ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ  23 ಮತ್ತು 24 ನೇ ಶ್ರಮದಾನ ಕಾರ್ಯಕ್ರಮ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ  23 ಮತ್ತು 24 ನೇ ಶ್ರಮದಾನ ಕಾರ್ಯಕ್ರಮ 

23ನೇ ಶ್ರಮದಾನ : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 23ನೇ ಶ್ರಮದಾನ ಪಡೀಲ್ ರಾಷ್ಟ್ರೀಯ ಹೆದ್ದಾರಿ ಕೂಡು ರಸ್ತೆಯ ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ಜರುಗಿತು. ದಿನಾಂಕ 8-4-2018 ಭಾನುವಾರ ಬೆಳಿಗ್ಗೆ 7:30 ಕ್ಕೆ  ನ್ಯಾಯವಾದಿ ವಿವೇಕಾನಂದ ಪನಿಯಾಲ್  ಹಾಗೂ  ಪೆÇ್ರ. ಸತೀಶ ಭಟ್ ಜಂಟಿಯಾಗಿ 23 ನೇ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿದರು.  ವಿವೇಕಾನಂದ ಪನಿಯಾಲ್ ಮಾತನಾಡಿ “ಆಂತರಿಕವಾಗಿ ನಾವು ಶುದ್ಧವಾದರೆ ಬಾಹ್ಯ ಶುಚಿತ್ವ ಸಾಧಿಸುವುದು ಸುಲಭವಾಗುತ್ತದೆ. ಮನ ಶುದ್ಧಿಯಾದಾಗ ದೇಶ ತನ್ನಿಂತಾನೇ ಸ್ವಚ್ಛವಾಗುತ್ತದೆ.  ಸ್ವಚ್ಛ ಮನಸ್ಸುಗಳಿಂದ ಮಾತ್ರ ಇಂತಹ ಸ್ವಚ್ಛತಾ ಅಭಿಯಾನಗಳು ಸಾಧ್ಯ.  ರಾಮಕೃಷ್ಣ ಮಿಷನ್ ಈ ನಿಟ್ಟಿನಲ್ಲಿ ನಗರದ ಸಮಾನ ಮನಸ್ಕ ಯುವಜನರನ್ನು ಒಗ್ಗೂಡಿಸಿ ಈ ಅಭಿಯಾನವನ್ನು ಆಯೋಜಿಸಿ ಭವಿಷ್ಯ ಮಂಗಳೂರಿಗೆ ಮಹತ್ತರ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿದೆ.” ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಡಾ. ರಾಜೇಂದ್ರ ಪ್ರಸಾದ್, ಡಾ ಧನೇಶ್ ಕುಮಾರ್, ಸುಮಮ್ ಸನ್ನಿ,  ಮೋಹನ್ ಪಡೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನೂತನ ಬಸ್ ತಂಗುದಾಣ: ಪಡೀಲ್ ಹೆದ್ದಾರಿಯ  ವೃತ್ತದ ಬಳಿಯಿರುವ ಅವ್ಯವಸ್ಥಿತ ತಾತ್ಕಾಲಿಕ ಬಸ್ ತಂಗುದಾಣ ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿತ್ತು ಅಲ್ಲದೇ ಪ್ರಯಾಣಿಕರಿಗೂ ಸರಿಯಾದ ಸೂರು ಹಾಗೂ ಕುಳಿತುಕೊಳ್ಳಲು ವ್ಯವಸ್ಥಿತ ಆಸನಗಳಿರಲಿಲ್ಲ. ಅದೇ ಜಾಗದಲ್ಲಿ ಬಸ್ ಪ್ರಯಾಣಿಕರಿಗಾಗಿ ಉತ್ತಮ ಗುಣಮಟ್ಟದ ತಂಗುದಾಣವನ್ನು ನಿರ್ಮಿಸಲು ಉದ್ದೇಶಿಸಲಾಯಿತು. ಸ್ಥಳಿÉೀಯ ಆಟೋ ಚಾಲಕರು ಹಾಗೂ ಸ್ವಚ್ಛ ಪಡೀಲ್ ತಂಡದ ಸದಸ್ಯರ ಸಹಕಾರದಿಂದ ಸುಸಜ್ಜಿತ ತಂಗುದಾಣವನ್ನು ನಿರ್ಮಿಸಲಾಗಿದೆ. ಕುಳಿತುಕೊಳ್ಳಲು ಆಸನಗಳು, ಮಳೆ ಬಿಸಿಲಿನಿಂದ ರಕ್ಷಿಸುವ ಸೂರು, ಮಳೆನೀರು ಹಾಗೂ ಕೆಸರು ಒಳಬಾರದಂತೆ ತಡೆಯುವ ಟೈಲ್ಸ್ ನಿಂದ ಮುಚ್ಚಲ್ಪಟ್ಟ  ಕಾಂಕ್ರೀಟ್ ನೆಲ ಹಾಗೂ ಸ್ವಚ್ಛತೆಯ ಸಂದೇಶವುಳ್ಳ ಫಲಕಗಳನ್ನು ಈ ತಂಗುದಾಣ ಒಳಗೊಂಡಿದೆ. ಸ್ವಚ್ಛ ಮಂಗಳೂರು ಅಭಿಯಾನದ   ಪ್ರಧಾನ ಸಂಯೋಜಕ ದಿಲ್ ರಾಜ್ ಆಳ್ವ ಮಾರ್ಗದರ್ಶನದಲ್ಲಿ ಶ್ರೀ ಉದಯ ಕೆ ಪಿ ಹಾಗೂ ಕೊಡಂಗೆ ಬಾಲಕೃಷ್ಣ ನಾೈಕ್  ಉಸ್ತುವಾರಿಯಲ್ಲಿ ತಂಗುದಾಣದ ನಿರ್ಮಾಣ ಮಾಡಲಾಯಿತು.

ಸ್ವಚ್ಛತೆ:  ಯೂಥ್ ಸೆಂಟರ್  ಪಡೀಲ್ ಸದಸ್ಯರು ನೂತನವಾಗಿ ನಿರ್ಮಿಸಲಾದ ಬಸ್ ತಂಗುದಾಣದ ಹಿಂಭಾಗದಲ್ಲಿದ್ದ ತ್ಯಾಜ್ಯವನ್ನು ತೆಗೆದರು. ಸ್ವಚ್ಛ ಮಂಗಳೂರು ಹಿರಿಯ ಕಾರ್ಯಕರ್ತ ಆಶೋಕ ಸುಬ್ಬಯ್ಯ ನೇತೃತ್ವದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಬಸ್ ತಂಗುದಾಣವನ್ನು ತೆರವುಗೊಳಿಸಿ ಆ ಜಾಗೆಯನ್ನು ಶುಚಿಗೊಳಿಸಿದರು. ತಾರಾನಾಥ್ ಆಳ್ವ ಹಾಗೂ ಇತರರು ಅಲ್ಲಿದ್ದ ರಸ್ತೆ ಬದಿಯ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ವ್ಯಾಪಾರಿಗಳ ಮನವೊಲಿಸಿ ಪ್ರಯಾಣಿಕರಿಗೆ   ಅನುಕೂಲ ಮಾಡಿಕೊಟ್ಟರು. ಪಡೀಲ್ ಆಟೋ ನಿಲ್ದಾಣದ ಸುತ್ತಮುತ್ತ ಸ್ವಚ್ಛ ಎಕ್ಕೂರು ಸದಸ್ಯರು ಸ್ವಚ್ಛತೆಯನ್ನು ಮಾಡಿ ಪುಟ್ ಪಾಥ್ ಸರಿ ಮಾಡಿದರು. ಒಂದಿಷ್ಟು ಕಾರ್ಯಕರ್ತರು ಪೆÇೀಸ್ಟರ್ ತೆರವುಗೊಳಿಸಿದರು.   ನಿಟ್ಟೆ  ಫಿಸಿಯೊಥೆರಪಿ ವಿದ್ಯಾರ್ಥಿಗಳು ಉಳ್ಳಾಲ ಶ್ರೀನಿವಾಸ ಮಲ್ಯ ವೃತ್ತದ ಸುತ್ತಮುತ್ತ  ಶುಚಿಗೊಳಿಸಿದರು. ನಿಟ್ಟೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪಡೀಲ್ ಪರಿಸರದ  ಮನೆಗಳಿಗೆ ಭೇಟಿ ನೀಡಿ ಕರಪತ್ರ ವಿತರಿಸಿ ಸ್ವಚ್ಛತಾ ಜಾಗೃತಿ ಮೂಡಿಸಿದರು.  ಅಭಿಯಾನದ ಬಳಿಕ ಎಲ್ಲ ಕಾರ್ಯಕರ್ತರಿಗೆ ನ್ಯೂ ಫ್ರೆಂಡ್ಸ್ ಪಡೀಲ್ ಇವರ ಆವರಣದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

24ನೇ ಶ್ರಮದಾನ: ಸ್ವಚ್ಛ ಮಂಗಳೂರು ಅಭಿಯಾನದ 24ನೇ ಶ್ರಮದಾನವನ್ನು  ಬೋಳಾರ ಶ್ರೀ ಮಾರಿಗುಡಿ ಮಹಿಷಮರ್ದಿನಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಜರುಗಿತು. ದಿನಾಂಕ 8-4-2018 ಭಾನುವಾರ ಬೆಳಿಗ್ಗೆ 7:30 ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಹಾಗೂ ಶ್ರೀ ತಾರಾನಾಥ ಶೆಟ್ಟಿ ಬೋಳಾರ ಜಂಟಿಯಾಗಿ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿದರು.  ಶ್ರೀ ಸೀತಾರಾಮ ಎ ಮುಳಿಹಿತ್ಲು, ಸಾಮಾಜಿಕ ಕಾರ್ಯಕರ್ತ ಸುರೇಶ ಶೆಟ್ಟಿ  ಮತ್ತಿತರರು ಹಾಜರಿದ್ದರು.

ತ್ಯಾಜ್ಯ ಕ್ಕೆ ಮುಕ್ತಿ; ಮಾರಿಗುಡಿ ರಸ್ತೆಯ ಮೂಲೆಯೊಂದರಲ್ಲಿ ಸಾರ್ವಜನಿಕರು ಪ್ರತಿನಿತ್ಯ ಅಪಾರ ಪ್ರಮಾಣದ ಕಸವನ್ನು ತಂದು ಸುರಿಯುತ್ತಿದ್ದರು. ಇಂದು ನಿವೇದಿತಾ ಬಳಗದ ಸದಸ್ಯರು ರತ್ನಾ ಆಳ್ವ  ಜೊತೆಯಾಗಿ ಅದನ್ನೆಲ್ಲ ತೆಗೆದು ಅಲ್ಲಿ ಸುಂದರವಾಗಿ ತೊÉೀರುವಂತೆ ಹೂಕುಂಡಗಳನ್ನು  ಇಡಲಾಗಿದೆ. ಅದರೊಂದಿಗೆ ಅಲ್ಲಿಯ ಪರಿಸರದ ಜನರನ್ನು ಸಂದರ್ಶಿಸಿ ತ್ಯಾಜ್ಯ ಹಾಕದಂತೆಯೂ ಕಸವನ್ನು ಕಸ ಸಂಗ್ರಹಾಕರಿಗೆ ನೀಡುವಂತೆ ವಿನಂತಿಸಲಾಗಿದೆ. ಮತ್ತೊಂದು ತಂಡದವರು ಶ್ರೀಮತಿ ವಿಜಯ¯ಕ್ಷ್ಮಿ ಮಾರ್ಗದರ್ಶನದಲ್ಲಿ ಬೋಳಾರನಿಂದ ಎಮ್ಮೆಕೆರೆಗೆ ಸಾಗುವ ಮಾರ್ಗಗಳನ್ನು ಸಹ ಗುಡಿಸಿ ಸ್ವಚ್ಛಗೊಳಿಸಿದರು.

ಉಪನ್ಯಾಸಕ ಈಶ್ವರ ಭಟ್, ಶ್ರೀಮತಿ ವಸಂತಿ ನಾಯಕ್, ರಿಯಾಜ್ ಅಹ್ಮದ್ ವಾಮಂಜೂರು, ಜಗನ್ ಕೋಡಿಕಲ್, ಶಿವು ಪುತ್ತೂರು, ರಾಜೇಶ್ವರೀ ವಿಜಯರಾಜ್, ಸುಜಿತ ಪ್ರತಾಪ್ ಸೇರಿದಂತೆ ಸುಮಾರು ಮುನ್ನೂರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡರು. ಈ ಸ್ವಚ್ಛತಾ ಅಭಿಯಾನಕ್ಕೆ ಎಂಆರ್‍ಪಿಎಲ್  ಸಂಸ್ಥೆ ಪ್ರಾಯೋಜಕತ್ವ  ನೀಡುತ್ತಿದೆ.

Photo Album


Spread the love