Home Mangalorean News Kannada News ರಾಮಕೃಷ್ಣ ಮಿಷನ್ ಮೂರನೆ ಹಂತದ ಸ್ವಚ್ಚ ಮಂಗಳೂರು ಅಭಿಯಾನ

ರಾಮಕೃಷ್ಣ ಮಿಷನ್ ಮೂರನೆ ಹಂತದ ಸ್ವಚ್ಚ ಮಂಗಳೂರು ಅಭಿಯಾನ

Spread the love

ರಾಮಕೃಷ್ಣ ಮಿಷನ್ ಮೂರನೆ ಹಂತದ ಸ್ವಚ್ಚ ಮಂಗಳೂರು ಅಭಿಯಾನ

ಮಂಗಳೂರು: ರಾಮಕೃಷ್ಣ ಮಿಷನ್ನಿನಿಂದ ಪ್ರೇರೇಪಿತರಾದ ಸ್ವಯಂಸೇವಕರು ಮಂಗಳೂರಿನ ಸುತ್ತಮುತ್ತಲಿನ ಹತ್ತು  ಪ್ರದೇಶಗಳಲ್ಲಿ ದಿನಾಂಕ 30-10-2016 ಭಾನುವಾರ ಬೆಳಿಗ್ಗೆ 7:00 ರಿಂದ 10:00 ರವರೆಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು.

ಎ ಬಿ ಶೆಟ್ಟಿವೃತ್ತ : ಶ್ರೀರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿಯ ಸಿಬ್ಬಂದಿಗಳು ಎ ಬಿ ಶೆಟ್ಟಿ ವೃತ್ತದ ಸುತ್ತಮುತ್ತ ಸ್ವಚ್ಚತಾ ಅಭಿ ಯಾನ ಕೈಗೊಂಡರು. ಬೆಳಿಗ್ಗೆ 7 ಗಂಟೆಗೆ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಹಾಗೂ ವಿಧಾನ ಪರಿಶತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಿಜಿಎಂಗಳಾದ ಸತ್ಯನಾರಾಯಣ ಕೆವಿ ಹಾಗೂ ಶರತ್‍ಚಂದ್ರ ಹಾಗೂ ಅವರ ಸಿಬ್ಬಂದಿಗಳು ಆರ್ ಟಿ ಓ ಸುತ್ತಮುತ್ತ ಸ್ವಚ್ಛಗೊಳಿಸಿದರು.

ಮಾರ್ನಮಿಕಟ್ಟೆ: ಲಯನ್ಸ್ ಕ್ಲಬ್‍ನ ಸದಸ್ಯರು ಸದಾಶಿವ್ ರೈ ಹಾಗೂ ಶ್ರೀ ಪ್ರಶಾಂತ ರಾವ್ ಮುಂದಾಳತ್ವದಲ್ಲಿ ಮಾರ್ನಮಿಕಟ್ಟೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಬೆಳಿಗ್ಗೆ 7:30ಕ್ಕೆ ಸ್ವಾಮಿ ಜಿತಕಾಮಾನಂದಜಿ ಹಾಗೂ ಹರ್ಷಕುಮಾರ ಕೇದಿಗೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಲಯನ್ಸ್ ಕ್ಲಬ್ ಸದಸ್ಯರು ಮಾರ್ನಮಿಕಟ್ಟಾ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಸುರೇಶ್ ಶೆಟ್ಟಿ ಸಂಘಟಿಸಿದರು.

swacch-mangaluru-abhiyan-ramakrishna-mission-1

ಮಿಲಾಗ್ರೀಸ್‍ವೃತ್ತ : ಹಿಂದೂ ವಾರಿಯರ್ಸ್ ಸದಸ್ಯರು ಹಂಪಣಕಟ್ಟೆ ಹಾಗೂ ಮಿಲಾಗ್ರೀಸ್ ವೃತ್ತದ ಬಳಿ ಸ್ವಚ್ಛತಾ ಕೈಂಕರ್ಯ ಕೈಗೊಂಡರು. ಬೆಳಿಗ್ಗೆ 7:30 ಕ್ಕೆ ಸ್ವಾಮಿ ಧರ್ಮವ್ರತಾನಂದಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಶಾಂತ ಉಬರಂಗಳ ಮಾರ್ಗದರ್ಶನದಲ್ಲಿ ರಸ್ತೆಯ ವಿಭಾಜಕಗಳಲ್ಲಿದ್ದ ಕಲ್ಲು ಮಣ್ಣುಗಳನ್ನು ತೆಗೆದು ಶುದ್ಧಗೊಳಿಸಿದರು. ನಂತರ ಲೈಟ್ ಹೌಸ್ ಹಿಲ್ ರಸ್ತೆಯ ತಿರುವಿನಲ್ಲಿ ಅಲ್ಲಲ್ಲಿ ಬಿದ್ದುಕೊಂಡಿದ್ದ  ಕಲ್ಲು ಮಣ್ಣುಗಳ ರಾಶಿಗಳನ್ನು ತೆಗೆದು ಕಟ್ಟೆಗಳಿಗೆ ಬಣ್ಣ ಬಳಿದು ಸುಂದರಗೊಳಿಸಿದರು. ಶಿವು ಪುತ್ತೂರು ಹಾಗೂ ಯೋಗಿಶ್ ಕಾಯರ್ತಡ್ಕ ಕಾರ್ಯಕ್ರಮವನ್ನು ಸಂಯೋಜಿಸಿದರು.

ಪಾಂಡೇಶ್ವರ; ರೋಸಾರಿಯೋ ಶಾಲೆಯ ಮುಂಭಾಗ ಹಾಗೂ ಅಕ್ಕಪಕ್ಕದ ಮಾರ್ಗಗಳನ್ನು ಇಂದು ಸ್ವಚ್ಛ ಮಾಡಲಾಯಿತು. ಮನಪಾ ಸದಸ್ಯ ಲತೀಫ್ ಹಾಗೂ ಬ್ರಹ್ಮಚಾರಿ ನಿಶ್ವಯ ಕಾರ್ಯಕ್ರಮವನ್ನು ಜಂಟಿಯಾಗಿ ಶುಭಾರಂಭಗೊಳಿಸಿದರು. ಕುಂಬ್ಳೆ ಗೋಪಾಲಕೃಷ್ಣ ಕಾರ್ಯಕ್ರಮ ಸಂಯೋಜಿಸಿದರು.

ಕೊಟ್ಟಾರ : ಇನ್ಫೋಸಿಸ್ ಬಳಿಯಲ್ಲಿ ಇನ್ಸ್ಪಿರೇಶನ್ ಎಂಬ ಯುವಕರ ತಂಡ ಸ್ವಚ್ಛತೆಯನ್ನು ಕೈಗೊಂಡಿತು. ಸ್ವಾಮಿ ಏಕಗಮ್ಯಾನಂದಜಿ ಹಾಗೂ ಪೋಲಿಸ್ ಅಧಿಕಾರಿ ಮದನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಪ್ರಾರಂಭಿಸಿದರು. ವೇದಘೋಷದ ಮೂಲಕ ಪ್ರಾರಂಭವಾದ ಅಭಿಯಾನದಲ್ಲಿ ರಾಮಕೃಷ್ಣ ಮಿಶನ್ನಿನ ಅನೇಕ ಬ್ರಹ್ಮಚಾರಿಗಳು ಪಾಲ್ಗೊಂಡು ಸ್ವಯಂ ಸೇವಕರೊಂದಿಗೆ ಸೇರಿಕೊಂಡುಗುಡಿಸಿದರು. ಮಾರ್ಗದ ಬದಿಗಳನ್ನು ಗುಡಿಸಿ ಹಸನು ಮಾಡಿದರು. ಬಸ್ ತಂಗುದಾಣಕ್ಕೆ ಬಣ್ಣಬಳಿದು ಸುಂದರಗೊಳಿಸಿದರು. ಪ್ರೋ ಶೇಷಪ್ಪ ಅಮೀನ್ ಯುವಕರನ್ನು ಮುನ್ನಡೆಸಿದರು.

ಜೆಪ್ಪು  :ಜೆಪ್ಪು ಬಸ್ ನಿಲ್ದಾಣದ ಬಳಿ ಸ್ವಚ್ಚ ಜೆಪ್ಪು ತಂಡವು ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸ್ವಾಮಿ ಜಿತಕಾಮಾನಂದಜಿ ಹಾಗೂ ಅಧ್ಯಾಪಕ ಪ್ರವೀಣ ಕುಮಾರ ಕಾರ್ಯಕ್ರಮವನ್ನು ಶುಭಾರಂಭ ಮಾಡಿದರು. ನಂತರ ಸುಮಾರು ಎರಡು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ನಡೆಯಿತು

ಬಂಟ್ಸ್ ಹಾಸ್ಟೆಲ್ :ಸಿಲ್ವರ್ ಫಾಕ್ಸ್ ಯುವಕರ ತಂಡ ಬಂಟ್ಸ್ ಹಾಸ್ಟೆಲ್ ವೃತ್ತದ ಸುತ್ತುಮುತ್ತಲಿನ ರಸ್ತೆಗಳಲ್ಲಿ ಸ್ವಚ್ಛತೆ ಮಾಡಿದರು. ಸ್ವಾಮಿಧರ್ಮವ್ರತಾನಂದಜಿ ಹಾಗೂ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಕಾರ್ಯಕ್ರಮವನ್ನು ಆರಂಭಗೊಳಿಸಿದರು. ತದನಂತರ ಯುವಕರು ರಸ್ತೆಯ ಬದಿಗಳನ್ನು ಸ್ವಚ್ಚ ಮಾಡಿದರು. ಧನುಷ್ಯ ಹಾಗೂ ನಿಹಾಲ್ ಕಾರ್ಯಕ್ರಮದ ಸಂಯೋಜಕರಾಗಿದ್ದರು.

ಅತ್ತಾವರ : ಶ್ರೀ ಚಕ್ರಪಾಣಿ ದೇವಸ್ಥಾನದ ಭಕ್ತಾದಿಗಳು ಸೇರಿಕೊಂಡು ಸ್ವಚ್ಛ ಭಾರತದಲ್ಲಿ ತಮ್ಮ ಸಹಯೋಗ ನೀಡಿದರು. ಬೆಳಿಗ್ಗೆ 7:30 ಬ್ರಹ್ಮಚಾರಿ ಶಿವಕುಮಾರ ಹಾಗೂ ಶ್ರೀ ದೇವದಾಸ್ ಕೊಟ್ಟಾರಿ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಎಂಸಿ ಆಸ್ಪತ್ರೆಯ ಬಳಿ ಹಾಗೂ ದೇವಸ್ಥಾನದ ಆವರಣ ಮತ್ತು ಹೊರಭಗದಲ್ಲಿ ಸ್ವಚ್ಛತೆ ಮಾಡಲಾಯಿತು. ಜೆಸಿಬಿ ಸಹಾಯದಿಂದ ಮಾರ್ಗದ ಬದಿಯಲ್ಲಿ ರಾಶಿಯಾಗಿ ಬಿದ್ದುಕೊಂಡಿದ್ದ ಮಣ್ಣನ್ನು ತೆರವುಗೊಳಿಸಲಾಯಿತು.   ಅಕ್ಷಿತ ಕಾರ್ಯಕ್ರಮವನ್ನು ಸಂಯೋಜಿಸಿದರು.

ಮಂಕಿಸ್ಟಾಂಡ್: ಕ್ರೇಜಿಗಯ್ಸ್ ಯುವಜನರ ತಂಡ ಮಂಕಿಸ್ಟಾಂಡ ಅಮರ ಆಳ್ವ ರಸ್ತೆಯಲ್ಲಿ ಅಭಿಯಾನವನ್ನು ಕೈಗೊಂಡರು. ಇದಕ್ಕೂ ಮುನ್ನ ಸ್ವಾಮಿಚಿದಂಬರಾನಂದಜಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಸ್ವಚ್ಛ್  ಮಂಗಳೂರಿನ ಪ್ರಧಾನ ಸಂಯೋಜಕ ಶ್ರೀ ದಿಲ್ ರಾಜ್ ಆಳ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೋರ್ಗನ್ಸ್‍ಗೇಟ್: ಭಗಿನಿ ಸಮಾಜ ಹಾಗೂ ನಿವೇದಿತಾ ಬಳಗದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೋರ್ಗನ್ಸ್‍ಗೇಟ್ ಹಾಗೂ ಭಗಿನಿ ಸಮಾಜದ ಬಳಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಚಿಕ್ಕ ಮಕ್ಕಳು ಹಾಗೂ ವೃದ್ಧರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರವನ್ನು ಶುಚಿಗೊಳಿಸಿದರು.   ರತ್ನಾ ಆಳ್ವ ಕಾರ್ಯಕ್ರಮ ಸಂಯೋಜಿಸಿದರು

ಒಟ್ಟು 10 ಪ್ರದೇಶಗಳಲ್ಲಿ ಕಾರ್ಯಕರ್ತರು ಈ ವಾರದ ಅಭಿಯಾನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ತರುವಾಯ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಅಭಿಯಾನಕ್ಕೆ ನಿಟ್ಟೆ ವಿದ್ಯಾಸಂಸ್ಥೆ ಹಾಗೂ ಎಂಆರ್‍ಪಿಎಲ್ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿವೆ.


Spread the love

Exit mobile version