ರಾಜಕೀಯಕ್ಕಾಗಿ ಹಿಂದುತ್ವದ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ : ಯಶಪಾಲ್ ಸುವರ್ಣ

Spread the love

ರಾಜಕೀಯಕ್ಕಾಗಿ ಹಿಂದುತ್ವದ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ : ಯಶಪಾಲ್ ಸುವರ್ಣ

ಕರಾವಳಿ ಹಿಂದುತ್ವದ ಭದ್ರನೆಲೆ ರಾಜಕೀಯಕ್ಕಾಗಿ ಹಿಂದುತ್ವದ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಕಾರ್ಯಕರ್ತರ ಜೊತೆ ನಿಲ್ಲಲು ನಾನು ಸದಾಕಾಲಕ್ಕೂ ಸಿದ್ಧ ಎಂದು ಹಿಂದೂ ಮುಖಂಡ ಯಶಪಾಲ್ ಸುವರ್ಣ ಹೇಳಿದ್ದಾರೆ.

ಕೋರೋನಾ ವೈರಸ್ ನಿಯಂತ್ರಣ ಮೀರಿ ಹರಡಲು ದಿಲ್ಲಿಯ ನಿಜಾಮುದ್ದೀನ್ ಪ್ರಕರಣವೇ ಕಾರಣ ಎಂದು ದೇಶದ ಉನ್ನತ ತನಿಖಾ ಸಂಸ್ಥೆಗಳೇ ಒಪ್ಪಿಕೊಂಡಿವೆ. ಅಂತ ಸಮಾಜಘಾತುಕ ಶಕ್ತಿಗಳ ವಿರುದ್ಧ ಮಾತನಾಡಿದರೆ ಯಾವುದಾದರೂ ಒಂದು ಸಮುದಾಯಕ್ಕೆ ಯಾಕೆ ನೋವಾಗಬೇಕು. ಆ ಸಮುದಾಯದ ಯಾವುದೇ ವ್ಯಕ್ತಿಗಳು ಮುಂದೆ ಬಂದು ನಿಜಾಮುದ್ದೀನ್ ಘಟನೆಯನ್ನು ಖಂಡಿಸಿದ ಉದಾಹರಣೆಗಳಿಲ್ಲ. ನರ್ಸ್, ವೈದ್ಯರು, ಪೊಲೀಸ್, ಆಶಾ ಕಾರ್ಯಕರ್ತೆಯರ ಜೊತೆ ಕೆಟ್ಟದಾಗಿ ವರ್ತಿಸುವವರ ವಿರುದ್ಧ ನಮ್ಮ ಕಾರ್ಯಕರ್ತರು ಧ್ವನಿ ಎತ್ತುತ್ತಿರುವುದರಲ್ಲಿ ನ್ಯಾಯವಿದೆ.

ಇಡೀ ದೇಶವೇ ಕರೋನ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದರೆ ಒಂದು ವರ್ಗದ ಜನರು ಮಾತ್ರ ಸರಕಾರದ ಜೊತೆ ಅಸಹಕಾರ ತೋರುತ್ತಿರುವುದರ ಬಗ್ಗೆ ನಮಗೆ ಆಕ್ರೋಶವಿದೆ. ಸಮಾಜಘಾತುಕರ ವಿರುದ್ಧ ಯಾವ ಸರಕಾರವಿದ್ದರೂ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಪೊಲೀಸರು ವಿನಾಕಾರಣ ಪೂರ್ವಗ್ರಹಪೀಡಿತರಾಗಿ ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ಕಾರ್ಯಕರ್ತರ ಜೊತೆ ಯಾವ ಹಂತದವರೆಗೂ ನಿಲ್ಲಲು ನಾನು ಸಿದ್ಧ ಎಂದು ಯಶ್ಪಾಲ್ ಸುವರ್ಣ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love