ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 29 ನೇ ಶ್ರಮದಾನ

Spread the love

ವಿಷಯ: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 29 ನೇ ಶ್ರಮದಾನ

29ನೇ ಕಾರ್ಯಕ್ರಮ: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛತಾ ಅಭಿಯಾನದ 29ನೇ ಶ್ರಮದಾನ ಕಾರ್ಯಕ್ರಮವನ್ನು ಹಂಪಣಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ದಿನಾಂಕ 6-5-2018 ಭಾನುವಾರದಂದು ಮಿಲಾಗ್ರಿಸ್ ಚರ್ಚ್ ಎದುರಿಗೆ ಬೆಳಿಗ್ಗೆ 7:30 ಕ್ಕೆ ಶ್ರೀ ವಿಠಲದಾಸ ಪ್ರಭು ಹಾಗೂ ಶ್ರೀ ದಯಾನಂದ ಕಂಕನಾಡಿ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು.  ಉಮಾಕಾಂತ ಸುವರ್ಣ, ದಿನೇಶ್ ಶೆಟ್ಟಿ, ಕಮಲಾಕ್ಷ ಪೈ, ಮೋಹನ್ ಭಟ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ವಚ್ಛತೆಗಾಗಿ ಶ್ರಮದಾನ: ಮಿಲಾಗ್ರಿಸ್ ಚರ್ಚ್ ಎದುರಿಗೆ ಚಾಲನೆ ನೀಡಿದ ಬಳಿಕ ಕಾರ್ಯಕರ್ತರನ್ನು ನಾಲ್ಕು ತಂಡಗಳಾಗಿ ರೂಪಿಸಿ ಶ್ರಮದಾನ ಮಾಡಲಾಯಿತು. ಪ್ರಥಮದಲ್ಲಿ ಸೌರಜ್ ಮಂಗಳೂರು ಇವರ ನೇತೃತ್ವದಲ್ಲಿ ಸ್ವಚ್ಛ ಮಂಗಳೂರು ಕಾರ್ಯಕರ್ತರು ಹಂಪಣಕಟ್ಟೆ ವೃತ್ತದ ಸುತ್ತಮುತ್ತ ಮುಖ್ಯವಾಗಿ ರಸ್ತೆ ವಿಭಾಜಕಗಳಲ್ಲಿ ಸೇರಿಕೊಂಡಿದ್ದ ಮಣ್ಣು ಕಸವನ್ನು ತೆಗೆದು ಶುಚಿಗೊಳಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಉಪನ್ಯಾಸಕ ಡಾ. ರಾಕೇಶ್ ಕೃಷ್ಣ ಮಾರ್ಗದರ್ಶನದಲ್ಲಿ ಮಿಲಾಗ್ರಿಸ್ ಅತ್ತಾವರ ರಸ್ತೆಯ ಎರಡೂ ಬದಿಗಳಲ್ಲಿ ಸೇರಿಕೊಂಡಿದ್ದ ಕಸ ಹಾಗೂ ಕಲ್ಲುಮಣ್ಣುಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಸುಮಾರು 30 ವಿದ್ಯಾರ್ಥಿನಿಯರು ಇವರಿಗೆ ಸಹಕಾರ ನೀಡಿದರು. ಚೇತನಾ, ರವಿ ಕೆ ಆರ್ ಹಾಗೂ ಸತೀಶ್ ಮತ್ತಿತರರು ಮಿಲಾಗ್ರಿಸ್ ಬಳಿಯಿರುವ ಬಸ್ ತಂಗುದಾಣಕ್ಕೆ ಅಂಟಿಸಿದ್ದ ಪೆÇೀಸ್ಟರ್ ಕಿತ್ತು ಹಸನುಗೊಳಿಸಿ ಇಡೀ ಸ್ಥಳವನ್ನು ಸ್ವಚ್ಛಗೊಳಿಸಿದರು. ಮಹಮದ್ ಶಮೀಮ್ ಹಾಗೂ ಸ್ವಯಂ ಸೇವಕರು  ಇಸ್ಲಾಮಿಕ್ ಟ್ರಸ್ಟ್ ಕಾಂಪ್ಲೆಕ್ಸ್ ಎದುರು ಸ್ವಚ್ಛತಾ ಕಾರ್ಯ ಕೈಗೊಂಡರು. ಜೊತೆಗೆ ಕಾಲುದಾರಿಯಲ್ಲಿದ್ದ ಸುಮಾರು ಅರ್ಧ ಲಾರಿಯಷ್ಟು ಮಣ್ಣು ತೆಗೆದು ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಾಯಿತು. ನಂತರ ಅನಧಿಕೃತ ಬ್ಯಾನರ್, ಬೋರ್ಡ್ ಹಾಗೂ ಫ್ಲೆಕ್ಸ್‍ಗಳನ್ನು ತೆರವು ಮಾಡಲಾಯಿತು.

ಮುಂದುವರೆದ ಕಾಮಗಾರಿ: ವಿಟಿ ರಸ್ತೆಯಲ್ಲಿ ಕಸ ಬಿಸಾಡುತ್ತಿದ್ದ ಜಾಗೆಯನ್ನು ಈ ಹಿಂದೆ ಹಸನು ಮಾಡಲಾಗಿತ್ತು. ಇಂದು ಗಾರೆಯವರಿಂದ ಕಲ್ಲು ಕಟ್ಟಿಸಿ, ಪ್ಲಾಸ್ಟರಿಂಗ್ ಮಾಡಿಸಿ ಸ್ಥಳವನ್ನು ಮತ್ತಷ್ಟು ಅಚ್ಚುಕಟ್ಟಾಗಿ ಕಾಣಿಸುವಂತೆ ಮಾಡಲಾಯಿತು. ಮುಖೇಶ್ ಆಳ್ವ ನೇತೃತ್ವ ವಹಿಸಿದ್ದರು.

ಮೂರು ಟಿಪ್ಪರ್ ತ್ಯಾಜ್ಯ ರಾಶಿಯ ತೆರವು: ಮಂಗಳೂರಿನ ಅಲ್ಲಲ್ಲಿ ಕಾಣುವ ಸಿಗುವ ತ್ಯಾಜ್ಯದ ರಾಶಿಗಳನ್ನು ತೆರವುಗೊಳಿಸಿ ಆ ಸ್ಥಳವನ್ನು ಶುಚಿಯಾಗಿಡುವುದು ಮತ್ತು ಸುಂದರವನ್ನಾಗಿಸುವ ಕಾರ್ಯವನ್ನು ಕಾರ್ಯಕರ್ತರು ಅಲ್ಲಲ್ಲಿ ನೆರವೇರಿಸಿ ಯಶಸ್ವಿಯಾಗಿದ್ದಾರೆ. ಆ ಹಿನ್ನಲೆಯಲ್ಲಿ ಇಂದು ಮಿಲಾಗ್ರಿಸ್ ಅತ್ತಾವರ ರಸ್ತೆಯಲ್ಲಿರುವ ಐ.ಎಂ.ಎ ಕಟ್ಟಡ ಬದಿಯ ರಸ್ತೆಯ ಮೂಲೆಯಲ್ಲಿ ಅಪಾರ ಪ್ರಮಾಣದ ಕಸ ಹಾಗೂ ಕಟ್ಟಡ ತ್ಯಾಜ್ಯ ಹಲವಾರು ವರ್ಷಗಳಿಂದ ಬಿದ್ದುಕೊಂಡಿದ್ದನ್ನು ಗಮನಿಸಿ ಅದಕ್ಕೆ ಶಾಶ್ವತ ಪರಿಹಾರ ಕೊಡಬೇಕೆಂದು ನಿರ್ಧರಿಸಲಾಯಿತು. ಅಭಿಯಾನದ ಪ್ರಧಾನ ಸಂಚಾಲಕ ದಿಲ್ ರಾಜ್ ಆಳ್ವ, ಮಹಮದ್ ನಜೀರ್ ಹಾಗೂ ಕಾರ್ಯಕರ್ತರು ಜೆಸಿಬಿ ಉಪಯೋಗಿಸಿ ಸುಮಾರು ಮೂರು ಲಾರಿಯಷ್ಟಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ರೇಲಿಂಗ್ ಸ್ವಚ್ಛತೆ: ನಗರದ ಹೃದಯಭಾಗ ಹಂಪಣಕಟ್ಟೆಯಿಂದ ಲೈಟ್ ಹೌಸ್ ಹಿಲ್‍ಗೆ ಸಾಗುವ ರಸ್ತೆಯ ಪಕ್ಕದಲ್ಲಿರುವ ಸುಮಾರು ಇನ್ನೂರು ಅಡಿ ಉದ್ದದ ಫಲಕ ಸಹಿತವಾದ ರೇಲಿಂಗ್‍ಗಳನ್ನು ಮೊದಲಿಗೆ ಸ್ವಚ್ಛಗೊಳಿಸಲಾಯಿತು. ಅದಕ್ಕೆ ಅಂಟಿಸಿದ್ದ ಅನಧಿಕೃತ ಜಾಹೀರಾತು, ಪೆÇೀಸ್ಟರ್ ಕಿತ್ತು ಹಾಕಿದ ಬಳಿಕ ಆನಂದ ಅಡ್ಯಾರ್, ಶಿಶಿರ್ ಅಮೀನ್, ವಿಖ್ಯಾತ್ ಉಳ್ಳಾಲ ಮತ್ತಿತರರು ಬೆಳ್ಳಿಯ ಬಣ್ಣದ ಪೇಂಟ್ ಹಚ್ಚಿ ಸುಂದರಗೊಳಿಸಿದರು. ಮುಂದಿನ ದಿನಗಳಲ್ಲಿ ಅದನ್ನು ಮತ್ತಷ್ಟು ಅಂದಗೊಳಿಸಲು ನಿರ್ಧರಿಸಲಾಯಿತು.

ಸ್ವಚ್ಛತಾ ಜಾಗೃತಿ: ನಿವೇದಿತ ಬಳಗದ ಸದಸ್ಯರು ಹಾಗೂ ನಿಟ್ಟೆ ಫಿಸಿಯೋಥೆರಫಿ ವಿದ್ಯಾರ್ಥಿನಿಯರು ಹಿಮ್ಮತ್ ಸಿಂಗ್ ಜೊತೆಯಾಗಿ ಹಂಪಣಕಟ್ಟೆ ಹಾಗೂ ಮಿಲಾಗ್ರಿಸ್ ಚರ್ಚ್ ಆಸುಪಾಸಿನ ಪರಿಸರದ ಮನೆ ಹಾಗೂ ಅಂಗಡಿಗಳಿಗೆ ತೆರಳಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡರು.

ಅಶೋಕ್ ಸುಬ್ಬಯ್ಯ, ಉಮರ್ ಫಾರೂಕ್, ಯೋಗಿಶ್ ಕಾಯರ್ತಡ್ಕ, ಸೇರಿದಂತೆ ಅನೇಕ ಸ್ವಯಂಸೇವಕರು ಅಭಿಯಾನದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು. ಅಭಿಯಾನದ ಬಳಿಕ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಅಭಿಯಾನಕ್ಕೆ ಎಂ ಆರ್‍ಪಿಎಲ್  ಸಂಸ್ಥೆ ಪ್ರಾಯೋಜಕತ್ವ  ನೀಡಿ ಸಹಕರಿಸುತ್ತಿದೆ.


Spread the love