Home Mangalorean News Kannada News ರಕ್ಷಾ ಸಾವಿನ ಸಿಓಡಿ ತನಿಖೆ ಆರಂಭ – ಡಿಜಿಪಿ ಪ್ರವೀಣ್ ಸೂದ್

ರಕ್ಷಾ ಸಾವಿನ ಸಿಓಡಿ ತನಿಖೆ ಆರಂಭ – ಡಿಜಿಪಿ ಪ್ರವೀಣ್ ಸೂದ್

Spread the love

ರಕ್ಷಾ ಸಾವಿನ ಸಿಓಡಿ ತನಿಖೆ ಆರಂಭ – ಡಿಜಿಪಿ ಪ್ರವೀಣ್ ಸೂದ್

ಉಡುಪಿ: ಇತ್ತೀಚೆಗೆ ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ಬಿಜೆಪಿ ನಾಯಕರ ಪತ್ನಿ ರಕ್ಷಾ ಸಾವಿನ ತನಿಖೆ ಸಿಓಡಿ ನೀಡಲಾಗಿದ್ದು ಅದರ ತನಿಖೆ ಈಗಾಗಲೇ ಆರಂಭವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.

ಅವರು ಮಂಗಳವಾರ ಉಡುಪಿ ಎಸ್ಪಿ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ಸಭೆಯ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ರಕ್ಷಾ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಒಡಿ ನೀಡಲಾಗಿದ್ದು ಸಿಓಡಿ ತನಿಖೆಯನ್ನು ನಡೆಸುತ್ತಿದೆ. ತನಿಖೆಯ ಹಂತದಲ್ಲಿ ನಾವು ಅವರಿಗೆ ಏನು ಕೇಳೊದಿಲ್ಲ ಮತ್ತು ಕೇಳಲು ಬಾರದು ಅದರ ಬಗ್ಗೆ ಮಾತನಾಡಲೂ ಬಾರದು. ತನಿಖೆಯ ಮುಖ್ಯ ವಿಚಾರ ಕೂಡ ಅದೇ. ತನಿಖೆಯ ಹಂತದಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಅದರ ಬಗ್ಗೆ ಮಾತನಾಡಬಾರದು. ಗೃಹ ಸಚಿವರ ತನಿಖೆಗೆ ಆದೇಶ ನೀಡಿದ ಮಾರನೇ ದಿನವೇ ತನಿಖೆ ಆರಂಭವಾಗಿದೆ ಎಂದರು.

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಾ ಸಾವಿನ ತನಿಖೆಯನ್ನು ಶೀಘ್ರವಾಗಿ ಮಾಡಬೇಕು ಎಂದು ಒತ್ತಾಯ ಮಾಡಿ #ಜಸ್ಟಿಸ್ ಫಾರ್ ರಕ್ಷಾ(# justice for raksha ) ಎಂಬ ಟ್ವಿಟರ್ ಅಭಿಯಾನ ಕೂಡ ನಡೆಯುತ್ತಿದೆ.


Spread the love

Exit mobile version