Home Mangalorean News Kannada News ರಾಮಕೃಷ್ಣ ಮಠದಲ್ಲಿ ಶಕ್ತಿ-2018, ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಾಗಾರ

ರಾಮಕೃಷ್ಣ ಮಠದಲ್ಲಿ ಶಕ್ತಿ-2018, ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಾಗಾರ

Spread the love

ರಾಮಕೃಷ್ಣ ಮಠದಲ್ಲಿ ಶಕ್ತಿ-2018, ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಾಗಾರ

ರಾಮಕೃಷ್ಣ ಮಠವು ಪ್ರತೀವರ್ಷದಂತೆ ಈ ವರ್ಷ “ಶಕ್ತಿ-2018” ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕುರಿತು ಕಾರ್ಯಾಗಾರವನ್ನು ದಿನಾಂಕ 10 ಪೆಬ್ರವರಿ 2018 ರಂದು ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆಯ ತನಕ ಆಯೋಜಿಸಲಾಗಿದೆ. ಸೋದರಿ ನಿವೇದಿತಾರ ಸ್ಮರಣೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಪ್ರಸ್ತುತ ಸಮಾಜದಲ್ಲಿ ಮಹಿಳೆ ಎದುರಿಸುತ್ತಿರುವ ಸವಾಲು ಹಾಗೂ ಪರಿಹಾರಗಳು ಜೊತೆಗೆ ಅಧುನಿಕ ಮಹಿಳೆಯ ಕರ್ತವ್ಯಗಳೇನು? ಎಂಬ ಕುರಿತಂತೆ ಸಂವಾದ, ಗೋಷ್ಟಿಗಳು ಜರುಗಲಿವೆ.

ಮಂಗಳೂರು ಉಪಪೋಲಿಸ್ ಆಯುಕ್ತೆ ಶ್ರೀಮತಿ ಉಮಾ ಪ್ರಶಾಂತ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ಶುಭಾರಂಭಗೊಳಿಸಿ ವಿದ್ಯಾರ್ಥಿನಿಯರನ್ನು ಕುರಿತು ಮಾತನಾಡಲಿದ್ದಾರೆ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಸಾನಿಧ್ಯ ವಹಿಸಿ ಆಶಯ ಭಾಷಣ ಮಾಡಲಿದ್ದಾರೆ. ಲಂಡನ್ ರಾಮಕೃಷ್ಣ ಮಿಷನ್ ವೇದಾಂತ ಸೊಸೈಟಿಯ ಮುಖ್ಯಸ್ಥರಾದ ಸ್ವಾಮಿ ಸರ್ವಸ್ಥಾನಂದಜಿ ಹಾಗೂ ಪ್ರೋ. ರಘೋತ್ತಮ್ ರಾವ್ ಮುಖ್ಯಸ್ಥರು ಮನಸ್ ತರಬೇತಿ ಸಂಸ್ಥೆ ಬೆಂಗಳೂರು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪದವಿ ಕಾಲೇಜಿನ ಸುಮಾರು ಏಳನೂರು ವಿದ್ಯಾರ್ಥಿನಿಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಸುಮಾರು 600 ಪ್ರತಿನಿಧಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 9448353162 ಸ್ವಾಮಿ ಏಕಗಮ್ಯಾನಂದ


Spread the love

Exit mobile version