ರಮಝಾನ್ ತಿಂಗಳಲ್ಲಿ ಮಸೀದಿ-ದರ್ಗಾಗಳಲ್ಲಿ ಇಫ್ತಾರ್ ಕೂಟ, ತರಾವೀಹ್ ನಮಾಝ್‌ಗೆ ನಿರ್ಬಂಧ :ಸಿಂಧೂ ಬಿ ರೂಪೇಶ್
ಮಂಗಳೂರು: ಕೊರೋನ ವೈರಸ್ ತಡೆಗಟ್ಟಲು ಸರಕಾರ ಮತ್ತು ರಾಜ್ಯ ವಕ್ಫ್ ಮಂಡಳಿಯು ನೀಡಿದ ನಿರ್ದೇಶನದಂತೆ ಮುಂಜಾಗ್ರತಾ ಕ್ರಮವಾಗಿ ರಮಝಾನ್ ತಿಂಗಳಲ್ಲಿ ಮಸೀದಿ-ದರ್ಗಾಗಳಲ್ಲಿ ಇಫ್ತಾರ್ ಕೂಟ, ಸಾಮೂಹಿಕ ನಮಾಝ್, ತರಾವೀಹ್ ನಮಾಝ್ ಮತ್ತು ಶುಕ್ರವಾರದ ಜುಮಾ ನಮಾಝನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ಯಾರೂ ಕೂಡ ಮಸೀದಿಗಳಲ್ಲಿ ಸಾಮೂಹಿಕ ನಮಝ್ ಮಾಡದೆ ತಮ್ಮ ಮನೆಗಳಲ್ಲೇ ನಮಾಝ್ ಮಾಡಬೇಕು ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.
ಮಸೀದಿಗಳಲ್ಲಿ ಆಝಾನ್ ಕೂಗುವ ಮುಅದ್ಸಿನ್ ಮತ್ತು ಪೇಶ್ ಇಮಾಮ್ ಮತ್ತು ಮಸೀದಿಯ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ನಮಾಝ್ ಮಾಡುವಂತಿಲ್ಲ. ಅಲ್ಲದೆ ನೆರೆಮನೆಯವರನ್ನು ಸೇರಿಸಿಕೊಂಡು ಯಾವುದೇ ಸಾಮೂಹಿಕ ನಮಾಝನ್ನು ಕೂಡ ಯಾರದೇ ಮನೆಯಲ್ಲಿ ನಿರ್ವಹಿಸಬಾರದು. ಎಲ್ಲರೂ ಸುರಕ್ಷಿತ ಅಂತರ ಕಾಪಾಡಿಕೊಂಡು ಸರಕಾರ, ವಕ್ಫ್ ಮಂಡಳಿ, ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸಲು ಮಸೀದಿಗಳ ಆಡಳಿತ ಸಮಿತಿ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.