ರಾಮಕೃಷ್ಣ ಮಿಷನ್‍ನಲ್ಲಿ ಆಯೋಜಿಸಿದ್ದ ಪ್ರಯುಕ್ತ “ಸ್ವಚ್ಛಗ್ರಾಮ” ಎಂಬ ವಿಚಾರ ಸಂಕಿರಣ

Spread the love

ರಾಮಕೃಷ್ಣ ಮಿಷನ್‍ನಲ್ಲಿ ಆಯೋಜಿಸಿದ್ದ ಪ್ರಯುಕ್ತ “ಸ್ವಚ್ಛಗ್ರಾಮ” ಎಂಬ ವಿಚಾರ ಸಂಕಿರಣ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ 400 ಸ್ವಚ್ಛತಾ ಕಾರ್ಯಕ್ರಮಗಳನ್ನು ಪೂರೈಸಿದ ಪ್ರಯುಕ್ತ “ಸ್ವಚ್ಛಗ್ರಾಮ”ಎಂಬ ವಿಚಾರ ಸಂಕಿರಣವನ್ನು ರಾಮಕೃಷ್ಣ ಮಿಷನ್ ನಲ್ಲಿ ಆಯೋಜಿಸಲಾಗಿತ್ತು. ಮೈಸೂರಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ ರಾಜ್ ನಿರ್ದೇಶಕ ಶ್ರೀ ಡಿ. ಪ್ರಾಣೇಶ್‍ರಾವ್ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

“ಸ್ವಚ್ಛ ಭಾರತ ಅಭಿಯಾನ ಇದೊಂದು ಸರಕಾರಿ ಕಾರ್ಯಕ್ರಮವಾಗಿದ್ದರೆ ಯಶಸ್ಸು ಪಡೆಯುತ್ತಿರಲಿಲ್ಲ. ಜನರ ಸಹಭಾಗಿತ್ವದೊಂದಿಗೆ ಜನಾಂದೋಲನವಾಗಿ ಮಾರ್ಪಾಟಾಗಿರುವುದು ಇದರ ಯಶಸ್ಸಿಗೆ ಕಾರಣವಾಗಿದೆ. ಈ ವಿಚಾರದಲ್ಲಿ ವಿಶ್ವಸಮುದಾಯದ ಮುಂದೆ ತಲೆತಗ್ಗಿಸುವ ಪರಿಸ್ಥಿತಿಯಿಂದ ತಲೆಯಿತ್ತಿ ನಿಲ್ಲಬೇಕಾದ ವಾತಾವರಣ ಸೃಷ್ಟಿಯಾಗಬೇಕಾದರೆ ಪ್ರತಿಯೊಬ್ಬರೂ ಇದರಲ್ಲಿ ಭಾಗಿಗಳಾಬೇಕು. ಈ ನಿಟ್ಟಿನಲ್ಲಿ ‘ಪರಿವರ್ತನೆಗಾಗಿ ಪತ್ರಿಕೊದ್ಯಮ’ ಅನ್ನುವ ವಿಚಾರ ಇಲ್ಲದೇ ಹೋದರೆ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪತ್ರಿಕೋದ್ಯಮ ಇವತ್ತು ಸಂಕಲ್ಪ ಮಾಡಬೇಕಿದೆ. ಈ ರಾಷ್ಟ್ರವನ್ನು ಕಟ್ಟುವಂತಹ ಪ್ರಾಮಾಣಿಕ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿವೆ. ಇಂತಹ ಕಾರ್ಯಕ್ರಮಗಳಿಗೆ ಇಲ್ಲಿನ ಸ್ಥಳೀಯ ಮಾಧ್ಯಮ ಸಂಪೂರ್ಣ ಬೆಂಬಲ ನೀಡಿತನ್ನ ಬದ್ಧತೆ ಮೆರೆದಿದೆ.

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಈ ಸ್ವಚ್ಛತೆಯ ಕಾರ್ಯ ನಡೆಯುತ್ತಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರೂ ಸ್ವಚ್ಛತೆಯ ಮಹತ್ವವನ್ನು ಅರಿತುಕೊಳ್ಳಬೇಕಿದೆ. ಸ್ವಚ್ಛತೆ ಇದ್ದಲ್ಲಿ ಭಗವಂತನು ವಾಸ ಮಾಡುತ್ತಾನೆ. ಈ ಸ್ವಚ್ಛತೆಯ ಅಭಿಯಾನಯಾವ ದೇವರ ಪೂಜೆಗೂ ಕಡಿಮೆಯಲ್ಲ. ಸರಕಾರದ ಇಂತಹ ಅಭಿಯಾನಗಳಲ್ಲಿ ಮಠ ಮಂದಿರಗಳು ಮುಂದಾಳತ್ವ ವಹಿಸಿಕೊಂಡರೆ ಅದರಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್‍ದೇಶಾದ್ಯಂತ ಈ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿರುವುದು ಸ್ತುತ್ಯರ್ಹ”ಎಂದು ಅವರು ಶ್ಲಾಘಿಸಿದರು.

ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಮಂಗಳೂರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಅಧ್ಯಕ್ಷಡಾ. ಮಂಜುನಾಥ ಭಂಡಾರಿ ಮಾತನಾಡಿ“ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಮುಖ್ಯವಾಗಿ ಯುವಜನತೆಯನ್ನು ಈ ಕಾರ್ಯಕ್ಕಾಗಿ ಬಳಸಿಕೊಂಡು ಅವರಲ್ಲಿ ಸೇವಾ ಮನೋಭಾವನೆ ಬೆಳೆಯುವಂತೆ ಮಾಡಬೇಕು. ಕೇವಲ ಬೋಧನೆಯಿಂದ ಕಲಿಕೆ ಸಾಧ್ಯವಿಲ್ಲ, ಜೊತೆಗೆ ನಾವು ಆದರ್ಶಪ್ರಾಯರಾಗಿ ಬದುಕಿದರೆ ಅದನ್ನು ನೋಡಿ ಇಂದಿನ ಯುವಕರು ಕಲಿಯುತ್ತಾರೆ. ಈ ಅಭಿಯಾನ ಅಂತಹ ಅವಕಾಶ ನಮ್ಮ ವಿದ್ಯಾರ್ಥಿಗಳಿಗೆ ದೊರಕಿಸಿದೆ”ಎಂದರು.

ಮತ್ತೋರ್ವ ಅತಿಥಿ ಎಂಆರ್‍ಪಿಎಲ್ ಹಣಕಾಸು ನಿರ್ದೇಶಕರಾದ ಶ್ರೀ ಎ ಕೆ ಸಾಹೂ ಇವರು ಮಾತನಾಡಿ ರಾಮಕೃಷ್ಣ ಮಿಷನ್‍ ಆಯೋಜಿಸುತ್ತಿರುವ ಸ್ವಚ್ಛತಾ ಕಾರ್ಯಗಳು ಇಡೀದೇಶಕ್ಕೆ ಮಾದರಿಯಾಗಿರುವಂಥದ್ದು. ಇದೀಗ ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಎಂಆರ್‍ಪಿಎಲ್ ಎಂದಿನಂತೆ ಮುಂದಿನ ಹಂತದದಲ್ಲಿಯೂ ತನ್ನ ಸಹಕಾರವನ್ನು ಮುಂದುವರೆಸುತ್ತದೆ ಎಂದು ತಿಳಿಸಿದರು.

ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ “ಈ ಅಭಿಯಾನದ ಯಶಸ್ಸಿಗೆ ಮಂಗಳೂರಿನ ಜನರೇ ಕಾರಣರಾಗಿದ್ದಾರೆ. ಇಂದಿಗೆ ಮೂರನೇ ಹಂತದಲ್ಲಿ ಅವಧಿಗೆ ಮುನ್ನವೇ 400 ಸ್ವಚ್ಛತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿಗುರಿ ತಲುಪಲಾಗಿದೆ. ಸಾರ್ವಜನಿಕರ ಸಹಕಾರ ಹಾಗೂ ಮಾಧ್ಯಮಗಳ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಮುಂದಿನ ಹಂತದಲ್ಲಿ ಈ ಅಭಿಯಾನವನ್ನು ಜಿಲ್ಲೆಯಾದ್ಯಂತ ಮಾಡಬೇಕೆಂಬುದು ಉದ್ದೇಶವಿದೆ. ಸೂಕ್ತ ಜನಬೆಂಬಲ ದೊರಕಿದರೆ ಅದನ್ನು ಕಾರ್ಯಗತಗೊಳಿಸುವುದಾಗಿ ತಿಳಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿಏಕಗಮ್ಯಾನಂದಜಿ, ವಿಧಾನ ಪರಿಷತ್ ಸದಸ್ಯಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕಜಿಲ್ಲಾ ಪಂಚಾಯತ್‍ ಕಾರ್ಯನಿರ್ವಾಹಕ ಅಧಿಕಾರಿಡಾ. ಎಂ ಆರ್‍ರವಿ ವಿಚಾರಗಳನ್ನು ಮಂಡಿಸಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್‍ ಗಣೇಶ್‍ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಶ್ರೀ ಸಂತೋಷ ಆಳ್ವ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಈ ವಿಚಾರ ಸಂಕಿರಣಕ್ಕೆ ಸಂಭಂಧಿಸಿದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇವೆ / ದಯವಿಟ್ಟು ಈ ವರದಿಯನ್ನು ಪ್ರಕಟಿಸಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.


Spread the love