ಯೋಧರ ಹತ್ಯೆ; ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಬಾಂಧವರಿಂದ ಶ್ರದ್ಧಾಂಜಲಿ
ಉಡುಪಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾದ ಕೇಂದ್ರಿಯ ಮೀಸಲು ಪಡೆಯ ವೀರಯೋಧರಿಗೆ ಅಜ್ಜರಕಾಡಿನ ಹುತಾತ್ಮ ಸೈನಿಕರ ಯುದ್ದ ಸ್ಮಾರಕದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಭಾಂಧವರು ಶೃದ್ಧಾಂಜಲಿ ಸಲ್ಲಿಸಿದರು.
ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷರಾದ ಜೆನೆಟ್ ಬಾರ್ಬೊಜಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅದ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಉಡುಪಿ ಧರ್ಮಪ್ರಾಂತ್ಯದ ಭಾರತೀಯ ಕೆಥೊಲಿಕ್ ಯುವಸಂಚಾಲನ ಇದರ ಅಧ್ಯಕ್ಷರಾದ ಡಿಯೋನ್ ಡಿಸೋಜಾ, ಕರ್ನಾಟಕ ರಾಜ್ಯ ಕ್ರೈಸ್ತ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟ (ಇಫ್ಕಾ) ಉಡುಪಿ ಜಿಲ್ಲೆ ಇದರ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಧರ್ಮಪ್ರಾಂತ್ಯದ ಪರವಾಗಿ ಭಾಗವಹಿಸಿ ಮೃತ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿದರು. ಅಲ್ಲದೆ ಮೇಣದ ಬತ್ತಿಗಳನ್ನು ಉರಿಸಿವುದರ ಮೂಲಕ ಮೃತ ಹುತಾತ್ಮರ ಆತ್ಮಗಳಿಗೆ ಶಾಂತಿ ಕೋರಿದರು.
ಇದೇ ವೇಳೆ ಉಡುಪಿಯ ನಿವೃತ್ತ ಎಸ್ ಐ ರೊಸಾರಿಯೊ ಡಿಸೋಜಾ ಕೂಡ ಮೃತ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬಾಂಬ್ ಸ್ಪೋಟವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೋ ತೀವ್ರವಾಗಿ ಖಂಡಿಸಿದ್ದಾರೆ.