Home Mangalorean News Kannada News ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ವತಿಯಿಂದ ಗೂಡು ದೀಪ ಸ್ಪರ್ಧೆ

ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ವತಿಯಿಂದ ಗೂಡು ದೀಪ ಸ್ಪರ್ಧೆ

Spread the love

ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ವತಿಯಿಂದ ಗೂಡು ದೀಪ ಸ್ಪರ್ಧೆ

ಉಡುಪಿ: ದೀಪಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ವತಿಯಿಂದ ಉಭಯ ಜಿಲ್ಲಾ ಮಟ್ಟದ ಗೂಡುದೀಪಗಳ ಸ್ಪರ್ಧೆಯನ್ನು ಅಕ್ಟೋಬರ್ 27 ರಂದು ಬೋರ್ಡ್ ಶಾಲಾ ಮೈದಾನ (ಕರ್ನಾಟಕ ಪಬ್ಲಿಕ್ ಸ್ಕೂಲ್) ಪಡುಬಿದ್ರಿಯಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.

ಸ್ಪರ್ಧೆಗಳು ಎರಡು ವಿಭಾಗಗಳಲ್ಲಿ ಸಾಂಪ್ರದಾಯಿಕ ಗೂಡುದೀಪ ಹಾಗೂ ಆಧುನಿಕ ಗೂಡು ದೀಪ ನಡೆಯಲಿದ್ದು ಎಲ್ಲಾ ವಿಭಾಗಳಲ್ಲಿ ಪ್ರತ್ಯೇಕ ಬಹುಮಾನಗಳಿರುತ್ತವೆ. ಅಕ್ಟೋಬರ್ 27 ರಂದು ಬೋರ್ಡ್ ಶಾಲಾ ಮೈದಾನ (ಕರ್ನಾಟಕ ಪಬ್ಲಿಕ್ ಸ್ಕೂಲ್) ಪಡುಬಿದ್ರಿಯಲ್ಲಿ ಸಂಜೆ 6 ಗಂಟೆಗೆ ಪ್ರದರ್ಶನ ನಡೆಯಲಿದೆ.

ಗೂಡುದೀಪ ಸ್ಪರ್ಧೆಯ ನಿಯಮಾವಳಿಗಳು

  1. ಸಾಂಪ್ರದಾಯಿಕ ಮತ್ತು ಅಧುನಿಕ ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿರುವುದು.
  2. ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ನಗದು ,ಶ್ವಾಶತ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
  3. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
  4. ಅಕ್ಟೋಬರ್ 27 ರಂದು ಸಂಜೆ 5:00 ಗಂಟೆಗೆ ತಮ್ಮ ಗೂಡುದೀಪದೊಂದಿಗೆ ಶಾಲಾ ಮೃೆದಾನದಲ್ಲಿ ಹಾಜರಿರ ತಕ್ಕದು.
  5. ಎಲ್ಲಾ ಗೂಡುದೀಪಗಳಿಗೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಿ ಕೂಡಲಾಗುವುದು.
  6. ಸ್ಪರ್ಧಾಳುಗಳು ಸ್ಪರ್ಧೆಗೆ ಸಂಬಂಧ ಪಟ್ಟ ಪರಿಕರಗಳನ್ನು ತಾವೇ ತರತಕ್ಕದ್ದು.
  7. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಲು ಅಕ್ಟೋಬರ್ 25 ಕೊನೆಯ ದಿನಾಂಕವಾಗಿದ್ದು ದೂರವಾಣಿ ಸಂಖ್ಯೆ: 7090460951ಕ್ಕೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


Spread the love

Exit mobile version