ಮಂಗಳೂರು : ರಾಮಕೃಷ್ಣ ಮಿಷನ್ ಹಮ್ಮಿಕೊಂಡಿರುವ 40 ವಾರಗಳ “ಸ್ವಚ್ಛ ಮಂಗಳೂರು” ಅಭಿಯಾನದ 17ನೇ ವಾರದ ಸ್ವಚ್ಚತಾ ಕಾರ್ಯವನ್ನು ದಿನಾಂಕ 24-05-2015ರಂದು ನಗರದ ವೆಲೆನ್ಸಿಯ ಪರಿಸರದಲ್ಲಿ ಕೈಗೊಳ್ಳಲಾಯಿತು.
ಮಠದಮುಖ್ಯಸ್ಥರಾದಸ್ವಾಮಿಜಿತಕಾಮಾನಂದಜಿಯವರಉಪಸ್ಥಿತಿಯಲ್ಲಿಕೆನರಾಕಾಲೇಜಿನ ಪೂರ್ವ ಪ್ರಾಚಾರ್ಯರಾದ ಸತೀಶ್ ಭಟ್16ನೇ ಸ್ವಚ್ಛಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು.
ಸ್ವಾಮಿಜಿಯವರು ಹಾಗೂ ಬ್ರಹ್ಮಚಾರಿಗಳು ಬಾಲಕಾಶ್ರಮ ವಿದ್ಯಾರ್ಥಿಗಳ ಜೊತೆಗೂಡಿ ಫಾತಿಮಾ ರಿಟ್ರೀಟ್ ಹೌಸ್ ಎದುರುಗಡೆ ಸ್ವಚ್ಛತಾ ಕೈಂಕರ್ಯ ನಡೆಸಿದರು. ಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶ್ಕಾರ್ಣಿಕ ನೇತೃತ್ವದಲ್ಲಿ ಯುವಾ ಬ್ರೀಗೇಡ್ ನ ಸದಸ್ಯರು ವೆಲೆನ್ಸಿಯ ವೃತ್ತದ ಸುತ್ತಮುತ್ತ ಶುಚಿಗೊಳಿಸಿದರು. ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ಡಿಸೋಜ ಅಭಿಯಾನದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿದರು.
ಇದೇ ವೇಳೆ ಫಾತಿಮಾ ರಿಟ್ರೀಟ್ ಹೌಸ್ ಎದುರಿನ ಬಸ್ ತಂಗುದಾಣವನ್ನು ನವೀಕರಣಗೊಳಿಸುವುದರೊಂದಿಗೆ ವೆಲೆನ್ಸಿಯಾದ ಬಳಿ ಇರುವ ಬಸ್ ತಂಗುದಾಣವನ್ನು ತೊಳೆದು ಶುಚಿ ಗೊಳಿಸಿದರು.
ಅಭಿಯಾನದ ನಿರ್ದೇಶಕ ಶ್ರೀ ರಾಮಕುಮಾರ್ ಬೇಕಲ್, ಶ್ರೀ ನಕ್ರೆ ಸುರೇಂದ್ರ ಶೆಟ್ಟಿಆಶ್ರಮದ ಭಕ್ತರಾದಶ್ರೀಮತಿ ಲತಾಮಣಿರೈ, ಶ್ರೀಮತಿ ಸತ್ಯವತಿ. ಸಮಾಜಸೇವಕಿ ಶ್ರೀಮತಿ ರತ್ನಾ ಆಳ್ವ, ಶ್ರಿ ಮತಿ ಶೀಲಾ, ಯುವಾ ಬ್ರೀಗೇಡ್ ಸದಸ್ಯ ಶ್ರೀ ವಿಕ್ರಮ್, ಸ್ವಚ್ಛ ಮಂಗಳೂರುಸಂಚಾಲಕ ಶ್ರೀದಿಲ್ರಾಜ್ ಆಳ್ವ ಮತ್ತಿvತÀರುಸ್ವಚ್ಛಅಭಿಯಾನದಲ್ಲಿ ಪಾಲ್ಗೊಂಡರು. ಎಂಆರ್ಪಿಲ್ ಈ ಅಭಿಯಾನಕ್ಕೆಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.