Home Mangalorean News Kannada News ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಟ -2018 – ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ

ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಟ -2018 – ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ

Spread the love

ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಟ -2018 – ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮಂಗಳೂರು: ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಟ -2018 ರ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಯು ಮಂಗಳೂರಿನ ಯುನಿವರ್ಸಿಟಿ ಕಾಲೇಜಿನ ಮೈದಾನದಲ್ಲಿ ಶನಿವಾರ ಜರುಗಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯ್ ಕುಮಾರ್ ಶೆಟ್ಟಿ ಅವರು ನೇರವೇರಿಸಿ ಮಾತನಾಡಿ ಕಾರ್ಯಕ್ರಮ ಆಯೋಜಕರಿಗೆ ಅಭಿನಂದಿಸುವುದರೊಂದಿಗೆ ಪರಿವರ್ತನಾ ಚಾರೀಟೇಬಲ್ ಸಂಸ್ಥೆಯ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಅವರು ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ವಹಿಸುತ್ತಿರುವ ಶ್ರಮವನ್ನು ಶ್ಲಾಘಿಸಿದರು. ದೊಡ್ಡ ಕೆಲಸಗಳನ್ನು ಮಾಡಲು ಇಂದು ಹಣದ ಅವಶ್ಯಕತೆಯಿದ್ದು, ಹೊಸ ತಂತ್ರಜ್ಞಾನದೊಂದಿಗೆ ಪ್ರತಿಯೊಬ್ಬರೂ ಪರಸ್ಪರ ಸಹಕಾರದೊಂದಿಗೆ ಯಾವುದೇ ಕೆಲಸವನ್ನು ಕೂಡ ಮಾಡಲು ಸಾಧ್ಯವಿದೆ. ಇಂತಹ ಪ್ರೀತಿ, ಏಕಾಗ್ರತೆ, ಮತ್ತು ಕಠಿಣ ಶ್ರಮ ಸಮಾಜದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯವಿದೆ. ಇಂತಹ ಪಂದ್ಯಾಟದಲ್ಲಿ ಕಾಲೇಜಿನ ಸಹಕುಲಾದಿಪತಿ ಹಾಗೂ ಇತರರು ಕೂಡ ಭಾಗಿಯಾಗಿರುವುದು ಸಂತೋಷ ತಂದಿದ್ದು, ಎಲ್ಲಾ ಸ್ಪರ್ಧಾಳುಗಳಿಗೂ ಶುಭ ಕೋರುವುದರೊಂದಿಗೆ ಗ್ರಾಮೀಣ ಕ್ರೀಡೆಯಾದ ಲಗೋರಿಯು ಉನ್ನತ ಸ್ಥಾನಕ್ಕೇರಲಿ ಎಂದು ಶುಭ ಹಾರೈಸಿದರು.

ಅಥ್ಲೆಟಿಕೊ ಸಂಸ್ಥೆಯ ತುಷಾರ್ ಜಾದವ್ ಅವರು ಮಾತನಾಡಿ ಸಂತೋಶ್ ಪಿ ಗೌರವ್ ಅವರು ಅಮೇಚೂರ್ ಲಗೋರಿ ಫೌಂಡೇಶನ್ ಇದರ ಸ್ಥಾಪಕರಾಗಿದ್ದು, 2009ರಲ್ಲಿ ಲಗೋರಿ ಅಸೊಶೀಯೇಶನ್ ಆರಂಭಿಸಿದರು. ಗ್ರಾಮೀಣ ಕ್ರೀಡೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತರುವಲ್ಲಿ ಹಲವಾರು ರೀತಿಯಲ್ಲಿ ಶ್ರಮಿಸಿದ ಅವರು 6 ವರ್ಷದ ಅವಧಿಯಲ್ಲಿ ಭಾರತೀಯ ಗ್ರಾಮೀಣ ಕ್ರೀಡೆಗಳನ್ನು 25 ದೇಶಗಳು ಒಪ್ಪಿಕೊಳ್ಳುವಂತಾಯಿತು.

ಆರಂಭದಲ್ಲಿ ಕ್ರೀಡೆಗೆ ಯಾವುದೇ ರೀತಿಯ ಪ್ರಾಯೋಜಕರು ಇರಲಿಲ್ಲ ಆದರೆ ಸತತ ಪರಿಶ್ರಮದ ಫಲವಾಗಿ ಲಗೋರಿಯನ್ನು ಗೌರವ್ ಅವರು ಯುರೋಪಿಯನ್ ಮತ್ತು ಏಷ್ಯನ್ ದೇಶಗಳಿಗೆ ಪರಿಚಯಿಸಿದರು. ಇದಕ್ಕಾಗಿ ಸಂತೋಷ್ ಅವರು ಹಲವಾರು ಮೊತ್ತದ ಹಣವನ್ನು ವ್ಯಯಿಸಬೇಕಾಗಿ ಬಂತು.

ಇದೇ ಮೊದಲಬಾರಿಗೆ ರಾಷ್ಟ್ರೀಯ ಮಟ್ಟದ ಲಗೋರಿಯನ್ನು ಮಂಗಳೂರಿನಲ್ಲಿ ಆಯೋಜಿಸಿದ್ದು, ಇದಕ್ಕೆ ಒರ್ವ ಲಿಂಗತ್ವ ಅಲ್ಪಸಂಖ್ಯಾತೆಯನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದಕ್ಕೆ ದೀಪಕ್ ಗಂಗೂಲಿ ಅವರು ಅಭಿನಂದನಾರ್ಹರು. ಇದರೊಂದಿಗೆ ಇಂತಹ ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ವಾಯ್ಲೆಟ್ ಪಿರೇರಾ ಕೂಡ ಅಭಿನಂಧನೆಗೆ ಪಾತ್ರು ಎಂದರು.

ಲಗೋರಿ ಪಂದ್ಯಾಟದ ಬ್ರಾಂಡ್ ಅಂಬಾಸಿಡರ್ ಸಂಜನಾ ಮಾತನಾಡಿ ಇಂದು ನನಗೆ ಇಂತಹ ಒಂದು ಅವಕಾಶ ಲಭಿಸಲು ಕಾರಣ ದೀಪಕ್ ಗಂಗೂಲಿ ಹಾಗೂ ನನ್ನ ತಾಯಿ ಸಮಾನರಾದ ವಾಯ್ಲೆಟ್ ಪಿರೇರಾ ಅವರುಗಳ ಬೆಂಬಲವಾಗಿದೆ. ಒಂದು ಮರ ನಮಗೆ ಸೂರ್ಯನ ಕಿರಣಗಳಿಂದ ನೆರಳನ್ನು ನೀಡುತ್ತದೆ ಅದರಂತೆ ವಾಯ್ಲೆಟ್ ಪಿರೇರಾ ಅವರೂ ಕೂಡ ಸದಾ ನಮ್ಮ ರಕ್ಷಣೆಗೆ ನಿಲ್ಲುತ್ತಾರೆ ಅಲ್ಲದೆ ನಮ್ಮ ಕಷ್ಟಗಳನ್ನು ಕೇಳುತ್ತಾರೆ. ಅವರು ನಮಗಾಗಿ ಮಾಡುವ ಪ್ರತಿಯೊಂದು ಪ್ರಯತ್ನಕ್ಕೆ ಸರಿಯಾದ ಪ್ರತಿಫಲವನ್ನು ನಾವು ಅವರಿಗೆ ನೀಡುತ್ತೇವೆ ಎಂದರು.

ಪಾಥ್ ವೇ ತಂಡದ ಕ್ರೀಡಾ ಕಾರ್ಯದರ್ಶಿ ನಿತೇಶ್ ಕುಲಾಲ್, ಅಂತರಾಷ್ಟ್ರೀಯ ಲಗೋರಿ ಅಸೊಶೀಯೇಶನ್ ಇದರ ಪ್ರಧಾನ ಕಾರ್ಯದರ್ಶಿ ಸಂದೀಪ್ ಪ್ರಹ್ಲಾದ್ ಗೌರವ್, ಪಾಥ್ ವೇ ಸಂಸ್ಥೆಯ ದೀಪಕ್ ಗಂಗೂಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಕರ್ನಾಟಕ ಸ್ಪರ್ಧಾ ತಂಡದ ಆಯ್ಕೆ ಪ್ರಕ್ರಿಯೆ ಜರುಗಿತು.


Spread the love

Exit mobile version