ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನ ವರದಿ
ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನವು ದಿನಾಂಕ 4-5-17 ರಂದು ಆಯೋಜಿಸಿದ 12 ಸ್ವಚ್ಛತಾ ಕಾರ್ಯಕ್ರಮಗಳ ವರದಿ
405) ಪಿವಿಎಸ್ ಸರ್ಕಲ್: ಟೀಂ ಪ್ರೇರಣಾ ಸದಸ್ಯರು ಪಿವಿಎಸ್ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಶ್ರಮದಾನಗೈದರು. ಪ್ರೇರಣಾ ತಂಡದ ಹತ್ತನೇ ಕಾರ್ಯಕ್ರಮದ ಪ್ರಯುಕ್ತ ಸಮಾರೋಪವನ್ನು ಹಮ್ಮಿಕೊಳ್ಳಲಾಗಿತ್ತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯ ವಹಿಸಿ ಮಾತನಾಡಿ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿ ಪ್ರಮಾಣಪತ್ರಗಳನ್ನು ವಿತರಿಸಿದರು. ಪ್ರೇರಣಾ ತಂಡದ ಸಂಯೋಜಕ ಶ್ರೀ ಕೆ ಸದಾನಂದ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಹತ್ತು ಅಭಿಯಾನಗಳು ನಡೆದು ಬಂದ ದಾರಿ ಹಾಗೂ ಸಹೃದಯ ಗೆಳೆಯರ ಸಹಕಾರವನ್ನು ಸ್ಮರಿಸಿಕೊಂಡರು. ಜೊತೆಗೆ ರಾಮಕೃಷ್ಣ ಮಠವು ಈ ಸದವಕಾಶವನ್ನು ದೊರಕಿಸಿಕೊಟ್ಟಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಸುಮಾರು ಒಂದೂವರೆ ಗಂಟೆಗಳ ಕಾಲ ಶ್ರಮದಾನ ನಡೆಯಿತು.
406) ದೇರಳಕಟ್ಟೆ: ಜಸ್ಟೀಸ್ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡಮಿಯ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳಿಂದ ದೇರಳಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಕ್ಷೇಮ ತಂಡದ ಕೊನೆಯ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿಗಳ ಆಶಯದಂತೆ ನಾವೆಲ್ಲರೂ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿ ನಮ್ಮ ಪರಿಸರ, ನಮ ಊರು, ನಮ್ಮ ದೇಶ ಎಂಬ ಸಮಷ್ಟಿ ಭಾವನೆಯನ್ನು ತಾಳುವ ಅಗತ್ಯತೆಯ ಬಗ್ಗೆ ತಿಳಿಸಿದರು. ಈ ಅಭಿಯಾನಕ್ಕೆ ಸಹಕರಿಸಿದ ಸಮಸ್ತರಿಗೂ ರಾಮಕೃಷ್ಣ ಮಠದ ಪರವಾಗಿ ಧನ್ಯವಾದ ಸಮರ್ಪಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ರಮಾನಂದ ಶೆಟ್ಟಿ, ಡೀನ್ ಡಾ. ಸತೀಶ್ ಭಂಡಾರಿ, ಕುಲಸಚಿವ ಡಾ ಜಯಪ್ರಕಾಶ ಶೆಟ್ಟಿ ಇನ್ನಿತರ ವೈದ್ಯರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಡಾ. ಸತೀಶ ರಾವ್ ಹಾಗೂ ಡಾ. ಶಶಿಕುಮಾರ ಕಾರ್ಯಕ್ರಮವನ್ನು ಸಂಯೋಜಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು ದೇರಳಕಟ್ಟೆ ಮುಖ್ಯರಸ್ತೆ ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಿದರು.
407) ರಥಬೀದಿ: ಶ್ರೀಪರ್ತಗಾಳಿ ಗೋಕರ್ಣ ಮಠದ ಕಾರ್ಯಕರ್ತರಿಂದ ಕಾರಸ್ಟ್ರೀಟ್‍ನಲ್ಲಿ ಸ್ವಚ್ಛತೆ ಜರುಗಿತು. ಶ್ರೀ ಅನಿಲ್ ನಾಯಕ್ ಹಾಗೂ ಶ್ರೀ ವಿಶ್ವನಾಥ ಪಡಿಯಾರ್ ಕಾರ್ಯಕ್ರಮಕ್ಕೆಚಾಲನೆ ನೀಡಿದರು. ಈ ಬಾರಿ ಮುಖ್ಯವಾಗಿ ಮಳೆ ನೀರು ಹೋಗುವ ತೋಡುಗಳಲ್ಲಿದ್ದ ತ್ಯಾಜ್ಯವನ್ನು ಹೊರತೆಗೆದು ಮಳೆ ನೀರು ಸರಾಗವಾಗಿ ತೋಡಿನಲ್ಲಿ ಹೋಗುವಂತೆ ಮಾಡಲಾಯಿತು. ಕೆನರಾ ಸಿಬಿಎಸ್ಸಿ ವಿದ್ಯಾರ್ಥಿಗಳು ಸ್ವಚ್ಛತಾ ಕೈಂಕರ್ಯದಲ್ಲಿ ಸಹಕರಿಸಿದರು. ಶ್ರೀ ಕಮಲಾಕ್ಷ ಪೈ ಕಾರ್ಯಕ್ರಮವನ್ನು ಸಂಯೋಜಿಸಿದರು.
408) ಕರಂಗಲಪಾಡಿ: ಸುಬ್ರಮಣ್ಯ ಸಭಾದ ಕಾರ್ಯಕರ್ತರಿಂದ ಬಿಜೈ ಕರಂಗಲಪಾಡಿ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಶ್ರೀ ಜಯಪ್ರಕಾಶ್ ಹಾಗೂ ಶ್ರೀ ಕೆ ಪ್ರಭಾಕರ್ ರಾವ್ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಕರಂಗಲಪಾಡಿಯಲ್ಲಿ ನವೀಕರಿಸಲಾಗುತ್ತಿರುವ ಪಾರ್ಕಿನ ಹೊರಭಾಗದಲ್ಲಿ ಹಾಗೂ ಎದುರಿನ ಮಾರ್ಗಗಳನ್ನು ಸ್ವಚ್ಛಗೊಳಿಸಲಾಯಿತು. ಶ್ರಮದಾನದ ಬಳಿಕ ಸರಳ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀಕಾಂತ ರಾವ್ ಅಭಿಯಾನದಲ್ಲಿ ಭಾಗವಹಿಸಿದ ಸ್ವಯಂಸೇವಕರಿಗೆ ಧನ್ಯವಾದ ಅರ್ಪಿಸಿದರು. ಶ್ರೀ ಎಂ ಆರ್ ವಾಸುದೇವ ಉಪಸ್ಥಿತರಿದ್ದರು.
409) ಎಕ್ಕೂರು: ಸ್ವಚ್ಛ ಎಕ್ಕೂರು ತಂಡದ ಸದಸ್ಯರು 10 ನೇ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶ್ರೀ ಕಿಶೋರ ಪೂಜಾರಿ ಹಾಗೂ ಶ್ರೀ ಅರುಣ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಯ್ಯಪ್ಪ ಸ್ವಾಮಿ ಮಂದಿರದ ಸುತ್ತಮುತ್ತಲಿನ ಪರಿಸರ ಹಾಗೂ ಹೆದ್ದಾರಿಯ ಬದಿಗಳಲ್ಲಿ ಕಸ ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಕೊನೆಗೆ ಸ್ವಚ್ಛ ಎಕ್ಕೂರು ಈ ವರ್ಷದಲ್ಲಿ 10 ಕಾರ್ಯಕ್ರಮಗಳನ್ನು ಪೂರೈಸಿದ್ದರಿಂದ ಸಮಾರೋಪ ಸಮಾರಂಭವನ್ನು ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಆಯೋಜಿಸಲಾಗಿತ್ತು. ಸ್ವಾಮಿ ಏಕಗಮ್ಯಾನಂದಜಿ ಭಾಗವಹಿಸಿದವರಿಗೆ ಸರ್ಟಿಫಿಕೆಟ್ ನೀಡಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದಕ್ಕಾಗಿ ಅಭಿನಂದನೆ ತಿಳಿಸಿದರು. ಶ್ರೀ ಯಶೋಧರ ಚೌಟ, ಶ್ರೀ ಕೇಶವ ಸಾಲಿಯಾನ, ಶ್ರೀ ಭರತ್ ಶೆಟ್ಟಿ, ಹಾಗೂ ಶ್ರೀಮತಿ ತೇಜಸ್ವಿನಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು. ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರದೊಂದಿಗೆ ಶಾಲಾಬ್ಯಾಗ್ ನೀಡಲಾಯಿತು. ಶ್ರೀ ಪ್ರಶಾಂತ ಎಕ್ಕೂರು ಹಾಗೂ ಶ್ರೀ ಸತೀಶ್ ಕೆ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.
410) ಹಂಪಣಕಟ್ಟೆ: ಹಿಂದೂ ವಾರಿಯರ್ಸ್ ತಂಡದ ಸದಸ್ಯರು ಮಿಲಾಗ್ರೀಸ್ ವೃತ್ತದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು. ಶ್ರೀ ಸತೀಶ್ ಹಾಗೂ ಸುಮಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಬೀದಿ ದೀಪದ ಕಂಬಕ್ಕೆ ಕಟ್ಟಿದ್ದ ಬ್ಯಾನರ್ ಹಾಗೂ ಅಲ್ಲಿದ್ದ ಹಗ್ಗಗಳನ್ನು ಏಣಿ ಸಹಾಯದಿಂದ ತೆಗೆಯಲಾಯಿತು. ಕಾರ್ಯಕ್ರಮದ ಮಧ್ಯದಲ್ಲಿ ಮಳೆ ಸುರಿಯುತ್ತಿದ್ದರೂ ಯುವಜನ ಅದನ್ನು ಲೆಕ್ಕಿಸದೇ ಕಾರ್ಯ ಮಾಡುತ್ತಿದ್ದುದ್ದು ವಿಶೇಷವಾಗಿತ್ತು. ತುಳು ಸಿನಿಮಾ ನಟ ಮಂಜು ರೈ ಹಾಗೂ ತುಳು ಚಿತ್ರ ನಿರ್ಮಾಪಕ ಹರೀಶ್ ರಾವ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
411) ಕಾವೂರು: ಸ್ವಚ್ಛ ಕಾವೂರು ತಂಡದ 10 ನೇ ಕಾರ್ಯಕ್ರಮ ಕಾವೂರು ಕಟ್ಟೆಯ ಸುತ್ತಮುತ್ತಲಿನ ಪರಿಸರದಲ್ಲಿ ಜರುಗಿತು. ಶ್ರೀ ಸದಾನಂದ ರೈ ಹಾಗೂ ಶ್ರೀ ಭವಾನಿ ಶಂಕರ ರೈ ಅಭಿಯಾನಕ್ಕೆ ಚಾಲನೆ ನೀಡಿದರು. ಕಾಂಕ್ರೀಟ್ ರಸ್ತೆಗಳನ್ನು ಸ್ವಚ್ಛ ಮಾಡಿ, ಬ್ಯಾನರ್ ಪೆÇೀಸ್ಟರ್ ತೆಗೆಯಲಾಯಿತು. ಶ್ರಮದಾನದ ಬಳಿಕ ಸರ್ಟಿಫಿಕೆಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವಾಮಿ ಏಕಗಮ್ಯಾನಂದಜಿ ಹಾಗೂ ಕ್ಯಾಪ್ಟನ್. ಗಣೇಶ್ ಕಾರ್ಣಿಕ್ ಮಾತನಾಡಿ ಸ್ವಚ್ಛ ಕಾವೂರು ತಂಡದ ಕಾರ್ಯವನ್ನು ಮೆಚ್ಚಿಕೊಂಡು ಪ್ರಂಶಸಿಸಿದರು. ಸ್ವಚ್ಚ ಕಾವೂರು ಸಂಯೊಜಕ ಶ್ರೀಸುಧಾಕರ್ ಕಾವೂರು ಪ್ರಾಸ್ತಾವಿಕವಾಗಿ ಮಾತನಾಡಿ ಅನುಭವಗಳನ್ನು ಹಂಚಿಕೊಂಡರು. ಶ್ರೀಪುಟ್ಟರಾಜು ಹಾಗೂ ಶ್ರೀಗೋವಿಂದ ಭೋವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀ ಸಚಿನ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.
412) ಬೋಳಾರ: ಶ್ರೀ ಅಂಬಾಮಹೇಶ್ವರಿ ಭಜನಾ ಮಂದಿರದ ಸದಸ್ಯರಿಂದ ಬೋಳಾರದಲ್ಲಿ ಸ್ವಚ್ಛತಾ ಕಾರ್ಯ ಜರುಗಿತು. ಶ್ರೀರಾಮಚಂದ್ರ ದೇವಾಡಿಗ ಹಾಗೂ ಶ್ರೀ ಮನೋಹರ ಅಭಿಯಾನಕ್ಕೆ ಚಾಲನೆ ನೀಡಿದರು. ಮುಳಿಹಿತ್ಲುವಿನಿಂದ ಬೋಳಾರದವರೆಗಿನ ಮಾರ್ಗ ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಿದರು. ಜೊತೆಗೆ ಕಸ ಬಿಸಾಡುತ್ತಿದ್ದ ನಿರುಪಯುಕ್ತ ಜಾಗೆಯನ್ನು ಸುಂದರವಾಗಿಸಿ, ಹೂವಿನ ಗಿಡಗಳನ್ನು ನೆಡಲಾಯಿತು.
413) ಪಡೀಲ್: ಸ್ವಚ್ಛ ಪಡೀಲ್ ತಂಡದಿಂದ ಸ್ವಚ್ಚತಾ ಕಾರ್ಯಕ್ರಮ ಪಡೀಲ್ ಜಂಕ್ಷಣನಿಂದ ರೈಲ್ವೆ ಅಂಡರ್ ಪಾಸ್‍ವರೆಗೂ ನಡೆಯಿತು. ಶ್ರಮದಾನದ ಬಳಿಕ ಸರಳ ಸಮಾರೋಪವನ್ನು ಆಯೋಜಿಸಲಾಗಿತ್ತು. ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ ನೀಡಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡವರಿಗೆ ಸರ್ಟಿಫಿಕೆಟ್ ನೀಡಿ ಅಭಿನಂದಿಸಿದರು. ಶ್ರೀ ಸತ್ಯನಾರಾಯಣ ಪ್ರಸ್ತಾವನೆಗೈದರು. ಶ್ರೀ ಮೋಹನ ಪಡೀಲ್, ಶ್ರೀ ರತ್ನಾಕರ ಅಮೀನ್ ಮುಖ್ಯ ಅತಿಥಿಗಳಾಗಿದ್ದರು. ಯೂಥ ಸೆಂಟರ್ ಪಡೀಲ್, ನವಜ್ಯೋತಿ ಮಹಿಳಾ ಮಂಡಳಿ, ಪ್ರಶಾಂತಿ ಮಹಿಳಾ ಮಂಡಳಿ, ಯೂಥ ಅಸೋಸಿಯೇಶನ್ ಕರ್ಮಾರ, ಚಾಲಕರು – ಮಾಲಕರು ಆಟೋ ರಿಕ್ಷಾ ಪಡೀಲ್ ಹಾಗೂ ಶಾಂತಿನಗರ ನಿವಾಸಿಗಳ ಒಕ್ಕೂಟ ಸೇರಿದಂತೆ ಒಟ್ಟು ಎಂಟು ಸಂಘಟನೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಉದಯ ಕೆ ಪಿ ಅಭಿಯಾನವನ್ನು ಯಶಸ್ವಿಯಾಗಿ ಸಂಘಟಿಸಿದರು.
414) ಕೋಟೆಕಾರ: ಸ್ವಚ್ಛ ಕೋಟೆಕಾರ ತಂಡದ ಸದಸ್ಯರು ಕೋಟೆಕಾರ ಜಂಕ್ಷನನಿಂದ ರೈಲ್ವೆ ಕ್ರಾಸಿಂಗ್ ವರೆಗಿನ ಪ್ರದೇಶವನ್ನು ಶುಚಿಗೊಳಿಸಿದರು. ಶ್ರೀ ಗುಣಶೀಲ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀ ಜಿತೇಂದ್ರ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.
415) ಪಂಪವೆಲ್: ಸ್ವಚ್ಛ ಗರೋಡಿ ತಂಡದಿಂದ ಪಂಪವೆಲ್ ಸರ್ಕಲ್‍ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಂಪವೆಲ್ ವೃತ್ತದಲ್ಲಿ ಅಲ್ಲಲ್ಲಿ ಬಿದ್ದ ಕಲ್ಲು ಹಾಗೂ ತ್ಯಾಜ್ಯ ತೆಗೆಯಲಾಯಿತು ಹಾಗೂ ಮಳೆಯ ನೀರು ತೋಡುಗಳಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಯಿತು. ಶ್ರೀ ನವೀನ್, ಶ್ರೀ ಪ್ರಕಾಶ ಗರೋಡಿ ಕಾರ್ಯಕ್ರಮ ಸಂಯೋಜಿಸಿದರು.
416) ಅತ್ತಾವರ: ಸ್ವಚ್ಛ ಅತ್ತಾವರ ತಂಡ ಹಾಗೂ ಕೆಎಂಸಿ ಅಸ್ಪತ್ರೆ ಜಂಟಿಯಾಗಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿದ್ದವು. ಡಾ. ಲಕ್ಷ್ಮಣ ಪ್ರಭು ಹಾಗೂ ಡಾ ಆನಂದ ವೇಣುಗೋಪಾಲ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಕೆಎಂಸಿ ಅಸ್ಪತ್ರೆ ಮುಂಭಾಗದಿಂದ ಮೊಸರು ಕುಡಿಕೆ ಕಟ್ಟೆಯ ವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಡಾ. ಸಂತೋಷ ರೈ, ಡಾ ಪ್ರೇಮಲತಾ ಬಿ ಸೇರಿದಂತೆ ಹಲವು ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಎಸ್ ಎಂ ಕುಶೆ ಶಾಲಾ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದರು. ಶ್ರೀ ಅಕ್ಷಿತ ಅತ್ತಾವರ ಹಾಗೂ ಪೂರ್ಣಿಮಾ ಬಿ ಕೆ ಅಭಿಯಾನವನ್ನು ಸಂಯೋಜಿಸಿದರು.