ರಾಜ್ಯ ಕಂಡ ಅತ್ಯಂತ ಕೆಟ್ಟ ಬಜೆಟ್: ಮಟ್ಟಾರ್ ರತ್ನಾಕರ ಹೆಗ್ಡೆ

Spread the love

ರಾಜ್ಯ ಕಂಡ ಅತ್ಯಂತ ಕೆಟ್ಟ ಬಜೆಟ್: ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಂಡಿಸಿದ 2018-19 ರ ಸಾಲಿನ ರಾಜ್ಯದ ಬಜೆಟ್ ರಾಜ್ಯದ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದು, ಬಹುತೇಕ ಕರ್ನಾಟಕವನ್ನು ಮತ್ತು ಕರಾವಳಿ ಭಾಗವನ್ನು ಪೂರ್ಣವಾಗಿ ನಿರ್ಲಕ್ಷಿಸಿದ ಅತ್ಯಂತ ಕೆಟ್ಟ ಬಜೆಟ್ ಇದಾಗಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಬಜೆಟ್ ಕೇವಲ ಹಾಸನ, ಮಂಡ್ಯ, ತುಮಕೂರು, ರಾಮನಗರ ಮತ್ತು ಭಾಗಶ: ಮೈಸೂರು ಜಿಲ್ಲೆಗಳಿಗೆ ಸಂಬಂಧಿಸಿದ ಬಜೆಟಾಗಿದ್ದು, ಮುಖ್ಯಮಂತ್ರಿಯವರು ತಾನು ಆ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ ಎಂಬುವುದಾಗಿ ತನ್ನನ್ನು ತಾನು ಸೀಮಿತಗೊಳಿಸಿದ್ದಾರೆ. ಕರಾವಳಿ ಜಿಲ್ಲೆಗಳ ಮೇಲೆ ಮುಖ್ಯಮಂತ್ರಿ ತಮ್ಮ ದ್ವೇಷ ಭಾವನೆಯನ್ನು ಹೊಂದಿದ್ದಾರೆ ಎಂಬುವುದನ್ನು ದೃಢಪಡಿಸಿದ್ದಾರೆಂದು ತಿಳಿಸಿರುವ ಮಟ್ಟಾರ್, ಡಿಸೇಲ್ ಮತ್ತು ಪೇಟ್ರೋಲ್‍ನ ಸೆಸ್ ಏರಿಸುವುದರ ಮುಖಾಂತರ ಬಡವರು ಮತ್ತು ಮಧ್ಯಮ ವರ್ಗದವರನ್ನು ವಂಚಿಸಲಾಗಿದೆ. ರೈತರನ್ನು ಮತ್ತು ಮೀನುಗಾರರನ್ನು ಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ದೇಶದ ರಾಜಕೀಯಕ್ಕೆ ಕನ್ನಡಿಯಂತಾಗಿರುವ ಬಜೆಟ್ ಇದಾಗಿದೆ. ಕರಾವಳಿ ಭಾಗದ ಜನಪ್ರತಿನಿಧಿಗಳು ರಾಜಕೀಯ ಮರೆತು ಇದರ ವಿರುದ್ಧ ಬಿದಿಗಿಳಿದು ಹೋರಾಟ ನಡೆಸುವಂತಹ ದೌರ್ಭಾಗ್ಯ ನಮ್ಮದಾಗಿದೆ ಎಂದು ಮಟ್ಟಾರ್ ಹೇಳಿದ್ದಾರೆ.


Spread the love