Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5 ನೇ ವಾರದ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5 ನೇ ವಾರದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5 ನೇ ವಾರದ ವರದಿ

ಮಂಗಳೂರು : 5 ನೇ ವಾರದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನಕ್ಕೆ 3ನೇ ಡಿಸೆಂಬರ್ 2017 ಭಾನುವಾರದಂದು ಕರಂಗಲ್ಪಾಡಿಯ ಸುಬ್ರಮಣ್ಯ ಸದನದ ಎದುರಿಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಸರಿಯಾಗಿ 7:30 ಕ್ಕೆ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಿತಕಾಮಾನಂದಜಿ ಘನ ಉಪಸ್ಥಿತಿಯಲ್ಲಿ ಮಂಗಳೂರು ಹಿರಿಯರ ಸಂಘದ ಕಾರ್ಯದರ್ಶಿ ರಮೇಶ್ ರಾವ್ ಹಾಗೂ ಲೆಕ್ಕ ಪರಿಶೋಧಕ ನಾಗರಾಜ್ ಶರ್ಮ ಹಸಿರು ನಿಶಾನೆ ತೋರಿ ಐದನೇ ವಾರದ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಬ್ರಮಣ್ಯ ಸಭಾದ ಅಧ್ಯಕ್ಷ  ಎಂ ಆರ್ ವಾಸುದೇವ್, ಶ್ರೀ ಕಾಂತ್ ರಾವ್ ಉಪಸ್ಥಿತರಿದ್ದರು.

ಶ್ರಮದಾನ: ಸುಮಾರು 150 ಕ್ಕೂ ಅಧಿಕ ಸ್ವಯಂ ಸೇವಕರು ಆಭಿಯಾನದಲ್ಲಿ ಪಾಲ್ಗೊಂಡರು. ಬೆಳಿಗ್ಗೆ 7-30 ರಿಂದ ಪೂರ್ವಾಹ್ನ 11-30 ವರೆಗೂ ಶ್ರಮದಾನ ಜರುಗಿತು. ಮೊದಲಿಗೆ ಸುಬ್ರಮಣ್ಯ ಸಭಾದ ಎದುರಿನ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಲಾಯಿತು. ಅಲ್ಲಿಂದ ಮುಂದೆ ಸಾಗಿ ಕೊಡಿಯಾಲ್ ಗುತ್ತು ರಸ್ತೆಯ ಕೂಡುರಸ್ತೆ ಹಾಗೂ ಬಿಜೈ ಚರ್ಚ್ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛ ಮಾಡಲಾಯಿತು. ಸಮಾಜ ಸೇವಕ ಶ್ರೀ ಸೌರಜ್ ಮುಂದಾಳತ್ವದಲ್ಲಿ ತೋಡುಗಳಿಗೆ ಇಳಿದು ಸ್ವಚ್ಛ ಮಾಡಿ ರಸ್ತೆಯಲ್ಲಿ ಹಾಗೂ ಅಕ್ಕಪಕ್ಕದಲ್ಲಿ ನಾಲ್ಕು ಟಿಪ್ಪರಗಳಷ್ಟಿದ್ದ ಕಸತ್ಯಾಜ್ಯವನ್ನು ತೆಗೆಯಲಾಯಿತು. ಕಲ್ಲು ಮಣ್ಣುಗಳಿಂದ ವಾಹನಗಳ ಸಂಚಾರಕ್ಕೆ ಅನನುಕೂಲವಾಗುತ್ತಿದ್ದ ಮಾರ್ಗವನ್ನು ಸರಿಪಡಿಸಲಾಗಿದೆ. ಸುಮಾರು 100 ಕ್ಕೂ ಅಧಿಕ ಜನ ಸ್ವಯಂ ಸೇವಕರು ಶ್ರಮವಹಿಸಿ ಸ್ವಚ್ಛಗೊಳಿಸಿದರು. ಪ್ರಾಧ್ಯಾಪಕ  ಶೇಷಪ್ಪ ಅಮೀನ್,  ರಾಮಕುಮಮಾರ್ ಬೇಕಲ್ ಶ್ರಮದಾನದ ನೇತೃತ್ವ ವಹಿಸಿದ್ದರು.ಮನಪಾ ಸದಸ್ಯ  ಪ್ರಕಾಶ್ ಸಾಲಿಯಾನ್ ಅಭಿಯಾನದಲ್ಲಿ ಪಾಲ್ಗೊಂಡರು.  ದಿಲ್ ರಾಜ್ ಆಳ್ವ ಹಾಗೂ  ಉಮಾನಾಥ್ ಕೋಟೆಕಾರ್ ಅಭಿಯಾನವನ್ನು ಸಂಯೋಜಿಸಿದರು.

ಕರಪತ್ರ ವಿತರಣೆ: ಸ್ವಚ್ಛತೆಯ ಜೊತೆಜೊತೆ ಜಾಗೃತಿ ಎಂಬ ಧ್ಯೇಯೋದ್ದೇಶದೊಂದಿಗೆ ಇಂದು ಕೊಡಿಯಾಲ್ ಗುತ್ತು, ಕರಂಗಲ್ಪಾಡಿಯ ಮನೆ ಮನೆಗೆ ತೆರಳಿ ಪರಿಸರವನ್ನು ಶುಚಿಯಾಗಿಡಲು ಸಹಕರಿಸುವಂತೆ ವಿನಂತಿಸಲಾಯಿತು. ಅಧ್ಯಾಪಕ  ಪ್ರತಿಮ್ ಕುಮಾರ್ ನಿರ್ದೇಶನದಲ್ಲಿ . ಎಸ್ ಎಂ ಕುಶೆ ಶಾಲಾ ವಿದ್ಯಾರ್ಥಿಗಳು ಮನೆ ಮನೆ ಭೇಟಿ ನೀಡಿ ಸ್ವಚ್ಛತಾ ಕರಪತ್ರ ಹಂಚಿದರು. ನಿವೇದಿತಾ ಬಳಗದ ಸದಸ್ಯರೂ ಅವರೊಂದಿಗೆ ಕೈ ಜೋಡಿಸಿದರು.

ನಾಮಫಲಕಗಳ ನವೀಕರಣ: ಸ್ವಚ್ಛತೆಯೊಂದಿಗೆ ಜನೋಪಯೋಗಿ ಕಾರ್ಯಗಳನ್ನು ಇಂದು ಹಮ್ಮಿಕೊಳ್ಳಲಾಯಿತು. ಕೊಡಿಯಾಲ್ ಗುತ್ತು ಮಾರ್ಗದಲ್ಲಿರುವ 5 ನಾಮಫಲಕಗಳು ಕಣ್ಣಿಗೆ ಕಾಣದಷ್ಟು ಮಸುಕಾಗಿದ್ದವು. ಅವುಗಳನ್ನು ಶುಚಿಗೊಳಿಸಿ ಬಣ್ಣಬಳಿದು ಸುಂದರವಾದ ಅಕ್ಷರಗಳಿಂದ ಹೆಸರುಗಳನ್ನು ಬರೆಯಿಸಲಾಗಿದೆ.

ನಿತ್ಯ ಜಾಗೃತಿ: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಪ್ರತಿನಿತ್ಯ ಸಾಯಂ 5 ಗಂಟೆಯಿಂದ ಸುಮಾರು ಎರಡು ಗಂಟೆಗಳ ಕಾಲ ಜಾಗೃತಿ ಅಭಿಯಾನ ನಡೆಯುತ್ತಿದೆ. ಪ್ರತಿನಿತ್ಯ ಕನಿಷ್ಟ ಸುಮಾರು ನೂರು ಮನೆಗಳನ್ನು ಸಂದರ್ಶಿಸಿ ಮನೆ ಹಾಗೂ ಪರಿಸರವನ್ನು ಶುಚಿಯಾಗಿಡುವಂತೆ ಸಂಕಲ್ಪಿಸುವಂತೆ ವಿನಂತಿಸಲಾಗುತ್ತಿದೆ. ಅಂಗಡಿ ವರ್ತಕರನ್ನೂ ಭೇಟಿ ಮಾಡಿ ಕರಪತ್ರಗಳನ್ನು ಹಂಚಿ ತ್ಯಾಜ್ಯವನ್ನು ಅಲ್ಲಲ್ಲಿ ಬಿ ಸಾಡದಂತೆ ಸಂಕಲ್ಪಿಸಿ ಸ್ವಚ್ಛ ಮಂಗಳೂರಿನಲ್ಲಿ ಭಾಗಿಯಾಗುವಂತೆ ಕೋರಿಕೊಳ್ಳಲಾಗುತಿದೆ. ಕಳೆದ 24 ದಿನಗಳಿಂದ ನಿತ್ಯ ನಡೆದುಕೊಂಡು ಬರುತ್ತಿರುವ ಈ ಅಭಿಯಾನದಲ್ಲಿ ಸುಮಾರು 2500 ಮನೆಗಳನ್ನು ಸಂದರ್ಶಿಸಿ ಸ್ವಚ್ಛತೆಯ ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ. 24 ತಂಡಗಳು ನಿತ್ಯ ಜಾಗೃತಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಇಡೀ ವರ್ಷದಲ್ಲಿ ಒಟ್ಟು 30 ಸಾವಿರ ಮನೆಗಳಿಗೆ ಭೇಟಿ ನೀಡಬೇಕೆಂಬ ಗುರಿ ಹೊಂದಲಾಗಿದೆ.

ಸ್ವಚ್ಛ ಮನಸ್ಸು ಅಭಿಯಾನ : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಮುಖ ಅಂಗವಾದ ಸ್ವಚ್ಛ ಮನಸ್ಸು ಅಭಿಯಾನ  ರಂಜನ್ ಬೆಳ್ಳರಪಾಡಿ ನೇತೃತ್ವದಲ್ಲಿ ಮಂಗಳೂರು ನಗರ ಹಾಗೂ ಹೊರವಲಯದಲ್ಲಿ 100 ಶಾಲೆಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಈ ತಿಂಗಳಲ್ಲಿ 100 “ಸ್ವಚ್ಛತಾ ಚಿಂತನ” ಕಾರ್ಯಕ್ರಮಗಳನ್ನು ಎಂಬ ತಿಂಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಲಾಯಿತು. 2017 ರ ಡಿಸೆಂಬರ್ ತಿಂಗಳಿನಲ್ಲಿ “ಸ್ವಚ್ಛತಾ ಸ್ಪರ್ಧಾ” ಎನ್ನುವ ಕಾರ್ಯಕ್ರಮ 100 ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತಿದೆ. ಹತ್ತು ಸಹಸ್ರ ಸ್ವಚ್ಛತಾ ಸೇನಾನಿಗಳನ್ನು ಗುರುತಿಸಿ ನೋಂದಣಿ ಮಾಡಿಕೊಳ್ಳಲಾಗಿದೆ.


Spread the love

Exit mobile version