Home Mangalorean News Kannada News ರಾಜ್ಯ ಸರಕಾರದ ತೈಲ, ವಿದ್ಯುತ್ ಬೆಲೆ ಎರಿಕೆ ಖಂಡಿಸಿ, ಉಡುಪಿಯಲ್ಲಿ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ

ರಾಜ್ಯ ಸರಕಾರದ ತೈಲ, ವಿದ್ಯುತ್ ಬೆಲೆ ಎರಿಕೆ ಖಂಡಿಸಿ, ಉಡುಪಿಯಲ್ಲಿ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ

Spread the love

ರಾಜ್ಯ ಸರಕಾರದ ತೈಲ, ವಿದ್ಯುತ್ ಬೆಲೆ ಎರಿಕೆ ಖಂಡಿಸಿ, ಉಡುಪಿಯಲ್ಲಿ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ

ಉಡುಪಿ: ರಾಜ್ಯ ಸರ್ಕಾರವು ಪೆಟ್ರೋಲ್, ಡೀಸಲ್, ವಿದ್ಯುತ್ ದರ ಏರಿಸಿದನ್ನು ಖಂಡಿಸಿ ಹಾಗೂ ಬಜೆಟಿನಲ್ಲಿ ಕರಾವಳಿ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಿದರ ವಿರುದ್ಧವಾಗಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಇತರ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಮಂಗಳವಾರ ನಗರದ ಕವಿ ಮುದ್ದಣ ಮಾರ್ಗದಲ್ಲಿ ವಿನೂತನ ರೀತಿಯಲ್ಲಿ ಅಣಕು ಪ್ರದರ್ಶನ ಮೆರವಣಿಗೆ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ಖಂಡನಾ ಘೋಷವಾಕ್ಯಗಳ ಫಲಕ ಹಿಡಿದು, ತಮಟೆ ವಾದ್ಯದೊಂದಿಗೆ ಹಳೆ ಡಯಾನ ವೃತ್ತದಲ್ಲಿ ಚಾಲನೆ ಪಡೆದ ಮೆರವಣಿಗೆ ಕವಿ ಮುದ್ದಣ ಮಾರ್ಗ ಮೂಲಕ ಸಾಗಿ, ಗಡಿಯಾರ ಗೋಪುರದ ಬಳಿ ತಿರುವು ಕಂಡು, ಆ ಮೂಲಕ ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ಸಮಾಪನ ಪಡೆಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಇಂಧನ ಬೆಲೆ ಏರಿಕೆ ಖಂಡಿಸಿ ಮಾತನಾಡಿದರು. ಆದಷ್ಟು ಬೇಗ ರಾಜ್ಯ ಸರಕಾರವು ಇಂಧನ ಬೆಲೆ ಇಳಿಸುವಂತೆ ಸರಕಾರವನ್ನು ಎಚ್ಚರಿಸಿದರು.

ಇಂಧನ ಬೆಲೆ ಎರಿಕೆ ಪರಿಣಾಮ ನಾಳೆಯ ದಿನಗಳಲ್ಲಿ ದಿನ ನಿತ್ಯದ ದಿನಬಳಕೆ ವಸ್ತುಗಳ ದರ ಎರುತ್ತದೆ. ಸಾರಿಗೆ ಪ್ರಯಾಣ ದರವು ಎರುತ್ತದೆ. ಹಾಗಾಗಿ ಸೈಕಲ್ ರಿಕ್ಷಾ, ಎತ್ತಿನ ಗಾಡಿಯಲ್ಲಿ ಜನರು ಸಂಚರಿಸುವ ಪರಿಸ್ಥಿತಿ ಬರಬಹುದು ಎನ್ನುವ ಅಣುಕು ಪ್ರದರ್ಶನವನ್ನು ಸೈಕಲ್ ರಿಕ್ಷಾ, ಎತ್ತಿನ ಗಾಡಿಯ ಮೂಲಕ ಮರೆವಣಿಗೆಯಲ್ಲಿ ಸಾಗಿಬಂದು ತೋರಿಸಿದರು.

ವಿದ್ಯುತ್ ದರ ಎರಿಕೆಯಿಂದ ಬಡವರು ಸೀಮೆಎಣ್ಣೆ ಲಾಟೀನು ಬಳಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೆಂಕಿ ಹೊತ್ತಿಸಿದ ಲಾಟೀನು ತೊರ್ಪಡಿಸಿದರು. ಸರಕು ಸಾಗಟ ದರ ಹೆಚ್ಚಳ ಕಂಡರೆ ಸರಕು ಸಾಗಟಕ್ಕೆ ಕೈಗಾಡಿ ಬಳಸುವ ಪರಿಸ್ಥಿತಿ ಬರಬಹುದೆಂದು ಪ್ರತಿಭಟನಾ ಕಾರರು ಕೈಗಾಡಿಯನ್ನು ರಸ್ತೆಯಲ್ಲಿ ದೂಡಿ ಕೊಂಡು ಬಂದಿದ್ದಾರೆ. ಈ ಮೊದಲು ನೀಡುತ್ತಿದ್ದ ಅನ್ನಭಾಗ್ಯದ 7 ಕೆ.ಜಿ ಅಕ್ಕಿಯನ್ನು ಬಳಕೆದಾರರಿಗೆ ಮನೆಗೆ ಸಾಗಿಸಲು ಭಾರ ಆಗುತ್ತದೆ ಎನ್ನುವ ಕಾರಣದಿಂದ ಸರಕಾರ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿದ ಹಾಸ್ಯಸ್ಪದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ನಾವು ಬಲಶಾಲಿಗಳು ನಮಗೆ ಭಾರಹೊರುವ ಶಕ್ತಿ ಇದೆ ಎಂದು 25 ಕೆ.ಜಿ ಚೀಲದ ಅಕ್ಕಿ ಮೂಟೆಗಳನ್ನು ತಲೆಮೇಲೆ ಹೊತ್ತು 2 ಕಿ.ಮೀ ದೂರ ಸಾಗಿದ್ದಾರೆ. ಆ ಮೂಲಕ ತಮ್ಮಲ್ಲಿ ಭಾರಹೊರುವ ಶಕ್ತಿ ಇದೆ ಎಂದು ಅಣಕಿಸಿದ್ದಾರೆ.

ಪ್ರತಿಭಟನೆಯಲ್ಲಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ರಾಜೇಶ್ ಕಾಪು, ವಿನಯಚಂದ್ರ ಸಾಸ್ತಾನ, ರಿಕ್ಷಾ ಚಾಲಕರು, ಟೆಂಪೊ ಚಾಲಕರು, ದರ್ಜಿಗಳು, ಚಿತ್ತರಂಜನ್ ಸರ್ಕಲ್ ಕೂಲಿಕಾರ್ಮಿಕರ ಬಳಗ, ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.


Spread the love

Exit mobile version