Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 4ನೇ ತಿಂಗಳ ಸರಣಿ ಕಾರ್ಯಕ್ರಮಗಳು

ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 4ನೇ ತಿಂಗಳ ಸರಣಿ ಕಾರ್ಯಕ್ರಮಗಳು

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 4ನೇ ತಿಂಗಳ ಸರಣಿ ಕಾರ್ಯಕ್ರಮಗಳು

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನವನ್ನು 2019ನೇ ಮಾರ್ಚ ತಿಂಗಳಲ್ಲಿ ಮಂಗಳೂರಿನ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 1-3-2019 ರಿಂದ 30-3-2019 ರ ತನಕ ಸ್ವಚ್ಛತಾ ಜನಸಂಪರ್ಕ ಅಭಿಯಾನದ ಪ್ರಯುಕ್ತ 22 ಕಾರ್ಯಕ್ರಮಗಳು ಜರುಗಿದವು. ಒಟ್ಟು ಕಳೆದ 4 ತಿಂಗಳಲ್ಲಿ 98 ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸ್ವಚ್ಛತಾ ಜಾಗೃತಿ ಮಾಡಲಾಯಿತು. ಇಲ್ಲಿಯವರೆಗೆ ಸುಮಾರು 3000 ಜನರು ಹಸಿತ್ಯಾಜ್ಯ ನಿರ್ವಹಣೆ ಮಾಡಲು ‘ಮೂರು ಮಡಕೆ ಸಾಧನ’ ಬೇಕೆಂದು ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

ಯಕ್ಕೂರು: ಧ್ರುವ ರೆಸಿಡೆನ್ಸಿ ಹಾಗೂ ಶ್ರೀನಿಧಿ ರೆಸಿಡೆನ್ಸಿ ನಿವಾಸಿಗಳ ಆಶ್ರಯದಲ್ಲಿ ಪ್ರಶಾಂತ ಯಕ್ಕೂರ ನೇತೃತ್ವದಲ್ಲಿ 77ನೇ ಮಡಕೆ ಗೊಬ್ಬರದ ಕುರಿತು ಪ್ರಾತ್ಯಕ್ಷಿಕೆ ಜರುಗಿತು. ಉಮಾನಾಥ್ ಕೋಟೆಕಾರ್ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಸುಜಾತಾ ಕುಲಾಲ, ಶಶಿಧರ ಶೆಟ್ಟಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಿರಣ ರೈ ಸ್ವಾಗತಿಸಿ ನಿರೂಪಿಸಿದರು.

ಸುರತ್ಕಲ್: ಬಂಟರ ಸಂಘ ಸುರತ್ಕಲ್ ಸಹಯೋಗದಲ್ಲಿ 78ನೇ ಸ್ವಚ್ಛತಾ ಜನಜಾಗೃತಿ ಕಾರ್ಯಕ್ರಮವನ್ನು ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಹಸಿಕಸ ಒಣಕಸದ ನಿರ್ವಹಣೆ ಕುರಿತು ಸಂವಾದಗಳು ನಡೆದವು. ಗಣ್ಯರಾದ ಸುಧಾಕರ ಪುಂಜ, ನವೀನ್ ಶೆಟ್ಟಿ ಪಡ್ರೆ, ಲೋಕಯ್ಯ ಪಡ್ರೆ ಮತ್ತಿತರರು ಭಾಗಿಯಾಗಿದ್ದರು.

ಥಿಯಾಸೋಫಿಕಲ್ ಸೊಸೈಟಿ: ಕೋಡಿಯಾಲ್ ಬೈಲ್ ನಲ್ಲಿರುವ ಥಿಯಾಸೋಫಿಕಲ್ ಸೊಸೈಟಿಯಲ್ಲಿ “ನಮ್ಮ ತ್ಯಾಜ್ಯ ನಮ್ಮ ಹೊಣೆ” ಎಂಬ ಕುರಿತು ವಿಶೇಷ ಗೋಷ್ಠಿ ಜರುಗಿತು. ಉಮಾನಾಥ್ ಕೋಟೆಕಾರ್, ಸಚಿನ ಶೆಟ್ಟಿ ಗೋಷ್ಠಿಯಲ್ಲಿ ಮಾತನಾಡಿದರು. ನರಸಿಂಹ ಶೆಟ್ಟಿ ಸ್ವಾಗತಿಸಿದರು, ಕೃಷ್ಣಾನಂದ ಶೆಣೈ ವಂದಿಸಿದರು. 79ನೇ ಈ ಕಾರ್ಯಕ್ರಮವನ್ನು ಸೋಮಶೇಖರ್ ಬಿ ಎಮ್ ಸಂಯೋಜಿಸಿದರು. ಪೆÇ್ರೀ. ಎಂ ರಾಘವೇಂದ್ರ ಪ್ರಭು, ರೋಹನ್ ಸಿರಿ ಹಾಗೂ ಸೊಸೈಟಿಯ ಅನೇಕ ಸದಸ್ಯರು ಉಪಸ್ಥಿತರಿದ್ದರು.

ಯಶಸ್ವಿ ನಗರ: ಉರ್ವಾದಲ್ಲಿರುವ ಯಶಸ್ವಿ ನಗರದ ನಿವಾಸಿಗಳ ಒಕ್ಕೂಟದ ಸದಸ್ಯರಿಗಾಗಿ “ಸ್ವಚ್ಚತಾ ಜನ ಸಂಪರ್ಕ” ಅಡಿಯಲ್ಲಿ 80ನೇ ಕಾರ್ಯಕ್ರಮವನ್ನು ‘ಶ್ರೀಕೃಷ್ಣ ಕೃಪಾ’ದಲ್ಲಿ ನಡೆಸಿಕೊಡಲಾಯಿತು. ಪ್ರಕಾಶ ರಾವ್ ಅತಿಥಿಯಾಗಿ ಭಾಗವಹಿಸಿದ್ದರು. ಸತೀಶ್ ಶೆಟ್ಟಿ ಸಂಯೋಜಿಸಿದರು.

ಪರಂಜ್ಯೋತಿ ಭಜನಾ ಮಂಡಳಿ : 81ನೇ ಮಡಕೆ ಗೊಬ್ಬರ ತಯಾರಿಕಾ ಪ್ರಾತ್ಯಕ್ಷಿಕೆಯನ್ನು ಅಳಪೆಯಲ್ಲಿರುವ ಪರಂಜ್ಯೋತಿ ಭಜನಾ ಮಂಡಳಿಯಲ್ಲಿ ನಡೆಸಿಕೊಡಲಾಯಿತು. ಭಾಸ್ಕರಚಂದ್ರ ಶೆಟ್ಟಿ, ರಾಮಚಂದ್ರ ಕೊಟ್ಟಾರಿ, ಶಾಂಭವಿ ಕೊಟ್ಟಾರಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭರತ್ ಶೆಟ್ಟಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಬೋಳಾರ ಯುವಕ ವೃಂದ : ಹಿಂದೂ ಜಾಗರಣ ವೇದಿಕೆ ಬೋಳಾರ ಹಾಗೂ ಯುವಕ ವೃಂದ ಬೋಳಾರ ಇವರ ಜಂಟಿ ಆಶ್ರಯದಲ್ಲಿ ಕಡವಿನ ಬಾಗಿಲು ಬೋಳಾರದಲ್ಲಿ 82ನೇ ಸ್ವಚ್ಛ ಭಾರತ ಮಾಹಿತಿ ಶಿಬಿರ ನಡೆಯಿತು. ಶೋಭಾ ಶೆಟ್ಟಿ, ಗಂಗೇಶ್ ಬೋಳಾರ ಹಾಗೂ ಇನ್ನಿತರ ಸದಸ್ಯರು ಭಾಗಿಯಾಗಿದ್ದರು. ಪುನೀತ್ ಪೂಜಾರಿ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು

ಕೂಟ ಮಹಾಜಗತ್ತು : ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿರುವ ಶ್ರೀಗುರು ನರಸಿಂಹ ಸಭಾಭವನದಲ್ಲಿ 83ನೇ ಸ್ವಚ್ಛತಾ ಸಂಪರ್ಕ ಅಭಿಯಾನದ ಕಾರ್ಯಕ್ರಮ ಕೂಟಮಹಾ ಜಗತ್ತು ಮಹಿಳಾ ವೇದಿಕೆ ಆಶ್ರಯದಲ್ಲಿ ನೇರವೇರಿತು. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ “ಸ್ವಚ್ಛತೆಯಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಬಗ್ಗೆ ಮಾತನಾಡಿದರು. ತದನಂತರ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನಡೆಯಿತು. ಶ್ರೀಶೇಷಗಿರಿ ರಾವ್, ಲೀಲಾ ರಾವ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಲಿತಾ ಉಪಾಧ್ಯಾಯ ಸ್ವಾಗತಿಸಿದರು. ವಿಜಯಲಕ್ಷ್ಮೀ ಕಾರ್ಯಕ್ರಮವನ್ನು ಸಂಯೋಜಿಸಿದರು.

ಶ್ರೀದೇವಿ ಮಹಿಳಾ ಮಂಡಳಿ: ರಥಬೀದಿಯಲ್ಲಿರುವ ಗೌರಿಮಠದ ಶ್ರೀಸುಬ್ರಮಣ್ಯ ದೇವಸ್ಥಾನದಲ್ಲಿ ಶ್ರೀದೇವಿ ಮಹಿಳಾ ಮಂಡಳಿಯ ಸದಸ್ಯೆಯರಿಗಾಗಿ ಹಸಿಕಸವನ್ನು ಮಡಕೆಯಲ್ಲಿ ಹಾಕಿ ಗೊಬ್ಬರ ಮಾಡುವ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಉಮಾನಾಥ್ ಕೊಟೆಕಾರ್ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಸ್ವಚ್ಛತೆಯ ಬಗ್ಗೆ ಮಾತನಾಡಿದರು. ಮಂಜುಳಾ ಗೋಪಾಲ ಸ್ವಾಗತಿಸಿದರು. ಸರೋಜಾ ಸೆಲ್ವರಾಜ್, ಕಣಮ್ಮ ಕಂದಸ್ವಾಮಿ ವಿಶೇಷ ಆಹ್ವಾನಿತರಾಗಿದ್ದರು. ಜಗನ್ ಕೋಡಿಕಲ್ 84ನೇ ಜನಸಂಪರ್ಕ ಕಾರ್ಯಕ್ರಮವನ್ನು ಸಂಘಟಿಸಿದರು.

ಶ್ರೀನಾರಾಯಣ ಗುರುಮಂದಿರ ಕೋಡಿಕಲ್: ಸ್ವಚ್ಛ ಕೋಡಿಕಲ್ ತಂಡದ ಸದಸ್ಯರಿಂದ ಬ್ರಹ್ಮರ್ಷಿ ಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಮಂದಿರದಲ್ಲಿ ಸಾವಯವ ಗೊಬ್ಬರ ತಯಾರಿಕೆಯ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಚಿನ್ ಶೆಟ್ಟಿ ಇವರು ಅಡುಗೆ ಮನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿರ್ವಹಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿದರು. ದಯಾಮಣಿ ಕೋಟ್ಯಾನ್, ಶೋಭಾ ಅಂಚನ್ ಅತಿಥಿಗಳಾಗಿದ್ದರು. ದಯಾನಂದ ಮಂಗಳೂರು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ಶಿವು ಪುತ್ತೂರು ಹಾಗೂ ಕಿರಣ ಕೋಡಿಕಲ್ 85ನೇ ಸ್ವಚ್ಛತಾ ಸಂಪರ್ಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ವಾಮಂಜೂರು: ತಿರುವೈಲು ವಾರ್ಡ್ ಕಸ್ಟಮ್ಸ್ ಕಾಲನಿಯಲ್ಲಿರುವ ಸಾರ್ವಜನಿಕರಿಗಾಗಿ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ಹಾಗೂ ಸ್ವಚ್ಛತೆಯ ಮಾಹಿತಿ ಶಿಬಿರ ನಡೆಸಲಾಯಿತು. ಈ 86ನೇ ಸಂಪರ್ಕ ಅಭಿಯಾನ ಸುಧೀರ ನರೋಹ್ನ ಉಸ್ತುವಾರಿಯಲ್ಲಿ ಜರುಗಿತು. ರಘು ಸಾಲ್ಯಾನ್, ಗೋಪಾಲ, ಸುರೇಶ್ ರಾವ್, ಜಯರಾಂ ಆಳ್ವ, ಚಾರ್ಲ್ಸ್ ಇನ್ನಿತರರು ಉಪಸ್ಥಿತರಿದ್ದರು.

ಪೆನಿನ್ಸಲರ್ ಹೊಂಡಾ: ದೇರೆಬೈಲ್‍ನಲ್ಲಿರುವ ಪೆನಿನ್ಸಲರ್ ಹೊಂಡಾ ಶೋರೂಂ ಸಿಬ್ಬಂದಿಗಾಗಿ ಸ್ವಚ್ಛತೆಯ ಮಹತ್ವ ಹಾಗೂ ಕಸದ ನಿರ್ವಹಣೆಯ ಕುರಿತು ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಯಿತು. ನಲ್ಲೂರು ಸಚಿನ್ ಶೆಟ್ಟಿ ‘ಪಾಟ್ ಕಾಂಪೆÇೀಸ್ಟಿಂಗ್’ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಸರ್ವಿಸ್ ಮೆನೇಜರ್ ರಾಜೇಶ್ ಸ್ವಾಗತಿಸಿದರು. ವಿನೋದ, ನಿಶ್ಚಿತಾ ಸೇರಿದಂತೆ ಅನೇಕ ಸಿಬ್ಬಂದಿ 87ನೇ ಜನಸಂಪರ್ಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಶಿಶಿರ ಅಮೀನ್ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದರು.

ಬಡ್ಲಗುಡ್ಡ ನಿವಾಸಿಗಳ ಸಂಘ: ಸ್ವಚ್ಛ ಪಡೀಲ್ ತಂಡದ ಸಹಯೋಗದಲ್ಲಿ ಪಡೀಲ್‍ನಲ್ಲಿ 88ನೇ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಬಡ್ಲಗುಡ್ಡ ಶಾಂತಿನಗರ ನಿವಾಸಿಗಳ ಒಕ್ಕೂಟದ ಸದಸ್ಯರಿಗಾಗಿ ನಡೆಸಲಾಯಿತು. ಉಮಾನಾಥ ಕೋಟೆಕಾರ್ ಸ್ವಚ್ಛತೆಯ ಮಹತ್ವದ ಕುರಿತು ಮಾತನಾಡಿದರು. ಮೋಹನ್ ಪಡೀಲ್, ಗೋಪಾಲ ಸಾಲ್ಯಾನ್, ಕುಸುಮ ಕೇಶವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದಯ ಕೆ ಪಿ ಕಾರ್ಯಕ್ರಮದ ಹೊಣೆ ಹೊತ್ತಿದ್ದರು.

ಸಂಸ್ಕೃತ ಭಾರತೀ: ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ಸಂಸ್ಕೃತ ಭಾರತೀ ಹಾಗೂ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ 89ನೇ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ ಪ್ರಯುಕ್ತ “ಕಸದ ನಿರ್ವಹಣೆ” ಕುರಿತ ಪ್ರಾತ್ಯಕ್ಷಿಕೆ ಜರುಗಿತು. ಅತಿಥಿಯಾಗಿ ಭಾಗವಹಿಸಿದ್ದ ಎಂ ಆರ್ ವಾಸುದೇವ ಮಾತನಾಡಿ “ಕಸದ ವಿಷಯದಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ವರ್ತಿಸಿದಾಗ ಸ್ವಚ್ಛ ಭಾರತ ಸಾಕಾರಗೊಳ್ಳುತ್ತದೆ” ಎಂದು ತಿಳಿಸಿದರು. ಉಮಾನಾಥ್ ಕೋಟೆಕಾರ್ ಹಾಗೂ ಸಚಿನ್ ಶೆಟ್ಟಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅನಿತಾ ರಾವ್ ಸ್ವಾಗತಿಸಿದರು. ವೀಣಾ ಗರ್ದೆ ವಂದಿಸಿದರು. ನಂದಿನಿ ಕನಕರಾಜ್ ನಿರೂಪಿಸಿದರು. ಈ ಕಾರ್ಯಕ್ರಮವನ್ನು ಡಾ ವಿಶ್ವಾಸ್, ಡಾ. ಶಾಂತಲಾ ವಿಶೇಷ ಆಸ್ಥೆ ವಹಿಸಿ ಸಂಘಟಿಸಿದ್ದರು.

ಕಡಂಬೋಡಿ; ಆಶ್ರಯ ಯುವವೇದಿಕೆ ಮತ್ತು ಮಹಿಳಾ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಕಡಂಬೋಡಿಯಲ್ಲಿ 90ನೇ ಸ್ವಚ್ಛತಾ ಜನಸಂಪರ್ಕ ಅಭಿಯಾನದ ಪ್ರಯುಕ್ತ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನಡೆಯಿತು. ಅಧ್ಯಕ್ಷೆಯಾದ ಕುಸುಮಾ ಮಹಾಬಲ ಪೂಜಾರಿ, ಸುಮತಿ ಹಂದೆ ಮತ್ತಿತರರು ಉಪಸ್ಥಿತರಿದ್ದರು. ಓಂ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿದರು. ಸತೀಶ್ ಸದಾನಂದ ಸಂಯೋಜಿಸಿದರು.

ಜೆಪ್ಪಿನಮೊಗರು: ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರಿಗೆ ಬ್ರಹ್ಮರ್ಷಿ ಶ್ರೀನಾರಾಯಣ ಗುರು ಮಂದಿರ ಜೆಪ್ಪಿನ ಮೊಗರುವಿನಲ್ಲಿ 91ನೇ ಕಾರ್ಯಕ್ರಮ ಜರುಗಿತು. ಪುಷ್ಪಲತಾ, ಶ್ರೀಮತಿ ಉಷಾ ಹಾಗೂ ಅನೇಕ ಯೋಗಾಭ್ಯಾಸಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕುಲಾಲ ಸಂಘ: ತಡಂಬೈಲು ಕುಲಾಲ ಭವನದಲ್ಲಿ ಸುರತ್ಕಲ್ ಕುಲಾಲ ಸಂಘದ ಆಶ್ರಯದಲ್ಲಿ 92ನೇ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪೆÇ್ರೀ. ಕೃಷ್ಣಮೂರ್ತಿ, ಸುಧಾಕರ ಕುಲಾಲ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು. ಬಳಿಕ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನಡೆಯಿತು.

ಪತಂಜಲಿ ಯೋಗ ಶಿಕ್ಷಣ ಸಮಿತಿ : ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗಾಭ್ಯಾಸಿಗಳಿಗೆ ಸ್ವಚ್ಛತಾ ಜನಸಂಪರ್ಕ ಅಭಿಯಾನದ ಪ್ರಯುಕ್ತ ಮಡಕೆ ಗೊಬ್ಬರ ತಯಾರಿಕಾ ವಿಧಾನದ ಬಗ್ಗೆ ತಿಳಿಸಿಕೊಡಲಾಯಿತು. ಶಾಖಾ ಸಂಚಾಲಕ ನಟರಾಜ್ ಸುರತ್ಕಲ್, ಸತೀಶ್ ಸದಾನಂದ 93ನೇ ಕಾರ್ಯಕ್ರಮವನ್ನು ಸಂಯೋಜಿಸಿದರು.

ವಿದ್ಯುತ್ ಗುತ್ತಿಗೆದಾರರ ಸಂಘ: ವಿದ್ಯಾದಾಯಿನೀ ಗ್ರಾಮಿಣಾಭಿವೃದ್ಧಿ ಮತ್ತು ಕೃಷಿ ತರಬೇತಿ ಸಂಸ್ಥೆ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಸುರತ್ಕಲ್ ಇವರಿಗಾಗಿ ಮಣ್ಣಿನ ಮಡಿಕೆಯಲ್ಲಿ ಹಸಿ ತ್ಯಾಜ್ಯ ನಿರ್ವಹಣೆಯ ಕುರಿತು ಪ್ರ್ರಾತ್ಯಕ್ಷಿಕೆ ನಡೆಯಿತು. ಅಧ್ಯಕ್ಷರಾದ ಸುಕುಮಾರ್, ಉರ್ಬಾನ್ ಪಿಂಟೋ, ಪೆÇ್ರೀ. ರಾಜಮೋಹನ್ ರಾವ್ ಇನ್ನಿತರರು 94ನೇ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ತರುವಾಯ ಹಲವು ಜನರು ಮಡಕೆಗಳನ್ನು ಹೆಸರುಗಳನ್ನು ನೋಂದಾಯಿಸಿದರು.

ಲಯನ್ಸ್ ಕ್ಲಬ್: ಸುರತ್ಕಲನಲ್ಲಿರುವ ಲಯನ್ಸ್ ಕ್ಲಬ್ ಸದಸ್ಯರಿಗಾಗಿ ಲಯನ್ಸ್ ವಿಶೇಷ ಮಕ್ಕಳ ಶಾಲೆಯಲ್ಲಿ 95ನೇ ಸ್ವಚ್ಛತೆಯ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಅಧ್ಯಕ್ಷರಾದ ಕೇಶವ ಸಾಲ್ಯಾನ್, ಡಾ ಟಿ ಆರ್ ಶೆಟ್ಟಿ, ಡಾ. ರಾಜಮೋಹನ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್ ಕೋಟೆಕಾರ ಮಾತನಾಡಿ “ಸ್ವಚ್ಛತಾ ಅಭಿಯಾನದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಹಾಗೂ ನಮ್ಮ ತ್ಯಾಜ್ಯ ನಮ್ಮ ಹೊಣೆ ಎನ್ನುವುದನ್ನು ತಿಳಿಯಬೇಕು” ಎಂದರು. ಸ್ವಚ್ಛ ಸುರತ್ಕಲ್ ಅಭಿಯಾನದ ಪ್ರಮುಖರಾದ ಸತೀಶ್ ಸದಾನಂದ ನಿರೂಪಿಸಿ ಸ್ವಾಗತಿಸಿದರು.

ಗಣೇಶಪುರ : ಶ್ರೀಶಾರದ ಭಜನಾ ಮಂಡಳಿಯಲ್ಲಿ ಜೆ.ಸಿ.ಆಯ್ ಗಣೇಶಪುರ ಇವರ ಸಹಯೋಗದಲ್ಲಿ ಸ್ವಚ್ಛ ಭಾರತ ಅಭಿಯಾನ ಕುರಿತು 96ನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಪ್ರಯುಕ್ತ ಸ್ವಚ್ಛತೆಯ ಮಹತ್ವ, ಹಸಿಕಸ ಒಣಕಸದ ನಿರ್ವಹನೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಿತು. ಅಧ್ಯಕ್ಷರಾದ ಉದಯಕುಮಾರ, ಡಾ. ಸಂಪತ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೃಷ್ಣಾಪುರ: ಶ್ರಿಕೃಷ್ಣ ಭಜನಾ ಮಂದಿರ ಕೃಷ್ಣಾಪುರದಲ್ಲಿ ಭಜನಾ ಮಂಡಳಿಯ ಸದಸ್ಯರಿಗೆ 97ನೇ ಸ್ವಚ್ಛತಾ ಜನ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದಿನೇಶ ಬಂಗೇರಾ ಸ್ವಾಗತಿಸಿದರು. ರಮೇಶ್ ಎಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಿನೇಶ್ ಧನ್ಯವಾದ ಸಮರ್ಪಣೆ ಮಾಡಿದರು.

ಸರಿಪಳ್ಳ: ಸರಸ್ವತಿ ಫ್ರೇಂಡ್ಸ್ ಸರ್ಕಲ್ ಸರಿಪಳದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರಿಗೆ 98ನೇ ಸಂಪರ್ಕ ಅಭಿಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಭಿಯಾನದ ಪ್ರಮುಖರಾದ ಉಮಾನಾಥ್ ಕೋಟೆಕಾರ್, ಸತೀಶ್ ಸದಾನಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಸ್ವಚ್ಛತಾ ಜನಸಂಪರ್ಕ ಅಭಿಯಾನದ ನೇತೃತ್ವವನ್ನು ಉಮಾನಾಥ್ ಕೋಟೆಕಾರ್ ವಹಿಸಿದ್ದರು. ಸತೀಶ್ ಸದಾನಂದ ಕಾರ್ಯಕ್ರಮಗಳನ್ನು ಸಂಘಟಿಸಿದರು ಹಾಗೂ ನಲ್ಲೂರು ಸಚಿನ್ ಶೆಟ್ಟಿ ಮಡಕೆ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಎಂಆರ್‍ಪಿಎಲ್ ಸಂಸ್ಥೆ ಈ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿದೆ.


Spread the love

Exit mobile version