ಯೋಗಿ ಆದಿತ್ಯ ನಾಥ್ ಆಳ್ವಿಕೆಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ – ವೆರೋನಿಕಾ ಕರ್ನೆಲಿಯೊ

Spread the love

ಯೋಗಿ ಆದಿತ್ಯ ನಾಥ್ ಆಳ್ವಿಕೆಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ – ವೆರೋನಿಕಾ ಕರ್ನೆಲಿಯೊ

ಬ್ರಹ್ಮಾವರ : ಯೋಗಿ ಆದಿತ್ಯನಾಥ ಆಳ್ವಿಕೆಯಲ್ಲಿ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಕೆ.ಪಿ.ಸಿ.ಸಿ ಸದಸ್ಯೆ ವೆರೋನಿಕಾ ಕರ್ನೇಲಿಯೊ ಎಂದು ಆರೋಪಿಸಿದರು.

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಬ್ರಹ್ಮಾವರ ಬಸ್ಸು ನಿಲ್ದಾಣದ ಬಳಿ ಉತ್ತರ ಪ್ರದೇಶದ ಹಾಥರಸ್ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಖಂಡನೀಯ. ಕೃತ್ಯದಲ್ಲಿ ಭಾಗಿಯಾದರಿಗೆ ತಕ್ಕ ಶಿಕ್ಷೆ ಆಗಬೇಕು. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ಪ್ರಕರಣವನ್ನು ಮುಚ್ಚಿ ಹಾಕದೇ ಹತ್ಯೆಗೀಡಾದ ಯುವತಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಅವರು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷ ಹಾಗೂ ಬ್ರಹ್ಮಾವರ ಬ್ಲಾಕ್ನ ಉಸ್ತುವಾರಿ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಉತ್ತರ ಪ್ರದೇಶ ರಾಜ್ಯವು ಅತ್ಯಾಚಾರ ಪ್ರಕರಣಗಳಿಗೆ ರಾಜಧಾನಿ ಆಗಿದೆ. ರಾಜ್ಯಾಡಳಿತದೊಂದಿಗೆ ಪೋಲೀಸರೂ ಸಾಥ್ ನೀಡಿ, ಅತ್ಯಾಚಾರ ಪ್ರಕರಣವನ್ನು ಮುಚ್ಚುವ ಸಲುವಾಗಿ, ಸಂತ್ರಸ್ತೆಯ ಮನೆಯವರಿಗೂ ಶವ ದಹನಕ್ಕೆ ಆಸ್ಪದ ನೀಡದೆ, ಪೊಲೀಸರೇ ಶವ ಸಂಸ್ಕಾರ ಮಾಡಿರುವುದು ಸಂವಿಧಾನಕ್ಕೆ ಕಪ್ಪು ಚುಕ್ಕಿ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಉತ್ತರ ಪ್ರದೇಶದಲ್ಲಿ ಜಾತಿ ಆಧಾರಿತ ಅಪರಾಧಗಳಿಗೆ ಬಿಜೆಪಿ ಸರ್ಕಾರ ಪೋಷಣೆ ಮಾಡುತ್ತಿದೆ. ಇದು ಮಾನವ ಕುಲವೇ ತಲೆ ತಗ್ಗಿಸುವಂಹ ಕೆಲಸ ಎಂದರು

ಕೆ.ಪಿ.ಸಿ.ಸಿಯ ವೀಕ್ಷಕ ಪುರುಷೋತ್ತಮ ಅತ್ಯಾಚಾರ ಸಂತ್ರಸ್ತೆಯ ಮನೆಯವರಿಗೆ ಸಾಂತ್ವನ ಹೇಳಲು ಹೋದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಅವರ ಮೇಲೆ ಹಲ್ಲೆ ನಡೆಸಿದ ಪೋಲಿಸರ ಕ್ರಮವನ್ನು ಖಂಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯಯರಾದ ಡಾ.ಸುನೀತಾ ಶೆಟ್ಟಿ, ಗೋಪಿ ಕೆ ನಾಯ್ಕ, ಮುರಳಿ ಶೆಟ್ಟಿ, ದಿನಕರ ಹೇರೂರು, ಹರೀಶ್ ಶೆಟ್ಟಿ, ಯತೀಶ್ ಕರ್ಕೇರಾ ರಮೇಶ್ ಶೆಟ್ಟಿ ಹಾವಂಜೆ, ವಿಜಯ ಹೆಗ್ಡೆ, ಗೋಪಿ ನಾಯಕ್, ರಾಜೇಶ್ ಕುಮ್ರಗೋಡು, ಅಶೋಕ್ ಶೆ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸೌರಭ್ ಬಲ್ಲಾಳ್, ವಿಘ್ನೇಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಸೂರ್ಯ ಸಾಲಿಯಾನ್ ಸರಸ್ವತಿ, ನಿತ್ಯಾನಂದ ಕೆಮ್ಮಣ್ಣು, ನಿತ್ಯಾನಂದ ಬಿ ಆರ್, ಸಂಪತ್ , ತಾಜುದ್ದೀನ್, ಬ್ಯಾಪ್ಟಿಸ್ಟ್, ಸತೀಶ್ ಕಲ್ಯಾಣಪುರ, ಮೆಲ್ವಿನ್, ಹಮೀದ್, ರೆಹಮಾನ್, ಪ್ರಶಾಂತ್ ಸುವರ್ಣ, ಸತೀಶ್, ಫ್ರ್ಯಾಂಕಿ, ಕುಮಾರ್, ದಿನೇಶ್ ಪೂಜಾರಿ, ಸದಾಶಿವ ನಾಯಕ್, ರಮೇಶ್ ಕರ್ಕೇರ, ನರಸಿಂಹ ಪೂಜಾರಿ, ಉಮೇಶ್ ಶೆಟ್ಟಿ, ಶೀನ ಪೂಜಾರಿ, ಅಲ್ತಾಫ್, ಶ್ರೀನಿವಾಸ್ ಗುಲ್ವಾಡಿ, ಉಪೇಂದ್ರ ಗಾಣಿಗ, ಉಮೇಶ್ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love