Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 8ನೇ ವಾರದ 14 ಕಾರ್ಯಕ್ರಮಗಳ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 8ನೇ ವಾರದ 14 ಕಾರ್ಯಕ್ರಮಗಳ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ8ನೇ ವಾರದ 14 ಕಾರ್ಯಕ್ರಮಗಳ ವರದಿ
78) ಬಲ್ಮಠ–ಆಗ್ನೇಸ್ ಟುವರ್ಡ್ಸ್ ಕಮುನಿಟಿ ಹೆಸರಿನ, ಸೇಂಟ್‍ಆಗ್ನೇಸ್‍ಕಾಲೇಜಿನ ವಿದ್ಯಾರ್ಥಿನಿಯರ ತಂಡ ಬಲ್ಮಠದ ಕಲೆಕ್ಟರ್‍ಗೇಟ್ ಆಸುಪಾಸಿನಲ್ಲಿ ಸ್ವಚ್ಛತೆಯನ್ನು ಕೈಗೊಂಡಿದ್ದರು. ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಹಾಗೂ ಸತ್ಯನಾರಾಯಣ ಕೆ ವಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಸುಮಾರು 50 ವಿಧ್ಯಾರ್ಥಿನಿಯರು ಪ್ರಾಧ್ಯಾಪಕ ಚಂದ್ರಮೋಹನ್ ಮರಾಠೆ ನೇತೃತ್ವದಲ್ಲಿ ಸ್ವಚ್ಛ ಅಭಿಯಾನದಲ್ಲಿ ಕೈ ಜೋಡಿಸಿದರು. ಸಿಂಡಿಕೇಟ್ ಸದಸ್ಯ ಶ್ರೀ ಹರೀಶ್ ಆಚಾರ್ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು
79) ರಥಬೀದಿ – ಟೀಮ್ ಇನ್ಸ್ಪಿರೇಶನ್ ಯುವಕರು ರಥಬೀದಿಯಲ್ಲಿರುವ ಸರಕಾರಿ ಮಹಿಳಾ ಕಾಲೇಜಿನ ಆವರಣವನ್ನು ಶುಚಿಗೊಳಿಸಿದರು. ಸ್ವಾಮಿ ಧರ್ಮವೃತಾನಂದಜಿ ಹಾಗೂ ಶ್ರೀಕರ ಪ್ರಭು ಅಭಿಯಾನವನ್ನು ಶುಭಾರಂಭಗೊಳಿಸಿದರು. ಪೆÇೀಲಿಸ್ ಅಧಿಕಾರಿ ಮದನ್ ಉಸ್ತುವಾರಿಯಲ್ಲಿ ಸುಮಾರು 150 ಯುವಕರು ಶನಿವಾರದಿಂದಲೇ ಅಭಿಯಾನಕ್ಕೆ ತಯಾರಿ ನಡೆಸಿದ್ದರು. ಒಂದು ತಂಡ ಕಾಲೇಜಿನ ಆವರಣವನ್ನು ಶುಚಿಗೊಳಿಸಿದರು. ಮತ್ತೊಂದು ತಂಡ ಕಾಲೇಜಿಗೆ ಸುಮಾರು 120 ಲೀಟರ್ ನಷ್ಟು ಬಣ್ಣ ಬಳಿದು ಸುಂದರಗೊಳಿಸಿದರು. ಶನಿವಾರದಿಂದ ಭಾನುವಾರ ರಾತ್ರಿ ಒಂಬತ್ತು ಗಂಟೆಯವರೆಗೂ ಈ ಕಾರ್ಯಕ್ರಮ ನಡೆದದ್ದು ಇತಿಹಾಸವಾಯಿತು. ಸಾಹಿಲ್ ಕೋಡಿಕಲ್, ಪ್ರಮೋದ ಕರ್ಕೇರಾ, ಕಾರ್ತಿಕ್ ಪಂಪವೆಲ್ ಮತ್ತಿತರು ಸಕ್ರಿಯವಾಗಿ ಭಾಗವಹಿಸಿದರು.
80) ಅತ್ತಾವರ : ಶ್ರೀ ಚಕ್ರಪಾಣಿ ದೇವಸ್ಥಾನದ ಭಕ್ತರ ಮುಂದಾಳುತನದಲ್ಲಿ ಅತ್ತಾವರಕಟ್ಟೆಯ ಸುತ್ತಮುತ್ತ ಸ್ವಚ್ಛತೆಯ ಕಾರ್ಯ ಜರುಗಿತು. ಧರ್ಮಣ್ಣ ನಾಯ್ಕ್ ಹಾಗೂ ಎಂ ಎಸ್ ಕೋಟ್ಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ ಎಂ ಕುಶೆ ಶಾಲಾ ವಿದ್ಯಾರ್ಥಿಗಳು ಅಧ್ಯಾಪಕ ಪ್ರತೀಮ್ ಕುಮಾರ ಮಾರ್ಗದರ್ಶನದಲ್ಲಿ ಕಟ್ಟೆಯಿಂದ ಚಕ್ರಪಾಣಿ ದೇವಸ್ಥಾನದವರೆಗೂ ರಸ್ತೆಯ ಬದಿಗಳನ್ನು ಸ್ವಚ್ಛ ಮಾಡಿದರು. ಅನಿಲ್ ನಾಯ್ಕ್ ಮುತುವರ್ಜಿಯಲ್ಲಿ ಜೆಸಿಬಿ ಬಳಸಿಕೊಂಡು ಅಟೋ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನೂಕೂಲ ಮಾಡಿಕೊಡಲಾಯಿತು. ಇದಲ್ಲದೇ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಸುಂದರಗೊಳಿಸಲಾಯಿತು.

ramakrishna-mission-shows-the-way-for-better-cleaner-mangaluru-1

81) ವಿಠೋಭಾಟೆಂಪಲ್‍ರಸ್ತೆ: ಗಣಪತಿ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಸತತ ನಾಲ್ಕನೇ ವಾರದ ಅಭಿಯಾನ ನಗರದ ವಿ ಟಿ ರಸ್ತೆಯಲ್ಲಿ ಜರುಗಿತು. ನಿಗಮ್ ವಸಾನಿ ಹಾಗೂ ಪ್ರವೀಣ ಪಿ. ಕಡ್ಲೆಜಂಟಿಯಾಗಿಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಸುಮಾರು 120 ವಿದ್ಯಾರ್ಥಿಗಳು ಮುಖ್ಯಾಧ್ಯಾಪಕಿ ರಂಜಿತಾ ಜೋಶಿ ಹಾಗೂ ರಾಮಚಂದ್ರ ನಾಯ್ಕ್ ಮಾರ್ಗದರ್ಶನದಲ್ಲಿ ಟೆಂಪಲ್ ಸ್ಕ್ವೇರ್ ನಿಂದ ಯೇನೆಪೆÇೀಯ ಆಸ್ಪತ್ರೆಯವರೆಗೂ ರಸ್ತೆಯನ್ನು ಶುಚಿಗೊಳಿಸಿದರು. ಮಹೇಶ್ ಬೊಂಡಾಲ್ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.
82) ಮುಳಿಹಿತ್ಲು: ಅಂಬಾ ಮಹೇಶ್ವರಿ ಭಜನಾ ಮಂಡಳಿಯ ಸದಸ್ಯರು ಮುಳಿಹಿತ್ಲು ಪ್ರದೇಶದ ಟೈಲರೀ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ವಸಂತಕೊಟ್ಟಾರಿ ಹಾಗೂ ವಸಂತಿ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಉಮಾನಾಥ್ ಕೋಟೆಕಾರ್ ಮುತುವರ್ಜಿಯಲ್ಲಿ ತ್ಯಾಜ್ಯರಾಶಿ ಬಿಳುತ್ತಿದ್ದ ಸ್ಥಳವನ್ನು ಸ್ವಚಗೊಳಿಸಿ ಅಲ್ಲಿ ಪುಟ್ಟ ಗಾರ್ಡನ್ ರೂಪಿಸಲಾಗಿದೆ. ರತ್ನಾ ಆಳ್ವ ಜೊತೆಗೂಡಿ ನಿವೇದಿತ ಬಳಗ ಸದಸ್ಯರು ಸ್ಥಳೀಯರ ಮನೆ ಮನೆಗೆ ತೆರಳಿಕಸ ರಸ್ತೆಯ ಬದಿಯಲ್ಲಿ ಹಾಕದಂತೆ ವಿನಂತಿಸಿ ಜಾಗೃತಿಯ ಕಾರ್ಯ ಮಾಡಿದರು. ಗುರುಪ್ರಸಾದ ಹಾಗೂ ಪುನೀತ್ ವಿಶೇಷ ಶ್ರಮವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸೀತಾರಾಮ್ ಎ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿಕೊಂಡಿದ್ದರು.
83) ಹಂಪಣಕಟ್ಟೆ : ವೆನ್‍ಲಾಕ್ ಬಳಿಯ ರಸ್ತೆಯಲ್ಲಿ ಹಿಂದೂ ವಾರಿಯರ್ಸ್ ಬಳಗದಿಂದ ಸ್ವಚ್ಛತಾ ಕಾರ್ಯ ನಡೆಯಿತು. ಶ್ರೀಕೃಷ್ಣ ಉಪಾಧ್ಯಾಯ ಹಾಗೂ ಪ್ರಶಾಂತ ಉಬರಂಗಳ ಅಭಿಯಾನಕ್ಕೆ ಚಾಲನೆ ನೀಡಿದರು. ಹಂಪಣಕಟ್ಟೆ ವೃತ್ತದಿಂದ ಪ್ರಾರಂಭಿಸಿ ರೈಲ್ವೇ ಸ್ಟೇಶನ್ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಲಾಯಿತು. ಶಿವು ಪುತ್ತೂರು ನೇತೃತ್ವದಲ್ಲಿ ವೆನ್‍ಲಾಕ್ ಆಸ್ಪತ್ರೆಯ ಪಕ್ಕದ ರಸ್ತೆಯ ತೋಡುಗಳಲ್ಲಿ ಇಳಿದು ಮೂರು ಟಿಪ್ಪರಗಳಷ್ಟು ಕಸವನ್ನು ಹೊರತೆಗೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಅಲ್ಲದೆ ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿದ್ದ ಮಣ್ಣುರಾಶಿಯನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಯಿತು. ಯೋಗಿಶ್ ಕಾರ್ಯತ್ತಡ್ಕ ಕಾರ್ಯಕ್ರಮ ಸಂಯೋಜಿದರು.
84) ಮಣ್ಣಗುಡ್ಡ :ಆರ್ಟ್‍ಆಫ್ ಲೀವಿಂಗ್ ಬಳಗದಿಂದ ಮಣ್ಣಗುಡ್ಡದ ಗುರ್ಜಿಯ ಸುತ್ತಮುತ್ತ ಸಚ್ಛತಾ ಅಭಿಯಾನ ನಡೆಯಿತು. ಡಾ, ದಿವಾಕರ್ ರಾವ್ ಹಾಗೂ ಸುಮನಾ ಕಾಮತ್ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀಸೂರ್ಯ ಪ್ರಕಾಶ್ ಹಾಗೂ ವನಮಾಲಾ ಸೇರಿದಂತೆ ಸುಮಾರು 50 ಜನ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದರು. ಮನಪಾ ಸದಸ್ಯೆ ಜಯಂತಿ ಆಚಾರ ಉಪಸ್ಥಿತರಿದ್ದರು.
85) ಯಯ್ಯಾಡಿ : ಶುಭೋದಯ ಆಳ್ವ ನೇತೃತ್ವದ ಗೆಳೆಯರ ಬಳಗ ಏರ್ ಪೆÇೀರ್ಟ್ ರಸ್ತೆಯ ಯ್ಯಾಡಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು. ಡಾ. ಹಂಸರಾಜ್ ಆಳ್ವ ಹಾಗೂ ಡಾರವೀಶ್‍ತುಂಗ ಕಾರ್ಯಕ್ರಮವನ್ನು ಆರಂಭಗೊಳಿಸಿದರು. ಸುಮಾರು ಎರಡು ಗಂಟೆಗಳ ಕಾಲ ಅಭಿಯಾನ ನಡೆಯಿತು. ಸಾಮಾಜಿಕ ಕಾರ್ಯಕರ್ತ ಚರಣ, ಶ್ರೀ ಅಶೋಕ್ ಹೆಗ್ಡೆ, ಶ್ರೀದೇವದಾಸ್ ಆಳ್ವ ಮತ್ತಿತರ ಗಣ್ಯರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
86) ಚಿಲಿಂಬಿ :ಅಲ್ಪಸಂಖ್ಯಾತ ವಸತಿ ನಿಲಯದ ವಿದ್ಯಾರ್ಥಿನಿಯರಿಂದ ಸ್ವಚ್ಛ ಮಂಗಳುರು ಅಭಿಯಾನ ನಡೆಯಿತು. ಪೂರ್ಣಿಮಾಸಿ ಹಾಗೂ ವಂದನಾ ನಾಯಕ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು. ತದನಂತರ ಚಿಲಿಂಬಿ ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಕೈಂಕರ್ಯ ನಡೆಯಿತು. ರಸ್ತೆ ವಿಭಾಜಕಗಳಲ್ಲಿದ್ದ ಹುಲ್ಲುಕಸವನ್ನು ಶುಚಿಗೊಳಿಸಿ ಪರಿಸರವನ್ನು ಅಂದವಾಗಿಸಿದರು. ಪೂರ್ಣಿಮಾ ಕುಲಾಲ ಹಾಗೂ ಸುಬ್ರಾಯ್ ನಾಯಕ್ ಮಾರ್ಗದರ್ಶಿಸಿದರು. ವಿಠಲದಾಸ್ ಪ್ರಭು ಸಂಯೋಜಿಸಿದರು.
87) ಜ್ಯೋತಿ :ಸಿಲ್ವರ್ ಫಾಕ್ಸ್ ಯುವಕರ ತಂಡ ಜ್ಯೋತಿ ವೃತ್ತದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆಶ್ವಥ್ ಕೊಟ್ಟಾರಿ ಹಾಗೂ ಸಚಿನ್ ಮೋರೆ ಜೊತೆಗೂಡಿ ಯುವಕರು ನಗರದ ಸೌಂದರ್ಯ ಹಾಳು ಮಾಡುವ ರಸ್ತೆಯ ವಿಭಾಜಕಗಳಲ್ಲಿ ಹಾಗೂ ವೃತ್ತದಲ್ಲಿದ್ದ ಬ್ಯಾನರ್ ಗಳನ್ನು ತೆರವುಗೊಳಿಸಿದರು ನಂತರ ರಸ್ತೆಗಳನ್ನು ಪೆರಕೆ ಹಿಡಿದು ಶುಚಿಗೊಳಿಸಿದರು. ನಿಹಾಲ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.
88) ನೀರಶ್ವಾಲ್ಯರಸ್ತೆ : ನಿತ್ಯಾನಂದ ಸಹೃದಯರ ಬಳಗದ ಸದಸ್ಯರಿಂದ ನೀರಶ್ವಾಲ್ಯ ರಸ್ತೆಯು ಶುಚಿಗೊಂಡಿತು. ಮಾಧವಕೋಟ್ಯಾನ್ ಹಾಗೂ ಶ್ರೀ ದೇವರಾಯ ಕಾಮತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಅಭಿಯಾನ ನಡೆಯಿತು. ಶ್ರೀ ರೂಪೇಶ್ ಹಾಗೂ ಮಾಧವ ಶೆಟ್ಟಿ ಕಾರ್ಯಕ್ರಮದ ಜವಾಬ್ದಾರಿ ಹೊತ್ತುಕೊಂಡಿದ್ದರು.
89) ಎಮ್ಮೆಕೆರೆ :ಎಮ್ಮೆಕೆರೆ ರಸ್ತೆಯಲ್ಲಿ ಮಂಕಿಸ್ಟಾಂಡ್ ಗೆಳೆಯರಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸ್ನೇಕ್ ಪಪು ಸುವಿತ್ ಮಾರ್ಗದರ್ಶನದಲ್ಲಿ ಹಲವಾರು ಶಾಲಾ ವಿದ್ಯಾರ್ಥಿಗಳು ರಸ್ತೆಗಳನ್ನು ಶುಚಿಗೊಳಿಸಿದರು.
90) ತೊಕೊಟ್ಟು : ವೀರ ಮಾರುತಿ ವ್ಯಾಯಾಮ ಶಾಲೆ ಹಾಗೂ ಓಂ ಶ್ರೀ ಪರಂಜ್ಯೋತಿ ಮಾನವ ಸೇವಾ ಆಲಯದ ಸದಸ್ಯರಿಂದ ತೊಕ್ಕೊಟ್ಟು ಬಸ ನಿಲ್ದಾಣದ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಶ್ರೀ ರಾಮಚಂದ್ರ ಹಾಗೂ ಶ್ರೀಮತಿ ಚಂದ್ರಕಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಚ್ಛತೆಯೊಂದಿಗೆ ಬಸ್ ತಂಗುದಾಣಕ್ಕೆ ಬಣ್ಣ ಬಳಿದು ಅಂದಗೊಳಿಸಲಾಯಿತು. ಶ್ರೀ ವಿಠಲ್ ಶ್ರೀಯಾನ್, ವೇದಿತ್ ಕುಮಾರ್ ಕಾರ್ಯಕ್ರಮವನ್ನು ಸಂಯೋಜಿಸಿದರು.
91)ಕಲ್ಲಡ್ಕ: ಸ್ವಚ್ಛ ಭಾರತ ನಿರ್ಮಾಣ ಸಂಘ ಹಾಗೂ ಶ್ರೀರಾಮ್ ವಿದ್ಯಾಕೇಂದ್ರ ಕಲ್ಲಡ್ಕ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ರಮೇಶ್ ನಾಯ್ಕ್ ಮಾರ್ಗದರ್ಶನದಲ್ಲಿ ಹುಲ್ಲುಕತ್ತರಿಸುವ ಮಶಿನ್ ಬಳಸಿಕೊಂಡು ಕಲ್ಲಡ್ಕ ಪೇಟೆಯನ್ನು ಶುಚಿಗೊಳಿಸಲಾಯಿತು. ಹಲವಾರು ಜನ ಸ್ವಚ್ಛತೆಯಲ್ಲಿ ಪಾಲ್ಗೊಂಡರು. ಶ್ರೀ ಹರೀಶ್ ಎ ಹಾಗೂ ಶ್ರೀಮತಿ ಸುನೀತಾ ಕಾರ್ಯಕ್ರಮವನ್ನು ಸಂಯೋಜಿಸಿದರು.
ಈ ಬಾರಿ ಒಟ್ಟು 14 ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ಅಭಿಯಾನದ ನಂತರ ಎಲ ್ಲಕಾರ್ಯಕರ್ತರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಕಾರ್ಯಕ್ರಮಗಳಿಗೆ ನಿಟ್ಟೆ ವಿದ್ಯಾಸಂಸ್ಥೆ ಹಾಗೂ ಎಂಆರ್‍ಪಿಎಲ್ ಪ್ರಾಯೋಜಕತ್ವ ನೀಡಿವೆ.


Spread the love

Exit mobile version