ರಕ್ತದಾನದ ಅವಕಾಶ ಸಿಗುವುದೇ ಒಂದು ಪುಣ್ಯ – ಮೀನಾಕ್ಷಿ ಮಾಧವ ಬನ್ನಂಜೆ
ಉದ್ಯಾವರ: ರಕ್ತದಾನ ಮಾಡುವುದು ಒಂದು ಪುಣ್ಯದ ಕೆಲಸ ಹೌದು, ಆದರೆ ರಕ್ತದಾನ ಮಾಡುವ ಅವಕಾಶ ಸಿಗುವುದೇ ಒಂದು ಪುಣ್ಯ, ಏಕೆಂದರೆ ಇಂದಿನ ಆಧುನಿಕ ಯುಗದಲ್ಲಿ ನಮ್ಮ ಬದಲಾದ ಜೀವನ ಶೈಲಿಯಲ್ಲಿ ರಕ್ತದಾನ ಮಾಡುವಷ್ಟು ನಮ್ಮ ಆರೋಗ್ಯ ಉಳಿಸಿ ಕೊಳ್ಳುವುದು ಬಹಳ ಕಷ್ಟದ ಕೆಲಸ.ಅಧಿಕ ರಕ್ತದ ಒತ್ತಡ, ಮಧುಮೇಹ. ಹಿಮೋಗ್ಲೋಬಿನ್ ನ ಕೊರತೆ ಅಥವಾ ಬೇರೆ ಕಾಯಿಲೆಗಾಗಿ ಚಿಕಿತ್ಸೆ ಪಡೆಯುವ ಯಾರು ಕೂಡಾ ರಕ್ತಾದಾನ ಮಾಡಲು ಸಾಧ್ಯವಿಲ್ಲ, ಹಾಗಾಗಿ ರಕ್ತದಾನ ಮಾಡುವ ಅವಕಾಶ ಸಿಗುವುದೇ ಪುಣ್ಯ, ಎಂದು ಉಡುಪಿ ನಗರ ಸಭೆಯ ಅಧ್ಯಕ್ಷರಾದಮೀನಾಕ್ಷಿ ಮಾಧವ ಬನ್ನಂಜೆ ಇವರು ಸೇವಾ ಮತ್ತುಉದ್ಯಾವರ ಫೆಂಡ್ಸ್ ಸರ್ಕಲ್ ಆಶ್ರಯದಲಿ, ಉದುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಉದ್ಯಾವರ ಗ್ರಾಮದ ಅಭಿವೃದ್ಧಿಯ ಹರಿಕಾರದ ಮಂಜುನಾಥ ಉದ್ಯಾವರರವರ ನಾಲ್ಕನೇ ಪುಣ್ಯ ತಿಥಿ ಅಂಗವಾಗಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ರಕ್ತದಾನ ಶಿಬಿರ ಉಧ್ಘಾಟಿಸಿ ನುಡಿದರು.
ಅವರು ಮುಂದುವರಿಯುತ್ತಾ ಜನಸೇವೆಯಲ್ಲೇ ತನ್ನ ಬದುಕನ್ನು ಸವೆಸಿದ ಮಂಜುನಾಥ್ ಉದ್ಯಾವರ ರವರ ನೆನಪನ್ನು ರಕ್ತದಾನ ಶಿಬಿರದ ಮೂಲಕ ಮಾಡುತ್ತಿರುವುದು ಅತ್ಯಂತ ಸೂಕ್ತ. ಅದಕ್ಕಾಗಿ ಯುಎಫ್ಸಿಯ ಗೆಳೆಯರನ್ನು ಅಭಿನಂದಿಸುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್ ಅವರು ಮಾತನಾಡುತ್ತಾ ಮಂಜುನಾಥ್ ಉದ್ಯಾವರ ಅವರು ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯ ಬಲವರ್ದನೆಗಾಗಿ ಸಂಸ್ಥೆಯ ಮೂಲಕ ನಿರಂತರವಾಗಿ ಹಮ್ಮಿ ಕೊಂಡ ಈ ಶಿಬಿರ ಅವರ ಕಾಲಾ ನಂತರ ಅವರ ಪುಣ್ಯ ತಿಥಿಗೆ ಆಯೋಜಿಸುತ್ತೇವೆ, ಇದು ನಾವು ಆಗಲಿದ ಚೇತನಕ್ಕೆ ನಾವು ಕೊಡುವ ಗೌರವವಾಗಿದೆ ಎಂದರು,ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥರಾ ಡಾ. ಶಶಿಕುಮಾರ್ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್, ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯು. ಆರ್. ಚಂದ್ರಶೇಖರ್ ಸ್ವಾಗತಿಸಿದರು, ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ತಿಲಕ್ರಾಜ್ ಸಾಲ್ಯಾನ್ ವಂದಿಸಿದರು . ಸದಸ್ಯ ಅನೂಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.