Home Mangalorean News Kannada News ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ: ಆಸ್ಪತ್ರೆಗಳ ಪರಿಷ್ಕøತ ಪಟ್ಟಿ

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ: ಆಸ್ಪತ್ರೆಗಳ ಪರಿಷ್ಕøತ ಪಟ್ಟಿ

Spread the love

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ: ಆಸ್ಪತ್ರೆಗಳ ಪರಿಷ್ಕøತ ಪಟ್ಟಿ
ಮ0ಗಳೂರು : ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಯೋಗದಲ್ಲಿ ವಿಮಾ ಹಾಗೂ ಟಿಪಿಎ ಕಂಪೆನಿಗಳ ಮೂಲಕ ಉಚಿತ ಆರೋಗ್ಯ ವಿಮಾ ಸೌಲಭ್ಯ ಒದಗಿಸುವುದು ಉದ್ದೇಶವಾಗಿದೆ. ಬಿಪಿಎಲ್ ಕುಟುಂಬದ ಸದಸ್ಯರು, ಕಟ್ಟಡ ಕಾರ್ಮಿಕರು, ಬೀದಿ ಬದಿ ಮಾರಾಟಗಾರರು, ಬೀಡಿ ಕಾರ್ಮಿಕರು ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಖಾತರಿ ಯೋಜನೆಯಲ್ಲಿ ನೋಂದಣಿಯಾದ ಸದಸ್ಯರುಗಳು, ಈ ಗುರುತಿಸಲ್ಪಟ್ಟ ಅಸಂಘಟಿತ ಕಾರ್ಮಿಕರು 2014-15ನೇ ಸಾಲಿನಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಸ್ಮಾರ್ಟ್ ಕಾರ್ಡ್‍ಗಳನ್ನು ಪಡೆದಿರುತ್ತಾರೋ ಅವರು ಒಂದು ವರ್ಷಕ್ಕೆ ರೂ.30,000 ದರದ ಚಿಕಿತ್ಸಾ ವೆಚ್ಚವನ್ನು ನೋಂದಾಯಿತ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಪಡೆಯಬಹುದು.

ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಒಡಂಬಡಿಕೆ ಹೊಂದಿರುವ ಆಸ್ಪತ್ರೆಗಳ ಪರಿಷ್ಕ್ರತ ಪಟ್ಟಿ : ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು, ಪಾಧರ್ ಮುಲ್ಲರ್ ಕಂಕನಾಡಿ ಆಸ್ಪತ್ರೆ,, ಕೆ.ಎಸ್. ಹೆಗ್ಡೆ ಧೇರಳಕಟ್ಟೆ, ಗ್ಲೋಬಲ್ ಆಸ್ಪತ್ರೆ,, ಯೆನೆಪೋಯ ಧೇರಳಕಟ್ಟೆ, ಸರಕಾರಿ ಲೇಡಿಗೋಶನ್ ಆಸ್ಪತ್ರೆ, , ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್, ಹರಿರಾಮ್ ಮೆಮೋರಿಯಲ್ ಮೆಡಿಕಲ್ ಸೆಂಟರ್ ಮಂಗಳೂರು, ಶ್ರೀನಿವಾಸ ಆಸ್ಪತ್ರೆ ಮುಕ್ಕ ಸುರತ್ಕಲ್, ಬೆನಕ ಹೆಲ್ತ್ ಸೆಂಟರ್ ಉಜಿರೆ, ಮಹಾವೀರ ಆಸ್ಪತ್ರೆ ಬೋಳ್ವಾರ್ ಪುತ್ತೂರು, ಶ್ರೀ ಕೃಷ್ಣ ಆಸ್ಪತ್ರೆ ಬೆಳ್ತಂಗಡಿ, ಪ್ರಗತಿ ಆಸ್ಪತ್ರೆ ಪುತ್ತೂರು , ಸೊಮಯಾಜಿ ಆಸ್ಪತ್ರೆ ಬಿ.ಸಿ.ರೋಡ್, ಚೇತನ ಆಸ್ಪತ್ರೆ ಪುತ್ತೂರು, ಅಭಯ ಆಸ್ಪತ್ರೆ ಬೆಳ್ತಂಗಡಿ, ಜ್ಯೋತಿ ಆಸ್ಪತ್ರೆ ಸುಳ್ಯ , ಸಮುದಾಯ ಆರೋಗ್ಯ ಕೇಂದ್ರ, ವಾಮದಪದವು, ಸಮುದಾಯ ಆರೋಗ್ಯ ಕೇಂದ್ರ, ಮೂಡಬಿದ್ರಿ,, ಸಮುದಾಯ ಆರೋಗ್ಯ ಕೇಂದ್ರ ಮುಲ್ಕಿ, ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿ, ಸಮುದಾಯ ಆರೋಗ್ಯ ಕೇಂದ್ರ ಕಡಬ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ತಾಲೂಕು ಆಸ್ಪತ್ರೆ ಬೆಳ್ತಂಗಡಿ, ತಾಲೂಕು ಆಸ್ಪತ್ರೆ ಪುತ್ತೂರು, ಪ್ರಸಾದ್ ನೇತ್ರಾಲಯ ಮಂಗಳೂರು, ಕನಚೂರು ಆಸ್ಪತ್ರೆ ದೇರಳಕಟ್ಟೆ ಮಂಗಳೂರು, ದನ್ವಂತರಿ ಆಸ್ಪತ್ರೆ ಉಪ್ಪಿನಂಗಡಿ, ಫಾದರ್ ಮುಲ್ಲರ್ ತುಂಬೆ ಬಂಟ್ವಾಳ, ಎಲ್ ಎಮ್ ಪಿಂಟೋ ಆಸ್ಪತ್ರೆ ಬದ್ಯಾರ್ ಬೆಳ್ತಂಗಡಿ, ಎಸ್ ಡಿ ಎಮ್ ಆಸ್ಪತ್ರೆ ಉಜಿರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ ಸುಳ್ಯ.
ಹೆಚ್ಚಿನ ಮಾಹಿತಿಗಾಗಿ ಸಮುದಾಯ ಆರೋಗ್ಯ ಕೇಂದ್ರ,, ತಾಲೂಕು ಆಸ್ಪತ್ರೆ,, ಜಿಲ್ಲಾ ಆಸ್ಪತ್ರೆ ಮತ್ತು ಒಡಂಬಡಿಕೆ ಹೊಂದಿರುವ ಆಸ್ಪತ್ರೆಗಳ ಆರೋಗ್ಯಮಿತ್ರರನ್ನು ಸಂಪರ್ಕಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love

Exit mobile version