Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ದ್ವಿತೀಯ ಭಾನುವಾರದ ಶ್ರಮದಾನ

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ದ್ವಿತೀಯ ಭಾನುವಾರದ ಶ್ರಮದಾನ

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ದ್ವಿತೀಯ ಭಾನುವಾರದ ಶ್ರಮದಾನ

ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ದ್ವಿತೀಯ ಶ್ರಮದಾನವನ್ನು ಭಾನುವಾರ 16-12-2018 ರಂದು ಉರ್ವಾ ಪರಿಸರದಲ್ಲಿ ಆಯೋಜನೆ ಮಾಡಲಾಗಿತ್ತು. ಬೆಳಿಗ್ಗೆ 7-30 ಕ್ಕೆ ಜಿಲ್ಲಾ ಪಂಚಾಯತ್ ಪ್ರವೇಶ ದ್ವಾರದ ಬಳಿ ಶ್ರಮದಾನಕ್ಕೆ ಚಾಲನೆ ಕೊಡಲಾಯಿತು. ಪೆÇ್ರೀ. ವಿಜಯ್ ಮೆನನ್, ಅಂತರಾಷ್ಟ್ರೀಯ ಕಾಪೆರ್Çೀರೇಟ್ ತರುಬೇತುದಾರರು, ಕೊಚ್ಚಿ ಇವರು ಹಾಗೂ ಶ್ರೀ ಗುರುದತ್ತ ಶೆಣೈ, ಅಧ್ಯಕ್ಷರು, ಪೈಂಟ್ ಡೀಲರ್ಸ್ ಅಸೋಶಿಯೇಶನ್, ಮಂಗಳೂರು ಜಂಟಿಯಾಗಿ ಅಭಿಯಾನವನ್ನು ಶುಭಾರಂಭಗೊಳಿಸಿದರು.

ಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶ್ ಕಾರ್ಣಿಕ್ ಅತಿಥಿಗಳನ್ನು ಹಾಗೂ ಸ್ವಯಂ ಸೇವಕರನ್ನು ಸ್ವಾಗತಿಸಿದರು. ನಂತರ ಪೆÇ್ರೀ. ವಿಜಯ್ ಮೆನನ್ ಮಾತನಾಡಿ “ಸ್ವಚ್ಛ ಮಂಗಳೂರು ಅಭಿಯಾನವೊಂದು ಪ್ರಜ್ಞಾವಂತಿಕೆಗೆ ಹಾಗೂ ನೈಜ ಮಾನವೀಯತೆಗೆ ಸಾಕ್ಷಿಯಾಗಿದೆ. ಮಾನವನಲ್ಲಿ ಆತ್ಮಜಾಗೃತಿಯುಂಟಾದ ಪರಿಣಾಮ ಈ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛತಾ ಅಭಿಯಾನ ನಡೆದುಕೊಂಡು ಬರುತ್ತಿದೆ. ಭವಿಷ್ಯ ಭಾರತಕ್ಕೆ ಇಂತಹ ಅಭಿಯಾನಗಳು ಅತ್ಯಂತ ಅತ್ಯವಶ್ಯಕವಾಗಿವೆ. ಇದು ಕೇವಲ ಸ್ವಚ್ಛತೆಯಲ್ಲ; ರಾಷ್ಟ್ರ ಕಟ್ಟುವ ಕಾರ್ಯವಾಗಿದೆ. ಈ ಅಭಿಯಾನದ ಬಗ್ಗೆ ಅಲ್ಲಲ್ಲಿ ನಾನು ಉಲ್ಲೇಖಿಸುತ್ತಿದ್ದೆ, ಇದೀಗ ಈ ಕಾರ್ಯದಲ್ಲಿ ಭಾಗಿವಾಗುವ ಸದವಕಾಶ ದೊರೆತುದದು ನನ್ನ ಸೌಭಾಗ್ಯ. ಸ್ವಚ್ಛ ಮಂಗಳೂರು ಕಾರ್ಯ ಇಡೀ ಭಾರತಕ್ಕೆ ಮಾದರಿ ಕಾರ್ಯವಾಗಿದೆ.” ಎಂದು ಹೇಳಿ ಸೇರಿದ್ದ ಕಾರ್ಯಕರ್ತರಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಅನಿರುದ್ಧ ನಾಯಕ್, ಸುರೇಶ್ ಶೆಟ್ಟಿ, ಪೈಂಟ್ ಡೀಲರ್ಸ್ ಅಸೋಶಿಯೇಶನ್ ಉಪಾಧ್ಯಕ್ಷ ಮಹೇಶ್ ಕಾಮತ್, ಖಜಾಂಚಿ ಪದ್ಮನಾಭ ನಾಯಕ, ಶ್ರೀ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.

ಮೊದಲಿಗೆ ಪೆÇ್ರೀ, ವಿಜಯ್ ಮೆನನ್, ಸ್ವಾಮಿ ಏಕಗಮ್ಯಾನಂದಜಿ ಹಾಗೂ ಸ್ವಯಂ ಸೇವಕರು ಊರ್ವಾದಲ್ಲಿರುವ ತ್ಯಾಜ್ಯದಿಂದ ತುಂಬಿದ ಸ್ಥಳವನ್ನು ಕಸಗುಡಿಸುವ ಮೂಲಕ ಸ್ವಚ್ಛತಾ ಕಾರ್ಯ ಆರಂಭಿಸಿದರು. ಒಟ್ಟು ನಾಲ್ಕು ಗುಂಪುಗಳಾಗಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಹಿರಿಯ ಕಾರ್ಯಕರ್ತರು ತ್ಯಾಜ್ಯ ತುಂಬಿದ ಸ್ಥಳದಲ್ಲಿ ಕಾರ್ಯ ಆರಂಭಿಸಿದರು. ಪೈಂಟ್ ಡೀಲರ್ಸ್ ಅಸೋಶಿಯೆಶನ್ ಸದಸ್ಯರು ಉರ್ವಾ ಸರಕಾರಿ ನೌಕರರ ಕ್ವಾಟರ್ಸ್ ಎದುರಿನ ರಸ್ತೆಯಲ್ಲಿ ಸ್ವಚ್ಛತೆಯನ್ನು ಹಮ್ಮಿಕೊಂಡರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಉರ್ವಾ ಮುಖ್ಯರಸ್ತೆ, ಇಂಫೆÇೀಸಿಸ್ ಎದುರು ರಸ್ತೆ ಹಾಗೂ ಮಾರ್ಗವಿಭಾಜಕಗಳನ್ನು ಗುಡಿಸಿ ಹಸನುಗೊಳಿಸಿದರು. ಹಿಂದೂ ವಾರಿಯರ್ಸ್ ಯುವಕರು ಇಂಫೆÇೀಸಿಸ್ ಬಿಲ್ಡಿಂಗ್ ಪಕ್ಕದ ರಸ್ತೆಯನ್ನು ಶುಚಿಗೊಳಿದರು. ಪ್ರಮುಖ ಕಾರ್ಯಕರ್ತರು ಅಲ್ಲಲ್ಲಿ ಮರಗಳಿಗೆ ಹಾಕ್ಕಿದ್ದ ನಿರುಪಯುಕ್ತ ಕಬ್ಬಿಣದ ಬೇಲಿಯನ್ನು ತೆರವುಗೊಳಿಸಿದರು.

ತ್ಯಾಜ್ಯರಾಶಿಗಳ ತೆರವು ಹಾಗೂ ಪಾರ್ಕ್ ಯೋಜನೆ : ಉರ್ವಾ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಹೋಗುವ ಮಾರ್ಗದ ಪಕ್ಕದಲ್ಲಿರುವ ಇರುವ ಸ್ಥಳವೊಂದು ಕಸ ಬಿಸಾಡುವ ಸ್ಥಳವಾಗಿ ಹಲವು ವರ್ಷಗಳಿಂದ ನಿರ್ಲಕ್ಷಕ್ಕೆ ಒಳಗಾಗಿತ್ತು. ಸ್ವಚ್ಛ ಮಂಗಳೂರು ಕಾರ್ಯಕರ್ತರು ಅದನ್ನು ಗುರುತಿಸಿ ಅದನ್ನು ಸುಂದರ ತಾಣವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿದರು. ಅದರ ಮೊದಲ ಪ್ರಯತ್ನವಾಗಿ ಅದನ್ನಿಂದು ದಿಲ್ ರಾಜ್ ಆಳ್ವ, ಸುಧೀರ ವಾಮಂಜೂರು, ಮೆಹಬೂಬ್ ಖಾನ್ ಮಾರ್ಗದರ್ಶನದಲ್ಲಿ ಜೆಸಿಬಿ, ಟಿಪ್ಪರ್ ಬಳಸಿಕೊಂಡು ಅಲ್ಲಿದ್ದ ಕಲ್ಲು ಮಣ್ಣು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಜೊತೆಗೆ ನೆಲವನ್ನು ಸಮತಟ್ಟುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅಲ್ಲೊಂದು ಸುಂದರ ಪಾರ್ಕ್ ಮಾಡಿ ಅಲ್ಲಿ ಅಕ್ಕುಪ್ರಶೆರ್ ವಾಕಿಂಗ್ ಟ್ರಾಕ್, ಒಪನ್ ಜಿಮ್ ಹಾಗೂ ಸುಂದರ ತೋಟವನ್ನು ಮಾಡಲು ಯೋಜನೆಯನ್ನು ಸಿದ್ಧಗೊಳಿಸಲಾಗಿದೆ.

ಅಪಾಯಕಾರಿ ಬೇಲಿಗಳ ತೆರವು: ಹೊಸತಾಗಿ ನೆಟ್ಟ ಸಸಿಗಳು ಸುರಕ್ಷಿತವಾಗಿರಬೇಕೆಂದು ಹಾಕಲಾಗಿದ್ದ ಕಬ್ಬಿಣದ ಬೇಲಿಗಳು ಮರ ಬೆಳೆದಾಗ ಅದಕ್ಕೆ ವಿನಾಶಕಾರಿಯಾಗಿ ಪರಿಣಮಿಸುತ್ತಿದ್ದನ್ನು ಉರ್ವಾ ಮುಖ್ಯರಸ್ತೆಯಲ್ಲಿ ಕಾಣಬಹುದಾಗಿತ್ತು, ಮರದಲ್ಲಿ ಕಬ್ಬಿಣದ ಬೇಲಿಗಳು ಸಿಕ್ಕಿಹಾಕಿಕೊಂಡ ದೃಶ್ಯಗಳು ಅಲ್ಲಿದ್ದವು. ಇಂದು ಅವುಗಳನ್ನು ನುರಿತ ಕಾರ್ಯಕರ್ತರು ಕಬ್ಬಿಣ ತುಂಡರಿಸುವ ಯಂತ್ರವನ್ನು ಬಳಸಿಕೊಂಡು ತೆರವುಗೊಳಿಸಿದ್ದಾರೆ. ಸುಮಾರು ಇಪ್ಪತ್ತು ಮರಗಳಿಗೆ ವಿನಾಶಕಾರಿಯಾಗಿದ್ದ ಬೇಲಿಗಳನ್ನು ಶ್ರಮವಹಿಸಿ ಕಾರ್ಯಕರ್ತರಾದ ಮುಖೇಶ್ ಆಳ್ವ, ಪ್ರವೀಣ ಶೆಟ್ಟಿ, ಉಮಾಕಾಂತ್, ಪ್ರೀತಮ್ ಮುಗಿಲ್ ಮತ್ತಿತರರು ಕತ್ತರಿಸಿ ತೆಗೆದಿದ್ದಾರೆ. ಜೊತೆಗೆ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಮರಗಳನ್ನು ಅವಶ್ಯವಿದ್ದಷ್ಟು ಕತ್ತರಿಸಿ ಸುಂದರಗೊಳಿಸಿದ್ದಾರೆ.

ಅಭಿಯಾನದ ಪ್ರಧಾನ ಸಂಯೋಜಕರಾದ ಉಮಾನಾಥ ಕೋಟೆಕಾರ್ ಕಾರ್ಯಕ್ರಮವನ್ನು ಮುನ್ನಡೆಸಿದರು. ಸುಭೋದಯ ಆಳ್ವ, ಪುನೀತ್ ಪೂಜಾರಿ, ಸುರೇಂದ್ರ ಶೆಣೈ, ಮೋಹನ್ ಭಟ್, ದಾಮೋದರ್ ಭಟ್, ನಳಿನಿ ಭಟ್, ಮನಪಾ ಆರೋಗ್ಯ ಅಧೀಕ್ಷಕಿ ಆಶ್ವಿನಿ, ಶ್ರೀನಿವಾಸ್ ಇನ್ಸಟ್ಯೂಟ್ ಅಫ್ ಟೆಕ್ನಾ¯ಜಿ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಶ್ರಮದಾನ ಮಾಡಿದರು

ಸ್ವಚ್ಛ ಸುರತ್ಕಲ್ 9ನೇ ಭಾನುವಾರದ ಸ್ವಚ್ಛತೆ: 9ನೇ ಭಾನುವಾರದ ಸ್ವಚ್ಛ ಸುರತ್ಕಲ್ ಶ್ರಮದಾನÀವನ್ನು ಹೊಸಬೆಟ್ಟು ಕಕ್ಕೆಸಾಲು, ಹೊನ್ನಕಟ್ಟೆ ಪರಿಸರದಲ್ಲಿ 16-12-18 ರಂದು ಬೆಳಿಗ್ಗೆ ಆಯೋಜನೆ ಮಾಡಲಾಯಿತು. ಒಎಂಪಿಎಲ್ ಸಂಸ್ಥೆಯ ಅಧಿಕಾರಿ ಜಯದೀಪ್ ಘೋಷ್ ಶ್ರಮದಾನವನ್ನು ಶುಭಾರಂಭ ಮಾಡಿದರು. ಸ್ವಚ್ಛ ಸುರತ್ಕಲ್ ಸಂಚಾಲಕ ಪೆÇ್ರೀ. ರಾಜಮೋಹನ್ ರಾವ್, ಮನಪಾ ಸದಸ್ಯ ಗಣೇಶ ಹೊಸಬೆಟ್ಟು ಶ್ರೀಕೃಷ್ಣ ಮೂರ್ತಿ, ಸುರೇಂದ್ರ ನಾಯಕ್, ¸ತೀಶ್ ಸದಾನಂದ ಮತ್ತಿತರು ಭಾಗವಹಿಸಿದ್ದರು. ಗೋವಿಂದದಾಸ್ ಕಾಲೇಜು, ನಾಗರಿಕ ಹಿತರಕ್ಷಣಾ ಸಮಿತಿ ಹೊಸಬೆಟ್ಟು, ಮಾರ್ಬಲ್ ಅಂಡ್ ಗ್ರಾನೈಟ್ ಅಸೋಸಿಯೇಶನ್ ಕುಳಾಯಿ, ಬೃಂದಾವನ ಹಿತವೇದಿಕೆ, ಯುವಚೇತನ ಹೊಸಬೆಟ್ಟು ಹೀಗೆ ಹಲವು ಸಂಘಸಂಸ್ಥೆಗಳು ಸ್ವಚ್ಛತೆಯಲ್ಲಿ ಕೈಜೋಡಿದ್ದವು. ಈ ಅಭಿಯಾನಕ್ಕೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ಸಂಸ್ಥೆ ಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.


Spread the love

Exit mobile version