ರಾತ್ರಿ ವೇಳೆ ಪ್ರೇಯಸಿಯ ಮನೆಗೆ ಬಂದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ!

Spread the love

ರಾತ್ರಿ ವೇಳೆ ಪ್ರೇಯಸಿಯ ಮನೆಗೆ ಬಂದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ!

ಬಂಟ್ವಾಳ: ರಾತ್ರಿ ವೇಳೆ ಪ್ರೇಯಸಿಯ ಮನೆಗೆ ಬಂದ ಯುವಕನಿಗೆ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಸಜಿಪನಡು ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿದೆ. ಮಂಗಳೂರಿನ ಬೆಂಗರೆ ನಿವಾಸಿ ಮಹಮ್ಮದ್ ಮುಸ್ತಫಾ ಹಲ್ಲೆಗೊಳಗಾದ ಯುವಕನಾಗಿದ್ದು ಸಜಿಪನಡುವಿನ ಯುವತಿಯೊಂದಿಗೆ ಪ್ರೇಮದೊಂದಿಗಿದ್ದ ಎನ್ನಲಾಗಿದೆ. ರಾತ್ರಿ ವೇಳೆ ಯುವತಿಯನ್ನು ಭೇಟಿಯಾಗಲು ಹೋದ ಸಂದರ್ಭ ಮುಸ್ತಾಫಾನನ್ನು ಹಿಡಿದು ಅರೆ ಬತ್ತಲೆ ಮಾಡಿ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡುವುದನ್ನು ಕೂಡ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಹಲ್ಲೆಗೊಳಗಾದ ಯುವಕನಿಂದ ಇದೀಗ ಪೋಲೀಸರಿಗೆ ದೂರು ಸಲ್ಲಿಸಲಾಗಿದ್ದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


Spread the love