ದೆಹಲಿ ಕರ್ನಾಟಕ ಸಂಘದ ಸಾಂಸ್ಕøತಿಕ ಸಮುಚ್ಚಯದದಶಮಾನೋತ್ಸವ ಸಂಭ್ರಮದ ಅಂಗವಾಗಿ ಕೊಡವ-ಅರೆ ಭಾಷೆಗಳ ಸಂಭ್ರಮಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಾನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆಯವರು ಅರೆಭಾಷೆ-ಕೊಡವ ಸಮುದಾಯಗಳ ಕುರಿತು ಮಾತನಾಡುತ್ತ, ಅರೆಭಾಷೆ ನನ್ನ ಮಾತೃಭಾಷೆ. ಮೊತ್ತ ಮೊದಲ ಬಾರಿಗೆದೆಹಲಿ ಕರ್ನಾಟಕ ಸಂಘದಲ್ಲಿಅರೆಭಾಷೆಯ ಬಗ್ಗೆ ಕಾರ್ಯಕ್ರಮ ನಡೆಯುವುದನ್ನು ಕೇಳಿ ಸಂತೋಷಗೊಂಡು ಬಂದಿದ್ದೇನೆಎಂದರು. ದೇಶದ ರಾಜಧಾನಿಯಲ್ಲಿ ಅದೂ ದೆಹಲಿ ಕರ್ನಾಟಕ ಸಂಘದಲ್ಲಿ ಇದು ಪ್ರಪ್ರಥಮ ಕಾರ್ಯಕ್ರಮವಾಗಿದೆ. ಇದನ್ನು ಆಯೋಜಿಸಿದ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆಯವರನ್ನು ಅಭಿನಂದಿಸುತ್ತೇನೆ.
ಕೊಡವ ಮತ್ತುಅರೆಭಾಷೆಯಲ್ಲಿಕೊಡವ ಭಾಷೆತುಂಬಾ ಪ್ರಾಚೀನವಾದುದು, ದ್ರಾವಿಡ ಭಾಷೆಯಿಂದ ತಮಿಳು, ಕನ್ನಡ, ತೆಲುಗು, ಮಲಯಾಳಂ ಬೇರೆಯಾಗಿ ಹಾಗೂ ಅನೇಕ ಭಾಷೆಗಳು ಬೇರೆಯಾಗುವ ಸಂದರ್ಭದಲ್ಲಿ ಸುಮಾರುಕ್ರಿ.ಪೂ. 3-4ನೇ ಶತಮಾನದಷ್ಟೊತ್ತಿಗೆ ಮೂಲ ದ್ರಾವಿಡ ಭಾಷೆಯಿಂದ ಬೇರೆಯಾಗಿಕೊಡವ ಭಾಷೆಒಂದು ಸ್ವತಂತ್ರ ಭಾಷೆಯಾಗಿ ಬೆಳೆಯಿತು.ದ್ರಾವಿಡ ಭಾಷಾ ವರ್ಗದಲ್ಲಿ ಮೂರು ಗುಂಪುಗಳಿವೆ. ಉತ್ತರದ್ರಾವಿಡ ಭಾಷೆ, ಮಧ್ಯದ್ರಾವಿಡ ಭಾಷೆ ಮತ್ತುದಕ್ಷಿಣದ್ರಾವಿಡ ಭಾಷೆ. ದಕ್ಷಿಣದ್ರಾವಿಡ ಭಾಷೆಯಲ್ಲಿ ತಮಿಳು, ಮಲಯಾಳಂ, ಕನ್ನಡ ಮತ್ತು ತುಳು ಬರುತ್ತದೆ. ಮಧ್ಯದ್ರಾವಿಡ ಭಾಷೆಯಲ್ಲಿತೆಲುಗು, ಕೊಂಡ, ಕದಬ, ಕೊಡವ ಬರುತ್ತದೆ.ಉತ್ತರದ್ರಾವಿಡ ಕಾಶ್ಮೀರದಲ್ಲಿ ಬ್ರಾಹೀ, ಕಾಂದಹಾರದವರೆಗೆಹಬ್ಬಿಕೊಂಡಿದೆ.ಅದು ನಮ್ಮ ಭಾಷಾ ವಲಯದಲ್ಲಿದ್ದರೂಅದು ಕಾಶ್ಮೀರದಲ್ಲಿದೆ.ಅನೇಕ ಶಬ್ದಗಳು ಕಣ್ಣು, ಕೈ, ಕಾಲು, ಅಣ್ಣ-ತಮ್ಮ ಈ ಎಲ್ಲಾ ಶಬ್ಧಗಳು ಕಾಶ್ಮೀರದಲ್ಲಿ ದೊರಕುವ ಬ್ರಾಹೀ ಭಾಷೆಯಲ್ಲಿಕೂಡಾಇದೆ.
ವಿದ್ವಾಂಸರ ಪ್ರಕಾರಕೊಡವ ಮಧ್ಯದ್ರಾವಿಡ ಭಾಷೆಆದರೆಅದುಇರುವುದುದಕ್ಷಿಣದ್ರಾವಿಡ ಭಾಷೆಗಳ ಜೊತೆಗೆ.ಇದು ಹೇಗಾಯಿತುಎಂಬುದರ ಬಗೆಗೆ ವಿದ್ವಾಂಸರುಇನ್ನೂ ಬೆಳಕು ಚೆಲ್ಲುತ್ತಲೇಇದ್ದಾರೆ.ಇಡೀದ್ರಾವಿಡ ಭಾಷಾ ವರ್ಗದಲ್ಲಿ ವಿಶಿಷ್ಟವಾದ ಶಕ್ತಿರೂಪವಾದ ಸ್ವತಂತ್ರ ಭಾಷೆತನ್ನದೇಆದ ಪರಂಪರೆಯನ್ನು ಹೊಂದಿರುವಅತ್ಯಂತ ಶ್ರೀಮಂತವಾದ ಭಾಷೆಕೊಡವ ಭಾಷೆ. ಇಷ್ಟು ಶ್ರೀಮಂತವಾದ ಪರಂಪರೆಅರೆ ಭಾಷೆಗಿಲ್ಲ. ಅರೆಭಾಷೆ ಸುಳ್ಯ ಪರಿಸರದಗೌಡರು ಮಾತನಾಡುವ ಭಾಷೆಇದು.ಕೊಡವ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸಇದ್ದರೆ, ಅರೆ ಭಾಷೆಗೆ ಸುಮಾರು 500 ವರ್ಷಗಳ ಇತಿಹಾಸ ಇದೆ. ಅರೆ ಭಾಷೆಕನ್ನಡದಉಪಭಾಷೆ. ಅರೆಭಾಷೆಗೆ ಅಕಾಡೆಮಿಆಗಿರುವುದು ಅರೆಭಾಷಿಗರ ಭಾಗ್ಯಎಂದರು.
ನಮ್ಮ ಮುಂದಿನ ಜನಾಂಗಕನ್ನಡ ಮಾತನಾಡುವುದನ್ನುಕಡಿಮೆ ಮಾಡಿದ್ದಾರೆ. ಎಲ್ಲಕೊಡವ, ಕನ್ನಡ ಮತ್ತು ತುಳು ಸಮುದಾಯದವರುಕನ್ನಡವನ್ನುಕಲಿತುಕರ್ನಾಟಕ ನಮ್ಮದುಎಂದು ಹೇಳುವಂತಹ ಗೌರವವನ್ನು ಸೂಚಿಸಲು ಪ್ರಯತ್ನ ಮಾಡಬೇಕು.ಕರ್ನಾಟಕದಲ್ಲಿಎಲ್ಲಿಓಡಾಡಿದರೂಕನ್ನಡದಲ್ಲಿ ಮಾತನಾಡಲು ಸಶಕ್ತರಾಗಿರಬೇಕು.ಕೇಂದ್ರ ಸರ್ಕಾರಹಾಗೂ ರಾಜ್ಯ ಸರ್ಕಾರ ಈ ಪ್ರಾದೇಶಿಕ ಭಾಷೆಗಳಿಗೆ ಸರಿಯಾದ ಮಾನ್ಯತೆಕೊಟ್ಟು ಆ ಭಾಷೆಗಳನ್ನು ಪ್ರಾದೇಶಿಕವಾಗಿ ಬೆಂಬಲಿಸಬೇಕೆಂದು ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಕರೆ ನೀಡಿದರು.
ಸಮಾರಂಭದಅಧ್ಯಕ್ಷತೆಯನ್ನು ವಹಿಸಿದ ಮಾಚಿಮಂಡಕಾರ್ಯಪ್ಪಅಪ್ಪಯ್ಯಅವರು ಈ ಕೊಡವ-ಅರೆ ಭಾಷೆಗಳ ಸಂಭ್ರಮವನ್ನುಅಚರಿಸಲು ವೇದಿಕೆಯನ್ನು ಒದಗಿಸಿಕೊಟ್ಟ ದೆಹಲಿ ಕರ್ನಾಟಕ ಸಂಘಕ್ಕೆ ಧನ್ಯವಾದಗಳನ್ನರ್ಪಿಸಿದರು.ಕಡಿಮೆ ದಿನಗಳಲ್ಲಿ ತಯಾರಿ ನಡೆಸಿ ಕಾರ್ಯಕ್ರಮ ನೀಡಿದದೆಹಲಿ ಕೊಡವ ಸಮಾಜದ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು. ಈ ರೀತಿ ರಾಜ್ಯದ ಎಲ್ಲಾ ಭಾಷೆಗಳ ಕಾರ್ಯಕ್ರಮವನ್ನು ದೆಹಲಿ ಕರ್ನಾಟಕ ಸಂಘ ಆಯೋಜಿಸುತ್ತಿರುವುದು ಒಂದು ಹೊಸ ಆರೋಗ್ಯಕರ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನುಕಾರ್ಯಕಾರಿ ಸಮಿತಿಯ ಸದಸ್ಯ ಟಿ.ಪಿ.ಬೆಳ್ಳಿಯಪ್ಪ ನಿರೂಪಿಸಿದರು. ಕೋಶಾಧಿಕಾರಿಡಾ.ವೈ.ಅವನೀಂದ್ರನಾಥ್‍ರಾವ್ ವಂದನಾರ್ಪಣೆ ಸಲ್ಲಿಸಿದರು.
ದೆಹಲಿ ಕೊಡವ ಸಮಾಜದ ಸ್ಥಳೀಯ ಕಲಾವಿದರಾದಕರೆಯಂಡರಿಯಾಅವರಿಂದ ಭರತನಾಟ್ಯ ಮತ್ತು ಜಯಶ್ರೀನಿವಾಸ ಅವರು ಸೋಬಾನೆ ಹಾಡುಗಳನ್ನು ಹಾಡಿದರು.