ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನ 

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನ 

ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನವನ್ನು 2019ನೇ ಜನವರಿ ತಿಂಗಳಲ್ಲಿ ವಿವಿಧೆಡೆಗಳಲ್ಲಿ ಆಯೋಜನೆ ಮಾಡಲಾಗಿತ್ತು. ದಿನಾಂಕ 1-1-2019 ರಿಂದ 31-1-2019 ವರೆಗೆ ಜನಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. 24 ಸಂಸ್ಥೆಗಳಲ್ಲಿ ಸಂಪರ್ಕ ಅಭಿಯಾ£ವನ್ನು ಹಮ್ಮಿಕೊಂಡು, ಜಾಗೃತಿ ಕಾರ್ಯ ಮಾಡಲಾಯಿತು. ಈ ಕಾರ್ಯಕ್ರಮದಡಿಯಲ್ಲಿ ಇಲ್ಲಿಯವರೆಗೆ ಒಟ್ಟು 1500 ಜನರು ಮನೆಯಲ್ಲಿನ ಹಸಿಕಸ ನಿರ್ವಹಣೆಗಾಗಿ ಗೊಬ್ಬರ ಮಡಕೆಗಳಿಗಾಗಿ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

ಜಿಲ್ಲಾ ಸಣ್ಣ ಕೈಗಾರಿಕಾ ಸಂಘ – ಯಯ್ಯಾಡಿಯಲ್ಲಿ ನೇತ್ರಾವತಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಹಯೋಗದಲ್ಲಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜ್ಯೋತಿ ಶೆಟ್ಟಿ ಹಾಗೂ ಮಂದಾಕಿನಿ ಉಪಾಧ್ಯಾಯ ಅತಿಥಿಗಳಾಗಿ ಭಾಗವಹಿಸಿದರು. ಸದಾನಂದ ಉಪಾಧ್ಯಾಯ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.

ಜಿಲ್ಲಾ ಪಂಚಾಯತ್ – ದಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಭವನದಲ್ಲಿ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನಡೆಯಿತು. ಅಭಿಯಾನದ ಸಂಯೋಜಕ ಉಮಾನಾಥ್ ಕೋಟೆಕಾರ ಮಾತನಾಡಿ “ಪ್ರತಿಯೊಬ್ಬ ಸರಕಾರಿ ಉದ್ಯೋಗಿಗಳು ಹಸಿಕಸವನ್ನು ಮನೆಯಲ್ಲಿಯೇ ನಿರ್ವಹಿಸಿದರೆ ಸಾರ್ವಜನಿಕರನ್ನು ಪೆÇ್ರೀತ್ಸಾಹಿಸಲು ಅನುಕೂಲವಾಗುತ್ತದೆ. ಆದ್ದರಿಂದ ಸರಕಾರಿ ಉದ್ಯೋಗಿಗಳು ಹಸಿಕಸವನ್ನು ನಿರ್ವಹಿಸಿದರೆ ಉತ್ತಮ” ಎಂದು ತಿಳಿಸಿದರು. ನವೀನ್ ಕೋಣಾಜೆ ನಿರೂಪಿಸಿದರು.

ಶ್ರೀ ಸುಬ್ರಮಣ್ಯ ಸಭಾ ಬಳಗ: ಕರಂಗಲಪಾಡಿಯಲ್ಲಿರುವ ಶ್ರೀಸುಬ್ರಮಣ್ಯ ಸದನದಲ್ಲಿ ಸ್ವಚ್ಛತೆಯ ಮಹತ್ವದ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಯೋಜಕ ಶ್ರೀಕಾಂತ ರಾವ್, ಶ್ರೀ ಸುಬ್ರಮಣ್ಯ ಸಭಾದ ಅಧ್ಯಕ್ಷ ಹರ್ಷಕುಮಾರ ಕೇದಿಗೆ ಸೇರಿದಂತೆ ಅನೇಕ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಹವ್ಯಕ ಸಭಾ: ನಂತೂರ ಶ್ರೀಭಾರತಿ ಕಾಲೇಜಿನ ಆವರಣದಲ್ಲಿ ಹವ್ಯಕ ಸಭಾದ ಸದಸ್ಯರಿಗಾಗಿ ಸ್ವಚ್ಛತಾ ಜನಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ರಾಜೇಂದ್ರ ಪ್ರಸಾದ ಸ್ವಚ್ಛತೆಯ ಕುರಿತು ಮಾತನಾಡಿದರು. ಹವ್ಯಕ ಸಭಾದ ಅಧ್ಯಕ್ಷರಾದ ಬಾಲಸುಬ್ರಮಣ್ಯ ಸೇರಿದಂತೆ ಅನೇಕರು ಕಾರ್ಯಕ್ರಮದ ಪ್ರಯೋಜನ ಪಡೆದರು.

ಆಕಾಶವಾಣಿ: ಕದ್ರಿ ಆಕಾಶವಾಣಿ ಕೇಂದ್ರದಲ್ಲಿರುವ ಉದ್ಯೋಗಿಗಳಿಗಾಗಿ ಜನಸಂಪರ್ಕ ಅಭಿಯಾನದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಕಾಶವಾಣಿ ಸಹಾಯಕ ನಿರ್ದೇಶಕಿ ಶ್ರೀಮತಿ ಉಷಲತಾ ಸರಪಾಡಿ ಮುಖ್ಯ ಅಬ್ಯಾಗತರಾಗಿ ಭಾಗವಹಿಸಿದರು. ಉಮಾನಾಥ್ ಕೋಟೆಕಾರ್ ಸ್ವಚ್ಛ ಮಂಗಳೂರು ಅಭಿಯಾನದ ಬಗ್ಗೆ ಮಾತನಾಡಿದರು. ಶ್ಯಾಮಪ್ರಸಾದ ಕಾರ್ಯಕ್ರಮವನ್ನು ನಿರ್ವಹಿಸಿದರು.

ಆದರ್ಶ ಫ್ರೇಂಡ್ಸ್ ಅಸೋಸಿಯೆಶನ್ – ಚಿಲಿಂಬಿಯಲ್ಲಿರುವ ಆದರ್ಶ ಫ್ರೇಂಡ್ಸ್ ಸಭಾಂಗಣದಲ್ಲಿ ‘ಹಸಿಕಸದ ನಿರ್ವಹಣೆ’ ಕುರಿತಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಧ್ಯಕ್ಷರಾದ ಮಿಥುನ್ ಗೌತಮ್, ಅಜಿತ್ ವಸಂತ ಹಾಗೂ ಅನೇಕ ಯುವಕರು ಭಾಗಿಯಾಗಿದ್ದರು. ವಿಠಲದಾಸ ಪ್ರಭು ಕಾರ್ಯಕ್ರಮದ ಉಸ್ತುವಾರಿ ವಹಿಕೊಂಡರು.

ಕ್ಷೇಮ – ದೇರಳಕಟ್ಟೆಯಲ್ಲಿರುವ ಜಸ್ಟಿಸ್ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ ವೈದ್ಯರಿಗಾಗಿ ಮಣ್ಣಿನ ಮಡಿಕೆಯಲ್ಲಿ ಕಸದ ನಿರ್ವಹಣೆಯ ಕುರಿತು ಪ್ರ್ರಾತ್ಯಕ್ಷಿಕೆ ನಡೆಯಿತು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ ಸತೀಶ್ ಭಂಡಾರಿ ಮುಖ್ಯ ಅಭ್ಯಾಗತರಾಗಿ ಭಾಗಿಯಾಗಿ ಮಾತನಾಡಿದರು. ಡಾ ಸತೀಶ್ ರಾವ್ ಸ್ವಚ್ಛತಾ ಅಭಿಯಾನದ ಬಗ್ಗೆ ತಿಳಿಸಿದರು. ಸಚಿನ್ ಶೆಟ್ಟಿ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನೀಡಿದರು. ಡಾ. ಶಶಿಕುಮಾರ್ ಕಾರ್ಯಕ್ರಮವನ್ನು ಸಂಘಟಿಸಿದರು.

ಮಹಿಳಾ ಒಕ್ಕೂಟ – ಉರ್ವಾ ಸ್ಟೋರ್ ನಲ್ಲಿರುವ ಮಹಿಳಾ ಒಕ್ಕೂಟದ ಸಭಾಭವನದಲ್ಲಿ ಸ್ವಚ್ಛ ಭಾರತ ಮಾಹಿತಿ ಶಿಬಿರ ನಡೆಯಿತು. ಮಂಗಳೂರು ತಾಲೂಕ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ, ಅನುರಾಧ, ಶೈಲಜಾ ಸತೀಶ್ ಸೇರಿದಂತೆ ಅನೇಕ ಗೃಹಿಣಿಯರು ಶಿಬಿರದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸ್ವಚ್ಛತೆಯಲ್ಲಿ ಮಹಿಳೆಯರ ಪಾತ್ರ ಕುರಿತು ಒತ್ತು ನೀಡಲಾಯಿತು.

ಲೀ ವೆಲ್ ಹೈಟ್ಸ್ ನಿವಾಸಿಗಳ ಸಂಘ: ಮುಳಿಹಿತ್ಲುವಿನಲ್ಲಿರುವ ಲೀ ವೆಲ್ ಹೈಟ್ಸ್ ಅಪಾರ್ಟಮೆಂಟ್‍ನಲ್ಲಿ ಹಸಿದ ನಿರ್ವಹಣೆಯ ಕಾರ್ಯಕ್ರಮ ಜರುಗಿತು. ಉಮಾನಾಥ್ ಕೊಟೆಕಾರ್ ಮಾತನಾಡಿ ಗೃಹಿಣಿಯರು ಮನೆಯಲ್ಲಿಯೇ ತ್ಯಾಜ್ಯವನ್ನು ನಿರ್ವಹಿಸುವಂತೆ ವಿನಂತಿಸಿದರು. ಪೆಟೊನ್ ಡಿಸೋಜಾ ಸಭೆ ನಿರ್ವಹಿಸಿದರು.

ಪಡುಪಣಂಬೂರು; ಗ್ರಾಮ ಪಂಚಾಯತ್ ಪಡುಪಣಂಬೂರು ಸಹಯೋಗದಲ್ಲಿ ಮಡಕೆ ಗೊಬ್ಬರದ ಕುರಿತ ವಿಶೇಷ ಕಾರ್ಯಾಗಾರವನ್ನು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯತ್ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಮತ್ತು ಅನೇಕ ಸ್ವಸಹಾಯ ಸಂಘಗಳ ಸದಸ್ಯರುಗಳು ಭಾಗಿಯಾಗಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್, , ಮಂಜುಳಾ ಜಿ, ಪಿಡಿಒ ಅನಿತಾ ಕ್ಯಾಥರಿನ್, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ ಕುಮಾರ್ ಬೊಳ್ಳೂರು, ಜೀವನ ಪ್ರಕಾಶ್ ಕಾಮೆರೊಟ್ಟು ಮತ್ತಿತರರು ಕಾರ್ಯಗಾರದಲ್ಲಿ ಭಾಗಿಯಾಗಿದ್ದರು.

ಭಾರತೀಯ ಜೀವ ವಿಮಾ ನಿಗಮ: ಹಂಪಣಕಟ್ಟೆಯಲ್ಲಿರುವ ಎಲ್ ಐ ಸಿ ಕಚೇರಿಯಲ್ಲಿ ಸ್ವಚ್ಛತಾ ಜನಸಂಪರ್ಕ ಪ್ರಯುಕ್ತ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನಡೆಯಿತು. ಹಿರಿಯ ಪ್ರಭಂಧಕರಾದ ರವಿರಾಜ್ ಮಾತನಾಡಿದರು. ಸಚಿನ್ ಶೆಟ್ಟಿ ಮಡಕೆ ಗೊಬ್ಬರದ ಉಪಯೋಗದ ಬಗ್ಗೆ ತಿಳಿಸಿದರು. ಪ್ರವೀಣ ಶೆಟ್ಟಿ ಸ್ವಾಗತಿಸಿದರು.

ಸುರತ್ಕಲ್: ಇಡ್ಯಾ ಪರಿಸರದಲ್ಲಿರುವ ಶ್ರೀಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಡಿಕೆ ಗೊಬ್ಬರದ ತಯಾರಿಕೆಯ ಕುರಿತು ಪ್ರಾತ್ಯಕ್ಷಿಕೆ ಜರುಗಿತು. ಸತೀಶ್ ಸದಾನಂದ ಸ್ವಚ್ಛತೆಯ ಕುರಿತು ಮಾತನಾಡಿದರು. ಪುಂಡಲೀಕ್ ಹೊಸಬೆಟ್ಟು. ಪೆÇ್ರೀ. ರಾಜಮೋಹನ್ ರಾವ್, ಸತೀಶ್ ರಾವ್ ಇಡ್ಯಾ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ರೋಟರಿ ಕ್ಲಬ್: ಮಣ್ಣಗುಡ್ಡೆಯಲ್ಲಿರುವ ಬಾಲಭವನದಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ ಸ್ವಚ್ಛತಾ ಜನಸಂಪರ್ಕ ಅಭಿಯಾನ ಜರುಗಿತು. ಸ್ವಚ್ಛತೆಯ ಮಹತ್ವ, ನಮ್ಮ ತ್ಯಾಜ್ಯ ನಮ್ಮ ಹೊಣೆಯ ಕುರಿತು ಸಂವಾದ, ಪ್ರಾತ್ಯಕ್ಷಿಕೆಗಳು ಜರುಗಿದವು. ಅಧ್ಯಕ್ಷರಾದ ಜಯಕುಮಾರ್, ಹರೀಶ್ ಶೆಟ್ಟಿ , ರಾಘವೇಂದ್ರ ನೆಲ್ಲಿಕಟ್ಟೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಆರ್ಟ್ ಆಫ್ ಲೀವಿಂಗ್ ಬಳಗ: ಉರ್ವಾದಲ್ಲಿರುವ ಶ್ರೀರಾಧಾಕೃಷ್ಣ ಮಂದಿರದಲ್ಲಿ ಆರ್ಟ್ ಆಫ್ ಲೀವಿಂಗ್ ಬಳಗದ ಸದಸ್ಯರಿಗಾಗಿ ಮನೆಯಲ್ಲಿ ಹಸಿ ಕಸ ನಿರ್ವಹಿಸುವ ಬಗ್ಗೆ ವಿಶೇಷ ಕಾರ್ಯಕ್ರಮ ನಡೆಯಿತು. ಸದಾಶಿವ ಕಾಮತ್, ಗೀತಾ ವಿಶುಕುಮಾರ್ ಹಾಗೂ ಅನೇಕ ಆಸಕ್ತರು ಭಾಗಿಯಾಗಿದ್ದರು.

ಸ್ಥೂರ್ತಿ ಮಹಿಳಾ ಮಂಡಳಿ: ಪದವಿನಂಗಡಿ ಕೊರಗಜ್ಜ ಸಭಾಭವನದಲ್ಲಿ ಸಾವಯವ ಗೊಬ್ಬರ ತಯಾರಿಕೆಯ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಚಿನ್ ಶೆಟ್ಟಿ ಇವರು ಅಡುಗೆ ಮನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿರ್ವಹಿಸುವ ವಿಧಾನವನ್ನು ತಿಳಿಸಿದರು. ಜಯಲಕ್ಷ್ಮೀ ಚಂದ್ರಹಾಸ, ಪ್ರಣವ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಜಿ ಆರ್ ಪ್ರಸಾದ್ ಮುಖ್ಯ ಅತಿಥಿಯಾಗಿದ್ದರು.

ಪಣಂಬೂರು ಮೊಗವೀರ ಸಭಾ: ಚಿತ್ರಾಪುರ ಮೊಗವೀರ ಸಭಾ ಅಂಗನವಾಡಿ ಕೇಂದ್ರದಲ್ಲಿ ಸಂಪರ್ಕ ಅಭಿಯಾನದ ಪ್ರಯುಕ್ತ ಕಸ ನಿರ್ವಹಣೆಯ ಕುರಿತು ಮಾಹಿತಿ ನೀಡಲಾಯಿತು. ಅಧ್ಯಕ್ಷರಾದ ಮಾಧವ ಸುವರ್ಣ, ಪೆÇ್ರೀ. ಕೃಷ್ಣಮೂರ್ತಿ ಮತ್ತಿತರರಿದ್ದರು. ಸ್ವಚ್ಛ ಸುರತ್ಕಲ್ ಅಭಿಯಾನದ ಮುಖ್ಯ ಸಂಯೋಜಕ ಸತೀಶ್ ಸದಾನಂದ ಕಾರ್ಯಕ್ರಮವನ್ನು ಸಂಯೋಜಿಸಿದರು.

ಸ್ಪಂದನ ಫ್ರೇಂಡ್ಸ್ ಸರ್ಕಲ್: ವಿದ್ಯಾದಾಯಿನೀ ಗ್ರಾಮೀಣ ಅಭಿವೃದ್ಧಿ ಹಾಗೂ ಕೃಷಿ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಕುಳಾಯಿಯಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮನಪಾ ಸದಸ್ಯ ಗಣೇಶ್ ಹೊಸಬೆಟ್ಟು ಅಭ್ಯಾಗತರಾಗಿದ್ದರು. ಸ್ಪಂದನ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರಾಜೇಂದ್ರನ್, ಬಾಲಕೃಷ್ಣ ರೈ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಜೆಸಿಐ: ಸುರತ್ಕಲ್ ನಲ್ಲಿರುವ ವಿರಾಟ್ ಸಭಾಭವನದಲ್ಲಿ ಜೆಸಿಐ ಸದಸ್ಯರಿಗೆ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ಹಾಗೂ ಸ್ವಚ್ಛತೆಯ ಮಾಹಿತಿ ಶಿಬಿರ ನಡೆಸಲಾಯಿತು. ಅಧ್ಯಕ್ಷರಾದ ಲೋಕೆಶ್ ರೈ, ಬಾಲಕೃಷ್ಣ ಎಚ್, ಪೆÇ್ರೀ.ರಾಜಮೋಹನ್ ರಾವ್, ಪ್ರಕಾಶ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸತೀಶ್ ಸದಾನಂದ ಹಾಗೂ ಉಮಾನಾಥ್ ಕೋಟೆಕಾರ್ ಸ್ವಚ್ಛತೆಯ ಕುರಿತು ಮಾಹಿತಿ ನೀಡಿ, ಸಂವಾದ ನಡೆಸಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ನಂದನೇಶ್ವರ ವಲಯ: ಕುಳಾಯಿಯಲ್ಲಿರುವ ಪಾಂಡುರಂಗ ಭಜನಾ ಮಂಡಳಿಯಲ್ಲಿ ಯೋಗಾಭ್ಯಾಸಿಗಳಿಗೆ ‘ನಮ್ಮ ತ್ಯಾಜ್ಯ ನಮ್ಮ ಹೊಣೆ’ ಪರಿಕಲ್ಪನೆಯಲ್ಲಿ ಮಾಹಿತಿ ಶಿಬಿರವನ್ನು ಆಯೋಜಿಸಲಾಯಿತು. ಭರತ್ ಕುಮಾರ್, ತೇಜಪಾಲ್, ಹರೀಶ್ ಕೋಟ್ಯಾನ್ ಮತ್ತಿತರರು ಭಾಗವಹಿಸಿದ್ದರು.

ನಾಗರಿಕ ಸಮಿತಿ ಕುಳಾಯಿ: ಶ್ರೀ ವೆಂಕಟ್‍ರಮಣ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಾಗರಿಕ ಸಮಿತಿಯ ಸದಸ್ಯರಿಗೆ ಹಸಿಕಸವನ್ನು ಮಡಕೆಯಲ್ಲಿ ಹಾಕಿ ಗೊಬ್ಬರ ಮಾಡುವ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಅಧ್ಯಕ್ಷರಾದ ಭರತ್ ಶೆಟ್ಟಿ, ಎಂ ವೆಂಕಟ್ ರಾವ್, ಗಣೇಶ್ ಹೊಸಬೆಟ್ಟು, ಜಯಶ್ರೀ ಮತ್ತೂ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಚಿತ್ರಾಪುರ: ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಸ್ವಚ್ಛ ಸುರತ್ಕಲ್ ಅಭಿಯಾನದ ಪ್ರಧಾನ ಸಂಯೋಜಕ ಸತೀಶ್ ಸದಾನಂದ ಸ್ವಚ್ಚತೆಯ ಕುರಿತಂತೆ ಮಾಹಿತಿ ನೀಡಿದರು. ಸುರೇಂದ್ರ, ಶ್ರೀಧರ, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಮಂಗಳೂರು ಮಹಾನಗರ ಪಾಲಿಕೆ: ಮಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಯಿತು. ಪರಿಸರ ಅಭಿಯಂತರ ಮಧು ಮನೋಹರ ಮಾತನಾಡಿ ನಮ್ಮ ತ್ಯಾಜ್ಯವನ್ನು ನಾವೇ ಸಂಸ್ಕರಿಸುವ ಬಗೆ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಸುರೇಶ್ ಶೆಟ್ಟಿ ಸ್ವಚ್ಛತೆಯ ಕುರಿತು ಮಾತನಾಡಿದರು. ನಲ್ಲೂರು ಸಚಿನ್ ಶೆಟ್ಟಿ ಪಾಟ್ ಕಾಂಪೆÇೀಸ್ಟಿಂಗ ಪ್ರಾತ್ಯಕ್ಷಿಕೆ ನೀಡಿದರು. ಸುಮಾರು ಎಪ್ಪತೈದು ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹಿಂದೂ ವಿದ್ಯಾದಾಯಿನೀ ಸಂಘ ಸುರತ್ಕಲ್: ಇಡ್ಯಾದಲ್ಲಿರುವ ವಿದ್ಯಾದಾಯಿನೀ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಿಕ್ಷಕರಿಗಾಗಿ ಸ್ವಚ್ಛತೆಯ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಶ್ರಿಮತಿ ಎಂ ಉಮಾದೇವಿ, ಪೆÇ್ರೀ. ರಾಜಮೋಹನ್ ರಾವ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಉಮಾನಾಥ್ ಕೋಟೆಕಾರ್ ಹಾಗೂ ಸತೀಶ ಸದಾನಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಬೃಂದಾವನ ನಗರ ಹಿತವೇದಿಕೆ: ಹೊಸಬೆಟ್ಟು ಪ್ರದೇಶದಲ್ಲಿರುವ ಶ್ರೀರಾಘವೇಂದ್ರ ಮಠದಲ್ಲಿ ಸ್ವಚ್ಛತಾ ಸಂಪರ್ಕ ಅಭಿಯಾನದ ಪ್ರಯುಕ್ತ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಯಶಂಕರ, ಜಯಚಂದ್ರ ಹತ್ವಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪಾಟ್ ಕಾಪೆÇೀಸ್ಟಿಂಗ್, ಒಣಕಸದ ನಿರ್ವಹಣೆ, ಪರಿಸರ ಕಾಳಜಿ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಹರೀಣಿ ಜಯಶಂಕರ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತಿನಿತ್ಯ ಜರುಗುತ್ತಿರುವ ಈ ಸ್ವಚ್ಛತಾ ಜನಸಂಪರ್ಕ ಅಭಿಯಾನದ ನೇತೃತ್ವವನ್ನು ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್, ಸತೀಶ್ ಸದಾನಂದ ಹಾಗೂ ನಲ್ಲೂರು ಸಚಿನ್ ಶೆಟ್ಟಿ ವಹಿಸಿದ್ದರು.


Spread the love