ರಾಮಾಯಣ-ಮಹಾಭಾರತ-ಪಂಚತಂತ್ರ ಪರೀಕ್ಷಾ ಪ್ರಮಾಣ ಪತ್ರ ವಿತರಣೆ

Spread the love

ರಾಮಾಯಣ-ಮಹಾಭಾರತ-ಪಂಚತಂತ್ರ ಪರೀಕ್ಷಾ ಪ್ರಮಾಣ ಪತ್ರ ವಿತರಣೆ

ಮೂಡುಬಿದಿರೆ: ನಮ್ಮ ದೇಶದಲ್ಲಿರುವ ಸಂಪ್ರದಾಯ, ಸಂಸ್ಕøತಿ, ಸಂಸ್ಕಾರಗಳು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಇದೆಲ್ಲದಕ್ಕೂ ಮೂಲಾಧಾರ ನಮ್ಮ ರಾಮಯಣ ಮಹಾಭಾರತ ಗ್ರಂಥಗಳು ಎಂದು ಆಳ್ವಾಸ್ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಹಾಗೂ ಯಕ್ಷಕವಿ ಪ್ರೋ ಪವನ ಕಿರಣ್‍ಕೆರೆ ಹೇಳಿದರು.

ಇವರು ಆಳ್ವಾಸ್ ಕಾಲೇಜಿನ ಪದವಿ ಸಂಸ್ಕøತ ವಿಭಾಗ ಆಯೋಜಿಸಿದ 2019-20ನೇ ಸಾಲಿನ ರಾಮಾಯಣ-ಮಹಾಭಾರತ-ಪಂಚತಂತ್ರ ಪರೀಕ್ಷಾ ಪ್ರಮಾಣ ಪತ್ರ ವಿತರಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಗ್ರಂಥಗಳು ನೀಡಿರುವ ಸಂದೇಶಗಳು ಸರ್ವಕಾಲಿಕವಾದವುಗಳು. ವಿದ್ಯಾರ್ಥಿಗಳು ರಾಮಾಯಣ ಮಹಾಭಾರತ ಓದುವುದರಿಂದ ಹಾಗೂ ಪರೀಕ್ಷೆಗಳನ್ನು ಬರೆಯುವುದರಿಂದ ಅವರ ಮುಂದಿನ ಜೀವನ ಯಶಸ್ಸಿನಿಂದ ಕೂಡಿರಲು ಸಾಧ್ಯ. ಪ್ರಸ್ತುತ ವಿದ್ಯಾಬ್ಯಾಸದಲ್ಲಿರುವ ರಾಜಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ, ವಿಜ್ಞಾನ, ಕಲಾ, ವಾಣಿಜ್ಯ ಹೀಗೆ ಎಲ್ಲಾ ವಿಷಯಗಳನ್ನು ಪುರಾಣದ ಕೃತಿಗಳಿಂದಲೇ ಬಂದಿದೆ ಎಂದರು.

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಶ್ರೀ ಶ್ರೀ ಸ್ವಸ್ತಿಶ್ರೀ ಭಾರತಭೂಷಣ ಚಾರುಕೀರ್ತಿ ಭಟ್ಟಾರಕ ಸ್ವಾಮಿ, ಸಂಪೂರ್ಣ ರಾಮಾಯಣ, ಮಹಾಭಾರತ ಪ್ರಸ್ತುತ ಜಗತ್ತಿಗೆ ಲಭಿಸಿರುವ ಅತ್ಯಮೂಲ್ಯ ಕೃತಿಗಳು. ಇದರಲ್ಲಿರುವ ಬರುವ ಕೃಷ್ಣ, ರಾಮನ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಲೋಭ, ಕ್ರೋಧ, ದ್ವೇಷಗಳನ್ನು ಬಿಟ್ಟು ಸಾತ್ವಿಕ, ಕರುಣೆ ಮತ್ತು ವಿವೇಕ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಆಡಳಿತಾಧಿಕಾರಿ ಪ್ರೊ.ಬಾಲಕೃಷ್ಣ ಶೆಟ್ಟಿ,ಸಂಸ್ಕøತ ವಿಭಾಗದ ಮುಖ್ಯಸ್ಥ ಡಾ.ವಿದ್ವಾನ್||ವಿನಾಯಕ ಭಟ್ಟ ಗಾಳಿಮನೆ, ಪರೀಕ್ಷಾ ನಿರ್ವಹಕರು ಶ್ರಾವ್ಯ.ಎ. ಮತ್ತು ನಿತ್ಯಾನಂದ.ಪೈ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಂಜಿತ್ ಶೆಣೈ ನಿರೂಪಿಸಿದರು.


Spread the love