Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 37 ನೇ ಶ್ರಮದಾನದ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 37 ನೇ ಶ್ರಮದಾನದ ವರದಿ

Spread the love

 ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 37 ನೇ ಶ್ರಮದಾನದ ವರದಿ

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 37ನೇ ಶ್ರಮದಾನವನ್ನು ಬಿಕರ್ನಕಟ್ಟೆ ಮೇಲ್ಸೆತುವೆಯ ಕೆಳಭಾಗ ಹಾಗೂ ಸುತ್ತಮುತ್ತ್ತಲಿನ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 24-6-2018 ರವಿವಾರದಂದು ಬೆಳಿಗ್ಗೆ  7:30 ಕ್ಕೆ ಸರಿಯಾಗಿ ಪೂಜ್ಯ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ  ಕಾಶಿ ರಘೋತ್ತಮ ರಾವ್, ನಿರ್ದೇಶಕರು ಮನಸ್ ತರಬೇತಿ ಸಂಸ್ಥೆ ಬೆಂಗಳೂರು ಹಾಗೂ ಎನ್ನಾರೈ ವಿಭಾ ಪ್ರಭು ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಳಿನಿ ಭಟ್, ರವಿಶಂಕರ್ ಕೆ.ಕೆ,  ಸತೀಶ್ ಭಟ್, ಪ್ರಶಾಂತ ಯಕ್ಕೂರು, ಅಶೋಕ ಸುಬ್ಬಯ್ಯ ಮತ್ತಿತರರು ಹಾಜರಿದ್ದರು.

ರಘೋತ್ತಮ ರಾವ್ ಮಾತನಾಡಿ “ಸ್ವಚ್ಚ ಮಂಗಳೂರು ಅಭಿಯಾನದಂತಹ ಆಂದೋಲನಗಳು ಬೆಂಗಳೂರು ನಗರ ಸೇರಿದಂತೆ ದೇಶದ ಯಾವುದೇ ಪ್ರದೇಶದಲ್ಲಿ ಇಷ್ಟು ಅಚ್ಚುಕಟ್ಟಾಗಿ ಹಾಗೂ ವ್ಯಾಪಕವಾಗಿ ನಡೆದಿಲ್ಲ. ಈ ನಗರ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಡೆಯುವ ತನಕ ಈ ಕಾರ್ಯ ನಡೆಯಬೇಕು ಆ ನಂತರವೂ ಸ್ವಚ್ಛತೆಯ ಕಾರ್ಯ ಮುಂದುವರೆಯಬೇಕು. ಇಂತಹ ಕಾರ್ಯದಲ್ಲಿ ಕೈಜೋಡಿಸಿದ ಪ್ರತೀ ಕಾರ್ಯಕರ್ತರು ಧನ್ಯ” ಎಂದು ಹೇಳಿ ಶುಭಹಾರೈಸಿದರು

ಅಮೇರಿಕೆಯಲ್ಲಿ ವಾಸಿಸುತ್ತಿರುವ ವಿಭಾ ಪ್ರಭು ಮಾತನಾಡಿ “ಭಾರತಕ್ಕೆ ಬಂದಾಗಿನಿಂದ ಕಳೆದ ಮೂರು ವಾರಗಳಿಂದ ನಿರಂತರವಾಗಿ ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇಲ್ಲಿನ ಕಾರ್ಯಕರ್ತರ ಉತ್ಸಾಹ ನನ್ನನ್ನು ಮತ್ತಷ್ಟು ಪ್ರೇರೇಪಿಸಿದೆ. ಎರಡು ವರ್ಷಗಳ ಹಿಂದೆ ಮಂಗಳೂರಿಗೆ ಬಂದಿದ್ದೆ. ಸ್ವಚ್ಛತೆಯ ವಿಷಯದಲ್ಲಿ ಅಂದಿಗೂ ಇಂದಿಗೂ ತುಂಬಾ ವ್ಯತ್ಯಾಸ ಕಾಣುತ್ತಿದ್ದೇನೆ. ಸ್ವಚ್ಛತೆಯ ಅರಿವು ಮೂಡುತ್ತಿರುವುದನ್ನು ಸ್ಪಷ್ಟವಾಗಿ ನೋಡುತ್ತಿದ್ದೇನೆ. ನನ್ನ ದೇಶ, ನನ್ನ ನೆಲ, ನನ್ನ ಪರಿಸರ ಎಂಬ ಕಾಳಜಿ ಪ್ರತಿಯೊಬ್ಬರಲ್ಲೂ ಮೂಡಿಸುವಂತಾಗಲಿ ಎಂದು ಆಶಿಸುತ್ತೇನೆ” ಎಂದು ತಿಳಿಸಿದರು.

ಸ್ವಚ್ಛತೆ: ಕುಲಶೇಖರ್ ಕೈಕಂಬ ಮೇಲ್ಸೆತುವೆಯ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಪ್ರಥಮದಲ್ಲಿ ಪ್ಲೈಒವರ್ ಕಂಬಗಳನ್ನು ಸ್ವಚ್ಛಗೊಳಿಸಲು ನಿರ್ಧರಿಸಲಾಯಿತು. ಅಭಿಯಾನದ ಪ್ರಧಾನ ಸಂಯೋಜಕ ದಿಲ್ ರಾಜ್ ಆಳ್ವ, ಮುಖೇಶ್ ಆಳ್ವ ಹಾಗೂ ಮೆಹಬೂಬ್ ಖಾನ್ ನೇತೃತ್ವದಲ್ಲಿ ಮೂರು ತಂಡಗಳು ಕಂಬಗಳಿಗೆ ಅಂಟಿಸಿದ್ದ ಪೆÇೀಸ್ಟರ್‍ಗಳನ್ನು ಕಿತ್ತು ತೆಗೆದರು. ನಂತರ ನೀರು ಹಾಕಿ ಸ್ವಚ್ಛಗೊಳಿಸಿದರು. ಜೊತೆಗೆ ಒಂದು ತಂಡ ಸುತ್ತಮುತ್ತಲಿನ ಪರಿಸರದಲ್ಲಿದ್ದ ಕಲ್ಲು, ಮಣ್ಣು ಹಾಗೂ ಅಲ್ಲಲ್ಲಿ ಬಿದ್ದಿದ್ದ ಗಾಜಿನ ಬಾಟಲ್ ತೆಗೆದು ಶುಚಿಗೊಳಿದರು. ಮತ್ತೊಂದು ಗುಂಪು ಪಡೀಲ್ ಸಾಗುವ ಹೆದ್ದಾರಿಯ ಬಳಿಯ ತೋಡುಗಳಲ್ಲಿ ತುಂಬಿದ್ದ ತ್ಯಾಜ್ಯವನ್ನು ತೆಗೆದು ಸ್ವಚ್ಛ ಮಾಡಿದರು. ಕಾರ್ಯಕರ್ತರು ಕಳೆ ಕತ್ತರಿಸುವ ಯಂತ್ರವನ್ನು ಉಪಯೋಗಿಸಿ ಮಾರ್ಗ ಬದಿಯಲ್ಲಿ ಬೆಳೆದಿದ್ದ ಹುಲ್ಲು ಕತ್ತರಿಸಿ ತೆಗೆದು ಶುಚಿಮಾಡಿದರು. ನಂತರ ಪ್ಲೈಒವರ್ ಕೆಳಭಾಗದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ತಾತ್ಕಾಲಿಕ ಆಸನಗಳನ್ನು ತೆರವುಗೊಳಿಸಿ, ಗುಣಮಟ್ಟದ ಆಸನಗಳನ್ನು ಹಾಕಿ ಪ್ರಯಾಣಿಕರಿಗೆ ಹಾಗೂ ಆಟೋ ಚಾಲಕರಿಗೆ ಕುಳಿತುಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಕುಲಶೇಖರ ಶಕ್ತಿನಗರ ಜಂಕ್ಷನ್‍ನಲ್ಲಿ ಸುಧೀರ್ ವಾಮಂಜೂರು, ಶ್ರೇಯಸ್ ಪಂಡಿತ್ ಹಾಗೂ ಕಾರ್ಯಕರ್ತರು ಈ ಹಿಂದೆ ತ್ಯಾಜ್ಯರಾಶಿ ತೆಗೆದು ಸ್ವಚ್ಛ ಮಾಡಿ ಹೂವಿನ ಗಿಡ ನೆಟ್ಟಿದ್ದ ಸ್ಥಳವನ್ನು ಗುಡಿಸಿ ಶುಚಿಮಾಡಿದರು. ಜೊತೆಗೆ ಪ್ರತಿವಾರದಂತೆ ಆ ಪರಿಸರದಲ್ಲಿದ್ದ ಬ್ಯಾನರ್‍ಗಳನ್ನು ತೆರವುಗೊಳಿಸಿದರು. ಸೌರಜ್ ಮಂಗಳೂರು, ಚೇತನಾ ಗಡಿಯಾರ್, ಧನುಷ್ ಶೆಟ್ಟಿ ಮತ್ತಿತರರು ಶ್ರಮದಾನದಲ್ಲಿ ಕೈಜೋಡಿಸಿದರು.

‘ಕಸದಿಂದ ರಸ’ ಕಾರ್ಯಾಗಾರ: ಮಂಗಳೂರು ಹಿರಿಯ ನಾಗರಿಕರಿಗಾಗಿ ರಾಮಕೃಷ್ಣ ಮಠದಲ್ಲಿ ಕಸದಿಂದ ರಸ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಶ್ರೀಮತಿ ನಂದಿನಿ ರಘುಚಂದ್ರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ಮಡಿಕೆಯಲ್ಲಿ ಗೊಬ್ಬರ ತಯಾರಿಕೆ’ ಪ್ರಾತ್ಯಕ್ಷಿಕೆÉಯನ್ನು ತೋರಿಸಿಕೊಟ್ಟರು. ಮನೆಯಲ್ಲಿ ಉತ್ಪಾದನೆಯಾಗುವ ಹಸಿಕಸವನ್ನು ಹೇಗೆ ಕಾಂಪೆÇೀಸ್ಟ್ ಆಗಿ ಪರಿವರ್ತಿಸಬೇಕು, ಪರಿಸರದ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಅನಾಹುತಗಳ ಬಗ್ಗೆ ಅರಿವು ನೀಡಿದರು. ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿಯವರಿಂದ “ಸ್ವಚ್ಛ ಮಂಗಳೂರು ನಡೆದು ಬಂದ ದಾರಿ” ಎಂಬ ವಿಷಯದ ಕುರಿತು ಉಪನ್ಯಾಸ ಜರುಗಿತು. ಹಿರಿಯರ ಸಂಘದ ಪದಾಧಿಕಾರಿಗಳಾದ ಪಿ ಜಿ ಶೆಣೈ, ಕೆ ಜಯರಾಜ್ ರೈ, ಕೆ ರಮೇಶ್ ರಾವ್, ಪೀಟರ್ ಒಸ್ವಲ್ಡ್ ರೋಡ್ರಿಗಸ್ ಹಾಗೂ ನಾಗೇಶ್ ಕೆ ಸೇರಿದಂತೆ ಅನೇಕ ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಬಳಿಕ ಆಸಕ್ತರಿಗೆ ಕಾಂಪೆÇೀಸ್ಟ್ ತಯಾರಿಸುವ ವಿಶೇಷವಾದ ಮಣ್ಣಿನ ಮಡಿಕೆಗಳನ್ನು ನೀಡಲಾಯಿತು.

ಪ್ರವೀಣ ಶೆಟ್ಟಿ, ಪಿ ಎನ್ ಭಟ್, ಅನಿರುದ್ಧ ನಾಯಕ್, ಶಿವರಾಜ್ ವಾಮಂಜೂರು, ಸಾಕ್ಷಿತ ಎಂ ಸುವರ್ಣ, ಕನಕರಾಯ ಸೇರಿದಂತೆ ಅನೆಕ ಕಾರ್ಯಕರ್ತರು ಶ್ರಮದಾನದಲ್ಲಿ ಪಾಲ್ಗೊಂಡರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಯಾನದ ಉಸ್ತುವಾರಿ ವಹಿಸಿ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಅಭಿಯಾನಕ್ಕೆ ಎಂ ಆರ್‍ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.


Spread the love

Exit mobile version