Home Mangalorean News Kannada News ರಾಮಕೃಷ್ಣ ಮಿಷನ್  ಸ್ವಚ್ಛ ಮಂಗಳೂರು ಅಭಿಯಾನದ 34 ನೇ ಶ್ರಮದಾನದ ವರದಿ

ರಾಮಕೃಷ್ಣ ಮಿಷನ್  ಸ್ವಚ್ಛ ಮಂಗಳೂರು ಅಭಿಯಾನದ 34 ನೇ ಶ್ರಮದಾನದ ವರದಿ

Spread the love

 ರಾಮಕೃಷ್ಣ ಮಿಷನ್  ಸ್ವಚ್ಛ ಮಂಗಳೂರು ಅಭಿಯಾನದ 34 ನೇ ಶ್ರಮದಾನದ ವರದಿ

34ನೇ ಸ್ವಚ್ಛತಾ ಶ್ರಮದಾನ: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 34ನೇ ಶ್ರಮದಾನವನ್ನು ಕೊಡಿಯಾಲಬೈಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. 3-6-2018 ರವಿವಾರದಂದು ಬೆಳಿಗ್ಗೆ  7:30ಕ್ಕೆ ಡಾ.ಜಿ ಎಸ್ ಮರಿಗುದ್ದಿ, ಖ್ಯಾತ ಸಾಹಿತಿಗಳು ಬೆಳಗಾವಿ ಹಾಗೂ ಶ್ರೀ ಶಾರದಾ ಡಿ ಆರ್, ಸಮಾಜಸೇವಕಿ ಹಾಗೂ ಐಟಿಬಿಟಿ ಉದ್ಯೋಗಿ, ಬೆಂಗಳೂರು. ಇವರುಗಳು ಶ್ರಮದಾನಕ್ಕೆ ಚಾಲನೆ ನೀಡಿದರು. ಸ್ವಾಮಿ ಜಿತಕಾಮಾನಂದಜಿ, ಖ್ಯಾತ ಜಾದೂಗಾರು ಕುದ್ರೋಳಿ ಗಣೇಶ್, ಪ್ರವೀಣ ಶೆಟ್ಟಿ, ಶ್ರೀಕಾಂತ ರಾವ್, ಸತ್ಯವತಿ ಶೆಟ್ಟಿ, ಶೀಲಾಮಣಿ ರೈ, ಇಂದಿರಾ, ಪೆÇ್ರೀ. ಶೇಷಪ್ಪ ಅಮೀನ್ ಸೇರಿದಂತೆ ಅನೇಕÀರು ಈ ಸಂದರ್ಭದಲ್ಲಿ ಉಪಸ್ಥಿತದ್ದರು.

ಡಾ. ಜಿ ಎಸ್ ಮರಿಗುದ್ದಿ ಮಾತನಾಡಿ “ಪ್ರಧಾನಿಯವರು ಸ್ವಚ್ಛ ಭಾರತ ಕರೆ ನೀಡಿದ ಬಳಿಕ ದೇಶದಾದ್ಯಂತ ಅನೇಕ ಸಂಘ-ಸಂಸ್ಥೆಗಳು ಸ್ವಚ್ಛತಾ ಅಭಿಯಾನಗಳನ್ನು ಕೈಗೊಂಡವು, ಆದರೆ ಅದು ಅನೇಕ ಕಡೆಗಳಲ್ಲಿ ಮುಂದುವರೆಯಲಿಲ್ಲ ಹಾಗೂ ನಿರಂತರತೆಯನ್ನೂ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಮಂಗಳೂರಿನಲ್ಲಿ ಮಾತ್ರ ಈ ಸ್ವಚ್ಛತಾ ಅಭಿಯಾನ ಕಳೆದ ಮೂರೆವರೆ ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು ಮಾತ್ರವಲ್ಲ, ಆರಂಭದ ಅದೇ ಉತ್ಸಾಹ ಹಾಗೂ ತೀವ್ರತೆಯನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವುದು ಆಶ್ಚರ್ಯ ಹಾಗೂ ಹೆಮ್ಮೆಯನ್ನುಂಟು ಮಾಡಿದೆ. ಭಾರತದಾದ್ಯಂತ ಈ ಸ್ವಚ್ಛ ಮಂಗಳೂರು ಅಭಿಯಾನ ಎನ್ನುವುದು ಒಂದು ಮಾದರಿ ಸ್ವಚ್ಛತಾ ಅಭಿಯಾನವಾಗಿ ರೂಪುಗೊಂಡಿದೆ. ಇದಕ್ಕಾಗಿ ಉತ್ತರಕರ್ನಾಟಕ ಸಾಹಿತಿಗಳ ಪರವಾಗಿ ಮಂಗಳೂರು ನಾಗರಿಕ ಬಂಧುಗಳನ್ನು ಅಭಿನಂದಿಸುತ್ತೇನೆ” ಎಂದು ಹೇಳಿ ಶುಭಹಾರೈಸಿದರು.

ಶ್ರಮದಾನ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸ್ವಚ್ಛ ಮಂಗಳೂರು ಕಾರ್ಯಕರ್ತರು ಕೆನರಾ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಿಂದ ಪ್ರಾರಂಭಿಸಿ ಎಂ.ಜಿ ರಸ್ತೆಯತ್ತ ಸಾಗುವ ಮಾರ್ಗ ಹಾಗೂ ಬದಿಯಲ್ಲಿದ್ದ ಹುಲ್ಲು ಗಿಡಗಂಟಿಗಳನ್ನು ತೆಗೆದು ಸ್ವಚ್ಛಮಾಡಿದರು. ಹಾಗೂ ಎಂಜಿ ರಸ್ತೆಯನ್ನು ಎಸ್‍ಡಿಎಂ ಕಾಲೇಜಿನವರೆಗೆ ಶುಚಿಗೊಳಿಸಿದರು. ಶ್ರೀಶಾರದಾ ಮಹಿಳಾ ವೃಂದದ ಸದಸ್ಯೆಯರು ಹಾಗೂ ಚಿತ್ರಾ ಪ್ರಭು ಜೊತೆಗೂಡಿ ಜೈಲು ರಸ್ತೆಯಿಂದ ಕರಂಗಲಪಾಡಿಯತ್ತ ಸಾಗುವ ಮಾರ್ಗದ ಎರಡೂ ಬದಿಗಳನ್ನು ಶುಚಿಗೊಳಿಸಿದರು. ವಿಶೇಷವಾಗಿ ಪುಟಪಾಥ್ ಹಾಗೂ ತೋಡುಗಳಲ್ಲಿದ್ದ ಮಣ್ಣನ್ನು ತೆಗೆದು ಮಳೆನೀರು ಸರಾಗವಾಗಿ ಹೋಗುವಂತೆ ಮಾಡಲಾಯಿತು. ಅಲ್ಲಿಂದ ಮುಂದೆ ಸಾಗಿ ಸಿ ಜಿ ಕಾಮತ್ ರಸ್ತೆಯ ಮೂಲೆಯೊಂದರಲ್ಲಿ ಬಿದ್ದಿದ್ದ ರಾಶಿ ಕಸವನ್ನು ತೆಗೆದು ಸ್ವಚ್ಛಗೊಳಿಸಿದರು. ಅಲ್ಲಿ ಇದೀಗ ಹೂಕುಂಡಗಳನ್ನಿಟ್ಟು ಸುಂದರಗೊಳಿಸಲಾಗಿದೆ. ನಿವೇದಿತಾ ಬಳಗದವರು ರತ್ನಾ ಆಳ್ವ, ಅಧ್ಯಾಪಕಿ ವಿಜಯಲಕ್ಷ್ಮೀ ಹಾಗೂ ಶೀಲಾ ಶೆಟ್ಟಿ ಜೊತೆಯಾಗಿ ಜೈಲು ರಸ್ತೆಯಿಂದ ಐಬ್ರೋಸ್ ಕಾಂಪ್ಲೆಕ್ಸ್ ಮುಂಭಾಗ, ಎಂಜಿ ರಸ್ತೆಯ ವರೆಗಿನ ಮಾರ್ಗ, ತೋಡುಗಳು ಹಾಗೂ ಪಾರ್ಕಿಂಗ್ ಸ್ಥಳಗಳನ್ನು ಗುಡಿಸಿ ಶುಚಿ ಮಾಡಿದರು.

ನಗರದ ಗೋಡೆಗಳ ಸೌಂದರೀಕರಣ: ನಗರದ ಗೋಡೆಗಳನ್ನು ಅನಧಿಕೃತ ಪೆÇೀಸ್ಟರಗಳು ಆಕ್ರಮಿಸಿ ಊರಿನ ಸೌಂದರ್ಯವನ್ನು ಹಾಳುಮಾಡುತ್ತಿದ್ದವು. ಅದನ್ನು ತಡೆಯಲೋಸುಗ ಅನೇಕ ಕಡೆ ಈಗಾಗಲೇ ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕರ್ತರು ಅವುಗಳನ್ನು ತೆಗೆದು ಶುಚಿಗೊಳಿಸಿ ಪ್ರಮುಖ ಗೊಡೆಗಳನ್ನು ಸುಣ್ಣ ಬಣ್ಣಗಳಿಂದ ಸುಂದರಗೊಳಿಸಿದ್ದರು. ಕಳೆದ ಒಂದು ವಾರದಿಂದ ಮಹಾತ್ಮಾ ಗಾಂಧಿ ರಸ್ತೆಯ ಕೆನರಾ ಕಾಲೇಜಿನ ಗೋಡೆಗಳನ್ನು ಸುಂದರಗೊಳಿಸಲು ಶ್ರಮಿಸಲಾಗುತ್ತಿದೆ. ಪ್ರಮುಖವಾಗಿ ಕಾಲೇಜು ಯುವಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಲಿ ಕಲಾಕೃತಿಗಳನ್ನು ರಚಿಸಲಾಗುತ್ತಿದೆ. ಟ್ರೆಂಡಿ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂದೇಶಗಳನ್ನು ಸಾರುವ ಚಿತ್ರಗಳನ್ನು ರಚಿಸಲಾಗುತ್ತಿದೆ. ಆದಿತತ್ವ ಆರ್ಟ್‍ನ ವಿಕ್ರಮ ಶೆಟ್ಟಿ ಹಾಗೂ ಶೈಲೇಶ್ ಕೊಟ್ಯಾನ್ ನೇತೃತ್ವದ ಕಲಾವಿದರ ತಂಡ ಈ ಕಾರ್ಯಕ್ಕೆ ಸಹಕಾರ ನೀಡುತ್ತಿದೆ.

ಬ್ಯಾನರ್ ಪೆÇೀಸ್ಟರ್ ತೆರವು ಕಾರ್ಯ : ನಗರದಲ್ಲಿ ಅನಧಿಕೃತ ಬ್ಯಾನರ್ ಹಾವಳಿ ತಡೆಗಟ್ಟುವ ಸಲುವಾಗಿ ಕಳೆದ ವಾರದಂತೆ ಈ ಬಾರಿಯೂ ಸ್ವಚ್ಛ ಮಂಗಳೂರು ಕಾರ್ಯಕರ್ತರು ಎರಡು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದರು. ನಗರದ ಬೇರೆ ಬೇರೆ ಸ್ಥಳಗಳಲ್ಲಿದ್ದ ಬ್ಯಾನರ್‍ಗಳನ್ನು ತೆರವುಗೊಳಿಸುವ ಕಾರ್ಯ ಜರುಗಿತು.

ಹಿಮ್ಮತ ಸಿಂಗ್, ಶೀಲಾ ಸುಗುಣಾ ರೈ, ಕಿಶನ್ ರೈ, ಕೆ ವಿ ಪ್ರಸಾದ್ , ಇಂದಿರಾ ಪೈ, ಕವಿತಾ ಪೈ, ವಿಜಯ ಶೆಟ್ಟಿ,ರವಿ ಕೆ ಆರ್, ಮತ್ತಿತರ ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿ ಶ್ರಮದಾನಗೈದರು. ಅಭಿಯಾನದ ಪ್ರಧಾನ ಸಂಯೋಜPರಾದÀ ಉಮಾನಾಥ್ ಕೋಟೆಕಾರ್ ಹಾಗೂ ದಿಲ್ ರಾಜ್ ಆಳ್ವ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.

 


Spread the love

Exit mobile version