Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 9ನೇ ವಾರದ ಸ್ವಚ್ಚತಾ ಕಾರ್ಯಕ್ರಮ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 9ನೇ ವಾರದ ಸ್ವಚ್ಚತಾ ಕಾರ್ಯಕ್ರಮ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 9ನೇ ವಾರದ ಸ್ವಚ್ಚತಾ ಕಾರ್ಯಕ್ರಮ

ಮಂಗಳೂರು: 3ನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 9ನೇ ವಾರದ ಸ್ವಚ್ಚತಾ ಕಾರ್ಯಕ್ರಮ ಜರುಗಿತು.

image005ramakrishna-mission-20161212-005

ಪಿವಿಎಸ್ ವೃತ್ತ: ಪ್ರೇರಣಾ ಒಕ್ಕೂಟದ ಸದಸ್ಯರಿಂದ ಕೊಡಿಯಾಲ್ ಬೈಲ್ ನಲ್ಲಿ ಸ್ವಚ್ಛತಾ ಅಭಿಯಾನ ನೆರವೇರಿತು. ಲಯನ್ ಪಿ ಕಿಶೋರ್‍ರಾವ್ ಹಾಗೂ ಚಲನಚಿತ್ರ ನಿರ್ಮಾಪಕ ಕಿಶೋರ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಯೋಜಕರಾದ ಸದಾನಂದ ಉಪಾಧ್ಯಾಯ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಸಿದರು. ನಂತರ ಗೀತಾ ಕಲ್ಯಾಣಪುರ ಹಾಗೂ ಜಯಾರಾವ್ ಸೇರಿದಂತೆ ಸುಮಾರು 60 ಜನ ಸದಸ್ಯರು ನಾಲ್ಕು ತಂಡಗಳಾಗಿ ವಿಂಗಡಿಸಿಕೊಂಡು ಪಿವಿಎಸ್ ವೃತ್ತದ ಆಸುಪಾಸಿನಲ್ಲಿದ ಕಸವನ್ನೆಲ್ಲ ಹೆಕ್ಕಿ ಗೂಡಿಸಿ ಶುಚಿಗೊಳಿಸಿದರು.

ಹಳೆಯ ಬಸ್ ನಿಲ್ದಾಣ: ಗಣಪತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಂಪಣಕಟ್ಟೆಯಲ್ಲಿರುವ ಹಳೇ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಬೆಳಿಗ್ಗೆ ಏಳು ಗಂಟೆಗೆ ಸರಿಯಾಗಿ ಕುಂಬ್ಳೆ ನರಸಿಂಹ ಪ್ರಭು ಹಾಗೂ ಪ್ರಾಧ್ಯಾಪಕ ರಾಮಚಂದ್ರ ನಾಯ್ಕ್‍ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆಗೊಳಿಸಿದರು. ಮಹೇಶ ಬೊಂಡಾಲ್ ಮಾರ್ಗದರ್ಶನದಲ್ಲಿ ಯುವಕರು ಇಡೀ ಹಳೇ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದರು. ಅದಲ್ಲದೇ ಕಲಾ ಅಧ್ಯಾಪಕರಾದ ಹರೀಶ್‍ಹಾಗೂ ಸುಂದರ್ ಸೇರಿದಂತೆ ಕಲಾಸಕ್ತ ವಿದ್ಯಾರ್ಥಿಗಳು ಜಿಎಚ್‍ಎಸ್‍ರಸ್ತೆಯಲ್ಲಿರುವ ಶಾಲಾ ಆವರಣ ಗೋಡೆಯನ್ನು ಶುಚಿಗೊಳಿಸಿ ಬಣ್ಣ ಬಳಿದು ಅಂದವಾದ ಕಲಾಕೃತಿಗಳನ್ನು ರಚಿಸಿರುವುದು ಮನಮೋಹಕವಾಗಿದೆ. ಸುಮಾರು 120 ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದರು.

ಪಡೀಲ್: ಪಡೀಲ್ ನಾಗರಿಕರು ಪಡೀಲ್ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿಜಿತ ಕಾಮಾನದಂಜಿ ಮಹರಾಜ್ ಹಾಗೂ ಪಿ ತಿಲೋತ್ತಮ ಕೋಟ್ಯಾನ ಕಾರ್ಯಕ್ರಮಕ್ಕೆ ಜಂಟಿಯಾಗಿ ಚಾಲನೆ ನೀಡಿದರು . ಉದಯ ಕೆ ಪಿ ಸೇರಿ ರಸ್ತೆಯ ಅಕ್ಕಪಕ್ಕದ ಮಣ್ಣಿನ ರಾಶಿಗಳನ್ನು ತೆಗೆದು ಹೆದ್ದಾರಿಯಲ್ಲಿಯೇ ನಿಲ್ಲುತ್ತಿದ್ದ ಆಟೋಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಯಿತು. ಕೆ ಬಾಲಕೃಷ್ಣ ನಾಯಕ ಸ್ವಚ್ಛತಾ ಕಾರ್ಯಕ್ರಮವನ್ನು ಸಂಯೊಜಿಸಿದರು.

ಹಂಪಣಕಟ್ಟಾ: ಕೃಷ್ಣ ಭವನ ಆಟೋಚಾಲಕರ ಸಂಘದ ಸದಸ್ಯರಿಂದ ಹಂಪನಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ಜರುಗಿತು. ಕೆ ವಿ ಸತ್ಯನಾರಾಯಣ ಹಾಗೂ ಗಣೇಶ್ ಬೋಳಾರ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ದಿಲರಾಜ್ ಆಳ್ವ ಮುಂದಾಳತ್ವದಲ್ಲಿ ಕ್ಲಾಕ್‍ಟವರ್ ಬಳಿ, ಟೋಕಿಯೋ ಮಾರ್ಕೆಟ್‍ಎದುರು ಹಾಗೂ ಹಂಪಣಕಟ್ಟಾ ಮುಖ್ಯ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯಕೈಗೊಂಡರು. ಟೋಕಿಯೋ ಮಾರ್ಕೆಟ್‍ಎದುರು ಇಂದು ಜೆಸಿಬಿ ಬಳಸಿ ಕಸದ ರಾಶಿಯನ್ನು ತೆರವುಗೊಳಿಸಲಾಯಿತು. ಆಟೋಚಾಲಕರಾದ ನವೀನ್ ಶೆಟ್ಟಿ ಮತ್ತು ಯೋಗಿಶ್ ಸೇರಿದಂತೆ ನಲವತ್ತು ಜನ ಆಟೋಚಾಲಕರು ಅಭಿಯಾನದಲ್ಲಿ ಸಕ್ರಿಯವಾಗಿ ತೊದಗಿಸಿಕೊಂಡಿದ್ದರು.

ಕದ್ರಿ: ಪರಂಜ್ಯೋತಿ ಮಾನವ ಸೇವಾ ಸಮಿತಿ ಹಾಗೂ ನೋವಿಗೋ ಸೊಲ್ಯೂಶನ್ಸ್ ಸಿಬ್ಬಂದಿಗಳು ಜಂಟಿಯಾಗಿ ಕದ್ರಿ ಮಾರ್ಕೆಟ್ ಬಳಿ ಸ್ವಚ್ಛ ಮಂಗಳುರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಲೆಕ್ಕಪರಿಶೋಧಕ ಶಿವಕುಮಾರ್ ಅಭಿಯಾನವನ್ನು ಹಸಿರು ನಿಶಾನೆ ತೋರಿ ಆರಂಭಗೊಳಿಸಿದರು. ನೋವಿಗೊ ಸೊಲ್ಯೂಶನ್ಸ್ ನ ಉತ್ಸಾಹಿ ಯುವಕರು ಎರಡು ಬಸ್ ತಂಗುದಾನಗಳನ್ನು ಶುಚಿಗೊಳಿಸಿ ಬಣ್ನ ಹಚ್ಚಿ ಅಂದವಾಗಿಸಿದರು. ಮೊತ್ತೊಂದೆಡೆ ಕದ್ರಿ ಮರುಕಟ್ಟೆಯ ಸುತ್ತಮುತ್ತ ಹಾಗೂ ಕದ್ರಿ ಮುಖ್ಯ ರಸ್ತೆಯನ್ನು ಸ್ವಚ್ಚಗೊಲಿಸಿದರು. ಮನೋಹರ್ ಪ್ರಭು ಯುವಕರನ್ನು ಮಾರ್ಗದರ್ಶಿಸಿದರು.

ರಥಬೀದಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಟೆಂಪಲ್ ಸ್ಕ್ವೇರ್‍ಅಕ್ಕಪಕ್ಕದ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಪ್ರಾಚಾರ್ಯರಾದ ಡಾ. ರಾಜಶೇಖರ್ ಹೆಬ್ಬಾರ್ ಹಾಗೂ ವಿಠಲದಾಸ ಪ್ರಭು ಕಾರ್ಯಕ್ರವನ್ನು ಆರಂಭಗೊಳಿಸಿದರು. ಶ್ರೀವೆಂಕಟರಮಣ ದೇವಸ್ಠಾನದ ವಠಾರ ಹಾಗೂ ಗಣಪತಿ ದೇವಸ್ಥಾನದ ವಠಾರಗಳನ್ನು ವಿದ್ಯಾರ್ಥಿಗಳು ಶುಚಿಗೊಳಿಸಿದರು. ಕು. ಸ್ವರ್ಣಾ ಸೇರಿದಂತೆ ಅನೇಕ ವಿದ್ಯಾರ್ಥಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದೇರಳಕಟ್ಟೆ: ಕೆಎಸ್ ಹೆಗ್ಡೆ ಮೆಡಿಕಲ್‍ಅಕಾದಮಿ ವಿದ್ಯಾರ್ಥಿಗಳು ದೇರಲಕಟ್ಟೆಯಲ್ಲಿ ಸ್ವಚ್ಚತಾ ಕಾರ್ಯವನ್ನು ಡಾ. ಸತೀಶ್‍ರಾವ್ ಮಾರ್ಗದರ್ಸನದಲ್ಲಿ ಹಮ್ಮಿಕೊಂಡರು. ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ರಮಾನಂದ ಶೆಟ್ಟಿ ಹಾಗೂ ಹೇಮಲತಾ ಶೆಟ್ಟಿ ಜಂಟಿಯಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾರಂಭಕ್ಕೂ ಮುನ್ನ ಡಾರಮಾನಂದ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಚಿತ್ವದ ಮಹತ್ವದ ಕುರಿತು ತಿಳಿಸಿದರು. ತದನಂತರ ಸುಮಾರು 50 ಮೆಡಿಕಲ್ ವಿದ್ಯಾರ್ಥಿಗಳೊಂದಿಗೆ ಒಡಗೂಡಿ ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನಗೈದರು. ಕಾಲೇಜಿನ ಹೊರಭಾಗದ ರಸ್ತೆಯಲ್ಲಿದ್ದ ಕಸವನ್ನೆಲ್ಲ ಹೆಕ್ಕಿ ಸ್ವಚ್ಛಗೊಳಿಸಿದರು. ಶಶಿಕುಮಾರ ಶೆಟ್ಟಿ ಕಾರ್ಯಕ್ರಮಾ ಸಂಘಟಿಸಿದರು.

9ನೇ ವಾರದ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಏಳು ಕಡೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನುಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ನಂತರ ಭಾಗವಹಿಸಿದವರಿಗೆಲ್ಲ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಅಭಿಯಾನಕ್ಕೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡುತ್ತಿವೆ.


Spread the love

Exit mobile version