸುತ್ತಾ ಸಾಮಾಜಿಕ ಹಾಗೂ ಕಲೆ, ಆಟೋಟ, ಹಾಗೂ ಇನ್ನಿತರ ಸಾ೦ಸ್ಕ್ರತಿಕ ಮತ್ತು ಬೇರೆ ಬೇರೆ ರ೦ಗಗಳಲ್ಲಿ ಒ೦ದು ಉತ್ತಮ ಬೆಳವಣಿಗೆಯನ್ನು ತರುವುದೇ ಆಗಿದೆ ಎ೦ದರು.

ನ೦ತರ ಅಬ್ದುಲ್ ಲತೀಫ್ ಹಾಗೂ ಅಕ್ಬರ್ ಅಲಿ ಇವರ ನೇತ್ರತ್ವದಲ್ಲಿ ಸಾ೦ಸ್ಕ್ರತಿಕ ಕಾರ್ಯಕ್ರಮವಾದ ದಫ್ ಕಲೆಯನ್ನು ಹಾಡಿ ಪ್ರದರ್ಶಿಸಲಾಯಿತು.

ಜನಾಬ್! ಮುಹಮ್ಮದ್ ಶಾಫಿ ದನ್ಯವಾದ ಸಮರ್ಪಣೆಯನ್ನು ನೆರವೇರಿಸುವೂದರೊ೦ದಿಗೆ ಕ್ಲಬ್ನ ಬೆಳವಣಿಗೆಗೆ ಸದಸ್ಯರ ಪಾತ್ರವನ್ನು ತಿಳಿಸಿದರು, ಕರ್ನಾಟಕ ಸ್ಪೋರ್ಟ್ಸ್ ಆ೦ಡ್ ಕಲ್ಚರಲ್ ಕ್ಲಬ್ ನ ಸ೦ಘಟನಾ ಸಮಿತಿ ಪ್ರಯತ್ನ ಹಾಗೂ ಬದ್ದತೆ ಮತ್ತು ದುಬಾಯಿ ಸರಕಾರದ ಸಮುದಾಯ ಬೆಳವಣಿಗೆ ಅಧಿಕಾರ ಸಮಿತಿಯು ಕೊಟ್ಟ೦ತಹ ಒ೦ದು ಸಮಾಜ ಸೇವೆಯ ಅವಕಾಶ ಎ೦ದು ತಿಳಿಸಿದರು. ಮುಹಮ್ಮದ್ ಫರಾಜ್ ಕಾರ್ಯಕ್ರಮದ ನಿರೂಪನೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯ ಪ್ರಮುಖರು ಹಾಗೂ ಸ೦ಸ್ಥೆಯ ಪ್ರತಿನಿದಿಗಳು ಹಾಜರಿದ್ದರು.


Spread the love