ರಾಣೆಬೆನ್ನೂರಿನಲ್ಲಿ ಅನಂತಕುಮಾರ್ ಹೆಗಡೆ ಬೆಂಗಾವಲು ಕಾರಿಗೆ ಲಾರಿ ಡಿಕ್ಕಿ: ಹತ್ಯೆಗೆ ಯತ್ನ ಎಂದು ಆರೋಪಿಸಿದ ಸಚಿವ?
ಬೆಂಗಳೂರು: ಬುಧವಾರ ರಾತ್ರಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಅಪಘಾತದಿಂದ ಪಾರಾದ ಘಟನೆ ನಡೆದಿದೆ.
ಕಾರಿನಲ್ಲಿ ಅವರು ಹೋಗುತ್ತಿದ್ಧಾಗ ಲಾರಿಯೊಂದು ಅವರ ಕಾರಿಗೆ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲಿ ತಪ್ಪಿದೆ. ಆದರೆ, ಕೇಂದ್ರ ಸಚಿವರ ಎಸ್ಕಾರ್ಟ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಒಬ್ಬ ವ್ಯಕ್ತಿಗೆ ಗಾಯವಾಗಿದೆ.
A deliberate attempt on my life seems to have been executed just now. A truck on NH, near Halageri in Ranebennur taluk of Haveri district has hit my escort vehicle which tried to hit my vehicle in the first instance. Since our vehicle was in top speed we escaped the hit. pic.twitter.com/2w8zzq26UU
— Anantkumar Hegde (@AnantkumarH) April 17, 2018
ಶಿರಸಿಯಿಂದ ಬೆಂಗಳೂರಿಗೆ ಅನಂತಕುಮಾರ್ ಹೆಗಡೆ ಕಾರ್ ನಲ್ಲಿ ಬರುತ್ತಿದ್ದಾಗ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಹಲಗೇರಿ ಬಳಿ ಲಾರಿಯೊಂದು ಏಕಾಏಕಿ ಡಿಕ್ಕಿ ಹೊಡೆಯಲು ನೋಡಿದೆ. ಆದ್ರೆ ಸಚಿವರ ಕಾರು 140 ಕಿ.ಮೀ. ಸ್ಪೀಡ್ನಲ್ಲಿದ್ದು, ಕೂದಲೆಳೆ ಅಂತರದಲ್ಲಿ ಪಾಸ್ ಆದ ಕಾರಣ ಹಿಂದೆ ಬರ್ತಿದ್ದ ಬೆಂಗಾವಲು ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ.
However our support staff in the escort vehicle has suffered severe injuries in the form of shoulder fracture. pic.twitter.com/aMm16rNo9r
— Anantkumar Hegde (@AnantkumarH) April 17, 2018
ಬೆಂಗಾವಲು ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದ್ರಲ್ಲಿದ್ದ ಎಎಸ್ಐ ಪ್ರಭು ತಳವಾರ ಕಾಲಿಗೆ ಗಾಯವಾಗಿದೆ. ಕೂಡಲೇ ಬೆಂಗಾವಲು ಸಿಬ್ಬಂದಿ, ಪರಾರಿ ಆಗ್ತಿದ್ದ ಲಾರಿ ಚಾಲಕನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಾರಿ ಚಾಲಕನನ್ನ ನಾಸೀರ್ ಎಂದು ಗುರುತಿಸಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
But unfortunately, our escort vehicle running behind us got hit and one of our staff has been injured seriously with shoulder fracture. The driver named Naser has been caught hold by the localites and seems to be normal without any alcholic hangover. pic.twitter.com/2LJIHVVBLw
— Anantkumar Hegde (@AnantkumarH) April 17, 2018
https://twitter.com/AnantkumarH/status/986309901902204928
ಇಡೀ ಘಟನೆಯ ವಿವರವನ್ನು ಅನಂತಕುಮಾರ್ ಹೆಗಡೆ ಅವರು ತಮ್ಮ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಇದು ಅಪಘಾತವಲ್ಲ, ತಮ್ಮನ್ನ ಕೊಲ್ಲುವ ಉದ್ದೇಶದಿಂದಲೇ ಲಾರಿ ಡಿಕ್ಕಿ ಹೊಡೆದಿದೆ ಎಂದು ಹೆಗಡೆ ಆರೋಪಿಸಿದ್ದಾರೆ.