Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ6ನೇ ವಾರದ65ರಿಂದ77 ನೇ ಕಾರ್ಯಕ್ರಮ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ6ನೇ ವಾರದ65ರಿಂದ77 ನೇ ಕಾರ್ಯಕ್ರಮ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ6ನೇ ವಾರದ65ರಿಂದ77 ನೇ ಕಾರ್ಯಕ್ರಮಗಳ ವರದಿ

65) ಶಿವಭಾಗ್ – ಶಿವಭಾಗ್ ವೃತ್ತದ ಆಸುಪಾಸಿನಲ್ಲಿ ಸ್ವಚ್ಛತಾಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀಮತಿ ಶೀಲಾ ಜಯಪ್ರಕಾಶ ಹಾಗೂ ಕಲಾದೀಪಕ್ ನೇತೃತ್ವದಲ್ಲಿ ಸ್ವಚ್ಛ ಶಿವಭಾಗ್ ಆಸಕ್ತರ ಗುಂಪು ಇಂದು ಬೆಳಿಗ್ಗೆ 7 ಗಂಟೆಯಿಂದ 9:30ರ ತನಕ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸ್ವಾಮಿಜಿತಕಾಮಾನಂದಜಿ ಹಾಗೂ ಶಾಸಕರಾದ ಶ್ರೀ ಜೆಆರ್ ಲೋಬೋ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಮನಪಾ ಸದಸ್ಯೆ ಸಬೀತಾ ಮಿಸ್ಕಿತ್, ಚಂದ್ರಾಡಿ ರಾವ್, ಮಾಲಿನಿ ಹೆಬ್ಬಾರ ಮತ್ತಿತರರು ಭಾಗವಹಿಸಿದರು. ಕೆ kfc ಸಿ ಹಾಗೂ ಆಭರಣಜುವೆಲರ್ಸ್ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಕೈಜೋಡಿಸಿದರು.

66) ಕಾವೂರು: ಗಾಂಧಿನಗರ ಬಸ್ ತಂಗುದಾಣದ ಸುತ್ತಮುತ್ತ ಸ್ವಚ್ಛತಾಕಾರ್ಯಕ್ರಮವನ್ನುಆಯೋಜಿಸಲಾಗಿತ್ತು, ಕ್ಯಾಪ್ಟನ್‍ಗಣೇಶ್‍ಕಾರ್ಣಿಕ್ ಹಾಗೂ ಎಂ ಶಶಿಧರ ಶೆಟ್ಟಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 50 ಜನ ಸಾರ್ವಜನಿಕರುಶ್ರೀ ಸದಾನಂದರೈಹಾಗೂ ಸಚಿನ್ ಮಾರ್ಗದರ್ಶನದಲ್ಲಿ ಸ್ವಚ್ಛತೆಯನ್ನುಕೈಗೊಂಡರು. ಕಸಗುಡಿಸಿವುದರೊಂದಿಗೆ ಶ್ರೀ ಸುಧಾಕರ್‍ಕಾವೂರುಅವರ ವಿಶೇಷ ಕಾಳಜಿಯಿಂದಾಗಿ ಮೇಸ್ತ್ರಿಯನ್ನು ಬಳಸಿಕೊಂಡು ರಸ್ತೆ ಬದಿಯಲ್ಲಿದ್ದ ಮರಗಳಿಗೆ ಕಟ್ಟೆಕಟ್ಟಿದರು.  ಕಳೆದ ತಿಂಗಳು ನವೀಕರಣಗೊಂದಿದ್ದ ಬಸ್ ತಂಗುದಾಣಕ್ಕೆಗಾಂಧೀ ನಗರ ವೆಂದುಅಚ್ಚುಕಟ್ಟಾಗಿ ಬೋರ್ಡ್ ಹಾಕಿಸಲಾಗಿದೆ.

image001swacch-mangaluru-abhiyan-mangalorean-com-20161121-001

67) ಲ್ಯಾಂಡ್ ಲಿಂಕ್ಸ್ : ಶ್ರೀ ಮಾತೃಧಾಮ ಮಹಿಳಾ ವೃಂದದವರಿಂದಇಂದು ಲ್ಯಾಂಡ್ ಲಿಂಕ್ಸ್ ಪ್ರದೇಶದಲ್ಲಿ ಸ್ವಚ್ಛತೆ ನಡೆಯಿತು. ಮಾಜಿ ಸಚಿವ ಶ್ರೀ ಜೆ ಕೃಷ್ಣ ಪಾಲೆಮಾರ್‍ಹಾಗೂ ಶ್ರೀ ಮನೋಹರ್ ತುಳಜಾರಾಮ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ನಂತರ ಶ್ರೀ ಸತ್ಯನಾರಾಯಣ ಕೆ ವಿ ಮಾರ್ಗದರ್ಶನದಲ್ಲಿ ಸಾರ್ವಜನಿಕರು ಬಹಳ ದಿನಗಳಿಂದ ಪಾಳು ಬಿದ್ದ ಸ್ಥಿತಿಯಲ್ಲಿದ್ದ ಪಾರ್ಕನ್ನು ಹುಲ್ಲು ಕತ್ತರಿಸಿ, ಶುಚಿಗೊಳಿಸಿ, ಮಕ್ಕಳ ಆಟದ ಸಲಕರಣೆಗಳಿಗೆ ಬಣ್ಣ ಬಳಿದು ಅಂದಗೊಳಿಸಿದರು. ಶ್ರೀಮತಿ ವೇದಾವತಿ ಮತ್ತಿತರರು ಸೇರಿ ರಸ್ತೆಗಳನ್ನು ಶುಚಿಗೊಳಿಸಿದರು. ಮನಪಾ ಸದಸ್ಯ ಶ್ರೀ ವಿಜಯಕುಮಾರ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಸ್ವಚ್ಛತೆಯಲ್ಲಿ ಭಾಗವಹಿಸಿದರು. ಶ್ರೀಮತಿ ಶಾಂಭವಿ ಅಭಿಯಾನವನ್ನು ಸಂಯೋಜಿಸಿದರು.

68) ಸಂತ ಅಲೋಸಿಯಸ್ ಕಾಲೇಜು :ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಶ್ರೀಮತಿ ಪ್ರೇಮಲತಾ ಶೆಟ್ಟಿ ಮಾರ್ಗದರ್ಶನದಲ್ಲಿ ಸ್ವಚ್ಚತಾಅಭಿüüಯಾನವನ್ನುಕೈಗೊಂಡರು. ಸ್ವಾಮಿಧರ್ಮವ್ರತಾನಂದಜಿ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲ ಶ್ರೀ ಆಲ್ವೀನ್‍ಡೇಸಾ ಹಸಿರು ನಿಶಾನೆ ತೋರಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಚ್ಛ ಮಂಗಳೂರಿನ ಹಿರಿಯಕಾರ್ಯಕರ್ತ ಶ್ರೀ ಮನೋಹರ್ ಪ್ರಭು ಹಾಗೂ ಪೆÇ್ರ. ಶೇಷಪ್ಪ ಹಾಗೂ ಹಲವಾರುಜನಕಾಲೇಜಿನ ಪ್ರಾಧ್ಯಾಪಕರುಸಕ್ರಿಯವಾಗಿಭಾಗವಹಿಸಿದರು. ಪ್ರಾಧ್ಯಾಪಕಅರ್ಜುನ ಪ್ರಕಾಶಕಾರ್ಯಕ್ರಮ ಸಂಯೋಜಿಸಿದರು.

69) ಮಂಗಳಾ ನಗರ: ಶ್ರೀ ಶಾರದಾ ಮಹಿಳಾ ವೃಂದದ ಸದಸ್ಯೆಯರಿಂದ ಮಂಗಳಾನಗರದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಸ್ವಾಮಿಚಿದಂಬರಾನಂದಜಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಸತ್ಯವತಿಜೊತೆಗೂಡಿ ಮಹಿಳಾ ವೃಂದದ ಸದಸ್ಯರು ಮಂಗಳಾ ನಗರದ ಪ್ರಮುಖ ಬೀದಿಗಳನ್ನು ಶುಚಿಗೊಳಿಸಿದರು. ಶ್ರೀಮತಿ ಲತಾಮಣಿರೈಹಾಗೂ ಕೆ ಬಾಲಕೃಷ್ಣ ನಾಯ್ಕ್‍ಕಾರ್ಯಕ್ರಮವನ್ನು ಸಂಯೋಜಿಸಿದರು.

70)ಜೈಲ್‍ರಸ್ತೆ : ಶ್ರೀ ಸುಬ್ರಮಣ್ಯ ಸಭಾದ ನೇತೃತ್ವದತಂಡಇಂದುಜೈಲ್‍ರಸ್ತೆಯಲ್ಲಿ ಸ್ವಚ್ಛತಾಕೈಂಕರ್ಯವನ್ನುಕೈಗೊಂಡಿತು. ಕಾಪುಚಿನ್‍ಚರ್ಚಿನಕ್ರೈಸ್ತ ಧರ್ಮಗುರುಗಳು ಹಾಗೂ ಶ್ರೀ ಪುರುಷೋತ್ತಮಜಂಟಿಯಾಗಿಅಭಿüಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ, ಪೆÇೀರಕೆ ಹಿಡಿದು ಬೀದಿಯನ್ನು ಗೂಡಿಸಿದರು. ಶ್ರೀ ಎಂ ಆರ್ ವಾಸುದೇವ್ ಮುಂದಾಳುತನದಲ್ಲಿ ಸುಮಾರು 80 ಕ್ಕೂ ಅಧಿüಕಜನ ಸಾರ್ವಜನಿಕರು  ಸ್ವಚ್ಛತೆಯಲ್ಲಿತಮ್ಮನ್ನುತಾವು ತೊಡಗಿಸಿಕೊಂಡಿದ್ದರು. ಬೆಳಿಗ್ಗೆ 7 ಗಂಟೆಯಿಂದ 9;30 ರ ವರೆಗೆಕಾರ್ಯಕ್ರಮ ನಡೆಯಿತು. ಶ್ರೀಕಾಂತ ಕಾರ್ಯಕ್ರಮವನ್ನು ಸಂಘಟಿಸಿದರು.

71)ನಾಗುರಿ :ಗರೋಡಿದೇವಸ್ಥಾನದಯುವಕರ ನೇತೃತ್ವದಲ್ಲಿ ನಾಗುರಿ ಪರಿಸರದಲ್ಲಿ ವಿಶೇಷ ರೂಪದಲ್ಲಿಅಭಿüಯಾನವನ್ನು ಹಮ್ಮಿಕೊಳ್ಳಲಾಗಿತ್ತು.ಮನಪಾ ಸದಸ್ಯ ಶ್ರೀ ಕೇಶವ ಮರೋಳಿ ಹಾಗೂ ಸ್ವಾಮಿಏಕಗಮ್ಯಾನಂದಜಿಅಭಿಯಾನಕ್ಕೆ ವೇದಘೋಷದ ಮೂಲಕ ಚಾಲನೆ ನೀಡಿದರು. ಸುಮಾರು 75 ಜನಯುವಕರು ಸಾರ್ವಜನಿಕರುಎರಡು ದಿನಗಳಿಂದಲೇ ಕಾರ್ಯಕ್ರಮಕ್ಕೆತಯಾರಿ ನಡೆಸಿದ್ದರು. ಶ್ರೀ ಪ್ರಕಾಶಗರೋಡಿ ಮುತುವರ್ಜಿಯಲ್ಲಿನಾಗುರಿಯಲ್ಲಿ ಮೇಲ್ಛಾವಣಿಇಲ್ಲದ ಬಸ್ ತಂಗುದಾಣವನ್ನುರಿಪೇರಿ ಮಾಡಿ ಬಣ್ಣ ಬಳಿದು ಸುಂದರಗೊಳಿಸಿದರು. ಮತ್ತೊಂದೆಡೆಶ್ರೀ ಸಂದೀಪ ಗರೋಡಿ ಮಾರ್ಗದರ್ಶನದಲ್ಲಿಗೂಗ್ಲಿಕಿಕೇಟರ್ಸ್‍ತಂಡಹೆದ್ದಾರಿಯಲ್ಲಿಅಪಾಯಕಾರಿಯಾಗಿದ್ದ ಸ್ಥಳದಲ್ಲಿ ಜಿಬ್ರಾಕ್ರಾಸ್ ಪಟ್ಟಿ ಹಾಕಿದರು. ತದನಂತರಅತ್ಯಂತಕಲುಷಿತವಾಗಿದ್ದ ಮಾರುಕಟ್ಟೆಯನ್ನು ಸ್ವಚ್ಛವಾಗಿಸಿ ಸುಂದರವಾಗಿ ಬಣ್ಣ ಬಳಿದು ಶ್ರೀ ಶೈಲೇಶ್‍ಕೋಟ್ಯಾನ್, ವಿಕ್ರಮ್ ಶೆಟ್ಟಿ, ನವೀನ್ ಪೂಜಾರಿಇನ್ನಿತರರುಜೊತೆಯಾಗಿಸ್ವಚ್ಛತೆಯ ಸಂದೇಶವನ್ನು ಸಾರುವಕಲಾಕೃತಿಯನ್ನು ಚಿತ್ರಿಸಿದರು.ಅದುದಾರಿಹೋಕರನ್ನು ಸೆಳೆಯುತ್ತಿದೆ.

72)ಉರ್ವಗ್ರೌಂಡ್–ಅಶೋಕ ನಗರಲಯನ್ಸ್‍ತಂಡ ಹಾಗೂ ಇನ್ನಿತರತಂಡಗಳು ಜಂಟಿಯಾಗಿ ಸ್ವಚ್ಛತಾಕಾರ್ಯಕ್ರಮವನ್ನುಆಯೋಜಿಸಿದ್ದವು. ಲಯನ್ಸ್‍ಗವರ್ನರ್ ಶ್ರೀ ಅರುಣ ಶೆಟ್ಟಿ ಹಾಗೂ ಪ್ರಶಾಂತ ಪೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉರ್ವ ಬಸ್ ತಂಗುದಾಣಗ್ರೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು. ಶ್ರೀ ಸದಾಶಿವ ರೈ ಹಾಗೂ ಶ್ರೀ ನಾರಾಯಣ ಸ್ವಚ್ಛತೆಯ ಮುಂದಾಳತ್ವ ವಹಿಸಿದ್ದರು.

73)ದೇರೆಬೈಲ್ ;ದೇರೆಬೈಲ್‍ಕೊಂಚಾಡಿರಸ್ತೆಯಲ್ಲಿ ಸ್ವಚ್ಛತಾಅಭಿüಯಾನವನ್ನು ಕೈಗೊಳ್ಳಲಾಯಿತು. ಶ್ರೀ ದಯಾನಂದಕಟ್ಟಲ್ಸರಕಾರ್ಯಕ್ರಮವನ್ನು ಚಾಲನೆಗೊಳಿಸಿದರು. ಶ್ರೀ ಲಕ್ಷಣಇವರ ನೇತೃತ್ವದಲ್ಲಿದೇರೆಬೈಲ್ ವಾಸಿಗಳು ಸುಮಾರುಎರಡು ಗಂಟೆಗಳ ಕಾಲ ಸ್ವಚ್ಛತೆಯಕಾರ್ಯಕ್ರಮ ನಡೆಯಿತು. ಶ್ರೀ ಜಗದೀಶ ಶೆಟ್ಟಿಕಾರ್ಯಕ್ರಮವನ್ನು ಸಂಯೋಜಿಸಿದರು.

74) ಕೊಲ್ಯ: ಸ್ವಚ್ಛಕೊಲ್ಯ ಸಂಕಲ್ಪದಿಂದ ಆರಂಭಿಸಿದ ತಂಡಇಂದು 2 ನೇ ತಿಂಗಳಿನ ಸ್ವಚ್ಛತಾಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿತು. ಶ್ರೀ ಉದಯಕುಮಾರ ಶೆಟ್ಟಿಅಧ್ಯಕ್ಷರು ಪಟ್ಟಣ ಪಂಚಾಯತಿಕೋಟೆಕಾರ್ ಹಾಗೂ ಶ್ರೀ ಸೀತಾರಾಮ್ ಜಂಟಿಯಾಗಿಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಹಲವಾರುಜನಆಸಕ್ತಿಯಿಂದ ಸ್ವಚ್ಚತೆಯಲ್ಲಿ ತೊಡಗಿಸಿಕೊಂಡರು. ಅಧಿಕಾರಿ ಶ್ರೀಮತಿ ಪೂರ್ಣಕಲಾ ವೈ ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

75) ಶರವುದೇವಸ್ಥಾನರಸ್ತೆ :ಗಣಪತಿ ಹೈಸ್ಕೂಲ್ ನ ವಿದ್ಯಾರ್ಥಿಗಳು ಕಳೆದೆರಡು ವಾರಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಶರವುದೇವಸ್ಠಾನದ ಮುಂಭಾಗದರಸ್ತೆಯಲ್ಲಿ ಸ್ವಚ್ಛತೆಯನ್ನುಕೈಗೊಂಡರು. ಶ್ರೀ ಗುರುರಾಜ್ ಹೆಗ್ಡೆ ಹಾಗೂ ಶ್ರೀ ದಾಮೋದರ್ ಹೆಗ್ಡೆ ಕಾರ್ಯಕ್ರಮವನ್ನು ಆರಂಭಗೊಳಿಸಿದರು. ವಿದ್ಯಾರ್ಥಿಗಳು ರಸ್ತೆಗಳ ಬದಿಗಳನ್ನು ಶುಚಿಗೊಳಿಸಿದರು. ಶ್ರೀ ರಾಮಚಂದ್ರರಾವ್ ಹಾಗೂ ಮಹೇಶ್ ಬೊಂಡಾಲ್‍ಕಾರ್ಯಕ್ರಮದಉಸ್ತುವಾರಿ ನೋಡಿಕೊಂಡರು.

76 ನಂತೂರು :ಹವ್ಯಕ ಸಭಾ ಸದಸ್ಯರಿಂದ ಪದುವಾ ವೃತ್ತದಿಂದ ನಂತೂರ ವೃತ್ತದ ವರೆಗೆ ಸ್ವಚ್ಛತೆಯಕಾರ್ಯಕ್ರಮ ನಡೆಯಿತು. ಮನಪಾ ಸದಸ್ಯೆ ಶ್ರೀಮತಿ ರೂಪಾ ಬಂಗೇರಾ ಹಾಗೂ ಶ್ರೀ ಗಣೇಶ್ ಮೋಹನ್‍ಜಂಟಿಯಾಗಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಸುಮಾರು 60 ಜನ ಹವ್ಯಕ ಸಭಾಕಾರ್ಯಕರ್ತರು ಸ್ವಚ್ಛತೆಯನ್ನುಕೈಗೊಂಡರು. ಶ್ರೀ ವೇಣುಗೋಪಾಲ್‍ಕಾರ್ಯಕ್ರಮ ಸಂಯೋಜಿಸಿದರು.

77) ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು “ಸ್ವಚ್ಛ ಮಂಗಳ ಗಂಗೋತ್ರಿ” ಎಂಬಕಲ್ಪನೆಯಲ್ಲಿಇಂದು ವಿಶ್ವವಿದ್ಯಾನಿಲಯದಆವರಣಲ್ಲಿ ಸ್ವಚ್ಛತೆಯನ್ನುಕೈಗೊಂಡರು. ಪೆÇ್ರೀ. ಬಾಲಕೃಷ್ಣ ಹಾಗೂ ಪೆÇ್ರೀ. ಮೋಹನ್‍ಶಿಂಘೆ ಜೊತೆಯಾಗಿ ಸ್ವಚ್ಛತಾಕಾರ್ಯಕ್ಕೆ ಚಾಲನೆ ನೀಡಿದರು. ನೂರಕ್ಕೂಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿ ನಾಯಕಅಶೋಕ್ ಹಾಗೂ ಶಶಾಂಕ್‍ಕಾರ್ಯಕ್ರಮವನ್ನು ಸಂಯೋಜಿಸಲು ಸಹಕರಿಸಿದರು.

ಈ ವಾರದಲ್ಲಿಒಟ್ಟು 13 ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನವನ್ನುಸಂಘಟಿಸಲಾಗಿತ್ತು. ಕಾರ್ಯಕ್ರಮದ ನಂತರ ಎಲ್ಲ ಕಾರ್ಯಕರ್ತರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಸ್ವಚ್ಛತಾಕಾರ್ಯಕ್ರಮಗಳಿಗೆ ಎಂಆರ್‍ಪಿಎಲ್‍ಹಾಗೂ ನಿಟ್ಟೆ ವಿದ್ಯಾಸಂಸ್ಥೆಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿವೆ.

65ರಿಂದ77 ನೇ ಅಭಿಯಾನಗಳ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ಮೇಲ್ಕಂಡ ಸುದ್ದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ “ಸ್ವಚ್ಚ ಮಂಗಳೂರು ಅಭಿಯಾನ” ದಲ್ಲಿ ಕೈಜೋಡಿಸಿ ಪೆÇ್ರೀತ್ಸಾಹಿಸುತ್ತಿವೆ.


Spread the love

Exit mobile version