ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವಾರದ 53ರಿಂದ64 ನೇ ಕಾರ್ಯಕ್ರಮಗಳ ವರದಿ
53) ಗಣಪತಿ ಹೈಸ್ಕೂಲ್ ರಸ್ತೆ: ಗಣಪತಿ ಹೈಸ್ಕೂಲ್ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಾಮಿಜಿತಕಾಮಾನಂದಜಿ ಹಾಗೂ ಕರ್ನಾಟಕ ಬ್ಯಾಂಕಿನ್ ಎಜಿಎಂ ರೇಣುಕಾ ಬಂಗೇರಾ ಜಂಟಿಯಾಗಿ ಅಭಿüಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಬೆಳಿಗ್ಗೆ 7 ಗಂಟೆಯಿಂದ 9-30 ರವರೆಗೆ ಕಾರ್ಯಕ್ರಮ ನಡೆಯಿತು. ರಾಮಚಂದ್ರ ರಾವ್ ಹಾಗೂ ಮಹೇಶ್ ಬೊಂಡಾಲ್ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
54) ಕೊಟ್ಟಾರಚೌಕಿ :ಕುಮಾರ್ ಜಿಮ್ ಫ್ರೆಂಡ್ಸ್ ಯುವಕರ ಬಳಗ ಕೊಟ್ಟಾರ ಚೌಕಿಯಲ್ಲಿ ವಿಶೇಷ ರೂಪದಲ್ಲಿ ಸ್ವಚ್ಛ ಮಂಗಳೂರು ಕಾರ್ಯಗತಗೊಳಿಸಿದರು. ಶ್ರೀ ಯಶವಂತ್ ಆಚಾರ್ಯ ಮಾರ್ಗದರ್ಶನದಲ್ಲಿ ಅವರ ತಂಡ ಕೊಟ್ಟಾರ ಚೌಕಿ ಮೇಲ್ಸೇತುವೆಯ ಬೃಹತ್ ಗಾತ್ರದ ಕಂಬಗಳಿಗೆ ಅಂಟಿಸಿದ್ದ ಪೆÇೀಸ್ಟರ್ ಗಳನ್ನು ಕಿತ್ತು ಶುಚಿಗೊಳಿಸಿ ಬಣ್ಣ ಬಳಿದು ಸ್ವಚ್ಛತೆಯ ಸಂದೇಶ ಸಾರುವ ಚಿತ್ರಗಳನ್ನು ಅಂದವಾಗಿ ಚಿತ್ರಿಸಲಾಗಿದೆ. ಇದಕ್ಕೂ ಮುನ್ನ ಸಾಂಕೇತಿಕವಾಗಿ ಸ್ವಾಮಿ ಧರ್ಮವ್ರತಾನಂದಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಕಾಪೆರ್Çೀರೇಟರ್ ಹರೀಶ್ ಶೆಟ್ಟಿ, ಪುರುಷೋತ್ತಮ ಪೂಜಾರಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಿರಣ್ಜಿಮ್ನ್ ಕಿರಣ್ಕುಮಾರ್ ನೇತೃತ್ವ ವಹಿಸಿಕೊಂಡಿದ್ದರು.
55) ಹಂಪಣಕಟ್ಟಾ :ಶ್ರೀ ಕೃಷ್ಣ ಭವನ ಅಟೋ ಚಾಲಕರು ಮಿನಿ ವಿಧಾನಸೌಧ ಹಾಗೂ ತಾಲೂಕ ಪಂಚಾಯತ್ ಆವರಣದಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಸ್ವಾಮಿಜಿತಕಾಮಾನಂದಜಿ ಹಾಗೂ ಹಿರಿಯ ಆಟೋ ಚಾಲಕ ಶ್ರೀರಾಮಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿತ್ಯ ಸಾವಿರಾರು ಜನ ಸಂದರ್ಶಿಸುವ ಸ್ಥಳವು ಸ್ವಚ್ಛವಾಗಿರಬೇಕು ಎನ್ನುವ ಉದ್ದೇಶದಿಂದ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಸ್ವಚ್ಛ ಮಂಗಳೂರು ಅಭಿüಯಾನದ ಪ್ರಧಾನ ಸಂಯೋಜಕ ದಿಲ್ ರಾಜ್ ಆಳ್ವ ಮಾರ್ಗದರ್ಶನದಲ್ಲಿ ಅಟೋಚಾಲಕರು ಮಿನಿವಿಧಾನಸೌಧ ಆವರಣವನ್ನು ಶುಚಿಗೊಳಿಸಿದರು. ಗಣೇಶ್ ಬೋಳಾರ್ ಹಾಗೂ ನವೀನ್ ಕಾರ್ಯಕ್ರಮವನ್ನು ಸಂಯೋಜಿಸಿದರು.
56) ಪಡೀಲ್ : ಪಡೀಲ್ – ವೀರನಗರ ಪ್ರದೇಶದಲ್ಲಿ ನವಜ್ಯೋತಿ ಮಹಿಳಾ ಮಂಡಳಿ, ನವಕೀರ್ತಿಯುವಕ ಮಂಡಳ, ಯೂಥ್ ಸೆಂಟರ್ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸ್ಥಳೀಯ ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರ್ ಹಾಗೂ ಶ್ರೀ ಸುಂದರ್ ವೀರನಗರ ಜಂಟಿಯಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಉದಯ್ ಕೆ ಪಿ ಮಾರ್ಗದರ್ಶನದಲ್ಲಿಸುಮಾರು 75 ಜನರತಂಡವನ್ನು 3 ಗುಂಪುಗಳಾಗಿ ವಿಂಗಡಿಸಿ ರಸ್ತೆಗಳನ್ನು ಶುಚಿಗೊಳಿಸಲಾಯಿತು. ನಾಲ್ಕು ರಸ್ತೆಗಳಲ್ಲಿ ಸ್ವಚ್ಛತಾ ಕೈಂಕರ್ಯ ಕೈಗೊಳ್ಳಲಾಯಿತು. ಬಸ್ ತಂಗುದಾಣವನ್ನು ಶುಚಿಗೊಳಿಸಿ ಬಣ್ಣ ಬಳಿದು ಸುಂದರಗೊಳಿಸಲಾಯಿತು. ಕೋಡಂಗೆ ಬಾಲಕೃಷ್ಣ ನಾಯ್ಕ್ ಕಾರ್ಯಕ್ರಮ ಸಂಯೋಜಿಸಿದರು.
57) ಮುಳಿಹಿತ್ಲು: ಅಂಬಾ ಮಹೇಶ್ವರಿ ಭಜನಾ ಮಂಡಳಿಯ ಸದಸ್ಯರು ಶ್ರೀ ಸೀತಾರಾಂ ಮಾರ್ಗದರ್ಶನದಲ್ಲಿ ಟೈಲರೀರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು. ಶ್ರೀ ಎ ರಾಘವ್ ಹಾಗೂ ಭುಜಂಗಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 60 ಸದಸ್ಯರು ಸೇರಿ ದೈವಸ್ಥಾನದ ಸಮೀಪದಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಿದರು. ಅಲ್ಲದೇ ಜೆಸಿಬಿ ಹಾಗೂ ಟಿಪ್ಪರ್ ಬಳಸಿ ರಸ್ತೆಯ ಬದಿಗಳಲ್ಲಿದ್ದ ಕಲ್ಲು ಮಣ್ಣುಗಳನ್ನು ತೆಗೆದು ಸ್ವಚ್ಛಗೊಳಿಸಿ ವಾಹನಗಳ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಉಮಾನಾಥ ಕೋಟೆಕಾರ್ ಕಾರ್ಯಕ್ರಮ ಸಂಘಟಿಸಿದರು.
58) ಮಣ್ಣಗುಡ್ಡ :ಮಣ್ಣಗುಡ್ದದ ಗಾಂಧೀ ಪಾರ್ಕಿನ್ ಹೊರಬದಿಯ ರಸ್ತೆಯ ಸುತ್ತಮುತ್ತ ಟೀಂ ವಿವೇಕ ಇದರ ಸದಸ್ಯರು ಸ್ವಚ್ಛತಾ ಕೈಂಕರ್ಯ ಹಮ್ಮಿಕೊಂಡಿದ್ದರು. ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ಗಣೇಶ್ಕಾರ್ಣಿಕ ಹಾಗೂ ಸ್ಥಳೀಯ ಮನಪಾ ಸದಸ್ಯೆ ಶ್ರೀಮತಿ ಜಯಂತಿ ಆಚಾರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಚ್ಛತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಶ್ರೀ ಮೋಹನ್ಆಚಾರ್ಯ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ರಸ್ತೆಗಳನ್ನು ಸ್ವಚ್ಛಗೊಳಿಸಿದರು. ಟೀಂ ವಿವೇಕ್ ಕಾರ್ಯದರ್ಶಿ ಶ್ರೀ ಸುಜಿತ್ ಪ್ರತಾಪ್ ಕಾರ್ಯಕ್ರಮ ಸಂಯೋಜಿಸಿದರು.
59) ನಂದಿಗುಡ್ದ :ಕೋಟಿಚನ್ನಯ್ಯ ವೃತ್ತದಲ್ಲಿ ಸ್ವಚ್ಛ ಮಂಗಳೂರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಹ್ಯಾದ್ರಿ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶ್ರೀಲತಾ ನೇತೃತ್ವದಲ್ಲಿ ಭಾಗವಹಿಸಿದರು. ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ದೀಪಕ್ ಹಾಗೂ ಸುಚೇತಾ ಕಾರ್ಯಕ್ರಮವನ್ನು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಬ್ರಹ್ಮಚಾರಿ ನಿಶ್ಚಯ ಪ್ರಾರ್ಥನೆ ಮಾಡಿದರು. ಸುಮಾರು 60 ಜನ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆಗಳ ಕಾಲ ರಸ್ತೆಗಳ ಇಕ್ಕೆಲಗಳನ್ನು ಗುಡಿಸಿ ಶುಚಿ ಮಾಡಿದರು. ಹಿರಿಯ ಕಾರ್ಯಕರ್ತ ಶ್ರೀ ವಿಠಲದಾಸ್ ಪ್ರಭು ಹಾಗೂ ಶಿಶಿರ್ ಅಮೀನ್ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು.
60)ಕೊಡಿಯಾಲ್ ಬೈಲ್: ಸ್ವಚ್ಛ ಮಂಗಳೂರಿಗಾಗಿಯೇ ಉದಯಿಸಿದ ಪ್ರೇರಣಾತಂಡ ಪಿವಿಎಸ್ ವೃತ್ತದಲ್ಲಿ ಸ್ವಚ್ಛತೆಯನ್ನು ಕೈಗೊಂಡಿತು. ಎಸ್ ಡಿ ಎಂ ಕಾಲೇಜಿನ ನಿರ್ದೇಶಕ ಶ್ರೀ ಕೆ ದೇವರಾಜ್ ಹಾಗೂ ಶ್ರಿ ಪ್ರಭಾಕರ್ರಾವ್ ಸ್ವಚ್ಚತಾ ಅಭಿüಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಶ್ರೀ ಸತೀಶ್ ಉಪಾಧ್ಯಾಯ ಮಾರ್ಗದರ್ಶನÀದಲ್ಲಿ ಸುಮಾರು 75 ಸ್ವಯಂ ಸೇವಕರು ಪಿವಿಎಸ್ ವೃತ್ತದ ಸುತ್ತಮುತ್ತಲಿನ ರಸ್ತೆಗಳನ್ನು ಹಾಗೂ ರಸ್ತೆಯ ಬದಿಯಲ್ಲಿದ್ದ ಕಸ ತ್ಯಾಜ್ಯವನ್ನು ಹೆಕ್ಕಿ ಶುಚಿಗೊಳಿಸಲಾಯಿತು. ಅನೇಕ ಜನ ಹಿರಿಯರು ಸ್ವಚ್ಛತೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪೆÇ. ಮಹೇಶ್ ಕೆ ಬಿಕಾರ್ಯಕ್ರವನ್ನು ಸಂಯೋಜಿಸಿದರು.
61) ವೆಲೆನ್ಸಿಯಾ :ರೊÉೀಶನಿ ನಿಲಯದ ಹೊರಭಾಗದ ರಸ್ತೆಗಳಲ್ಲಿ ಭಂಡಾರಿ ಫೌಂಡೇಶನ್ ಸಹಯೋಗದಲ್ಲಿ ಸ್ವಚ್ಛತೆಯ ಅಭಿüಯಾನವನ್ನು ಆಯೋಜಿಸಲಾಗಿತ್ತು. ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಶ್ರೀ ಮಲ್ಲೇಶ್ ಹಾಗೂ ಶ್ರೀ ಲತಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. 60ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸುಮಾರು 2 ಗಂಟೆಗಳ ಕಾಲ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದರು. ಶ್ರೀ ಮೆಹಬೂಬ್ ಹಾಗೂ ಧನುಷ್ ಕಾರ್ಯಕ್ರವನ್ನು ಸಂಯೋಜಿಸಿ ಮಾರ್ಗದರ್ಶಿಸಿದರು.
62)ದೇರಳಕಟ್ಟೆ: ಜಸ್ಟಿಸ್ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡಮಿ (ಕ್ಷೇಮ) ದ ದ್ವಿತೀಯ ವರ್ಷದ ಸುಮಾರು 50 ವೈದ್ಯಕೀಯ ವಿದ್ಯಾರ್ಥಿಗಳು ದೇರಳಕಟ್ಟೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನುಕೈಗೊಂಡರು. ಡಾ ಶಿವಕುಮಾರ್ ಹಿರೇಮಠ ಮತ್ತು ಮನೋವೈದ್ಯ ಡಾ. ಸತೀಶ್ರಾವ್ ಅಭಿüಯಾನಕ್ಕೆ ಹಸಿರು ನಿಶಾನೆ ತೋರಿಸಿ ಪ್ರಾರಂಭಿಸಿದರು. ರಸ್ತೆಯ ಬದಿಗಳಲ್ಲಿ ಬಿದ್ದಿದ್ದ ರಾಶಿ ರಾಶಿಕಸವನ್ನು ತೆರವುಗೊಳಿಸಿ ಸಾರ್ವಜನಿಕರಲಿ ್ಲಜಾಗೃತಿ ಮೂಡಿಸಲು ಪ್ರಯತ್ನಿಸಿದರು.
63) ಮೇರ್ಲಪದವು: ಶ್ರೀನಿವಾಸ್ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮೇರ್ಲಪದವು ನಾಗರಿಕರ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪ್ರಾಧ್ಯಾಪಕ ಶ್ರೀ ಹರ್ಷಿತ್ ಹಾಗು ಶ್ರೀ ಅಶೋಕ ಕೊಟ್ಟಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಚ್ಛ ಮಂಗಳೂರಿನ ಸಕ್ರಿಯ ಕಾರ್ಯಕರ್ತ ಅಭಿಷೇಕ್ ಹಾಗೂ ಜಗದೀಶ್ ಕಾರ್ಯಕ್ರಮ ಸಂಯೋಜಿಸಿದರು.
64) ಪಚ್ಚನಾಡಿ: ಸ್ವಚ್ಛ ಮಂಗಳೂರಿನ ಪ್ರೇರಣೆಯಿಂದ ಪಚ್ಚನಾಡಿಯಲ್ಲಿ ನಮೋಸೇನಾ ಯುವಕರ ತಂಡ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶ್ರೀ ಮೋಹನ್ ಪಚ್ಚನಾಡಿ, ರವೀಂದ್ರ್ ನಾಯಕ್, ಸಂದೀಪ್ ಬೋಂದೇಲ್ ಮತ್ತಿತರರು ಭಾಗವಹಿಸಿದ್ದರು.
ಈ ವಾರದಲ್ಲಿಒಟ್ಟು 12 ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನವನ್ನುಸಂಘಟಿಸಲಾಗಿತ್ತು. ಕಾರ್ಯಕ್ರಮದ ನಂತರ ಎಲ್ಲಕಾರ್ಯಕರ್ತರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಸ್ವಚ್ಛತಾ ಕಾರ್ಯಕ್ರಮಗಳಿಗೆ ಎಂಆರ್ಪಿಎಲ್ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿವೆ