ರಾಷ್ಟ್ರೀಯ ಹೆದ್ಧಾರಿ 66: ಟೋಲ್ ದರಗಳಲ್ಲಿ ಅಲ್ಪ ಬದಲಾವಣೆ, ಜೂ. 3ರಿಂದ ಜಾರಿ
ಉಡುಪಿ: ಉಡುಪಿ ಟೋಲ್ ವೇ ಪ್ರೈ. ಲಿ. ಅಧೀನದ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ, ತಲಪಾಡಿ ಮತ್ತು ಸಾಸ್ತಾನ ಟೋಲ್ ಪ್ಲಾಝಾಗಳಲ್ಲಿ ಏಪ್ರಿಲ್ನಲ್ಲಿ ಜಾರಿಗೊಳಿಸಬೇಕಾದ ಟೋಲ್ ದರಗಳನ್ನು ಲೋಕಸಭಾ ಚುನಾವಣೆಯಿಂದಾಗಿ ಮುಂದೂಡಲ್ಪಟ್ಟು, ಇದೀಗ ಸೋಮವಾರ ಜೂನ್ 3 ರಿಂದ ಪರಿಷ್ಕೃತಗೊಳಿಸಲಾಗಿದೆ.
ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಕಾರು, ಜೀಪು, ವ್ಯಾನ್ ಹಾಗೂ ಲೈಟ್ ಮೋಟಾರು ವಾಹನಗಳಿಗೆ ಒಂದು ಬಾರಿಯ ಪ್ರಯಾಣಕ್ಕೆ ಈಗಿನ ದರದಷ್ಟೇ 50ರೂ., 24 ಗಂಟೆಗಳೊಳಗಾಗಿ ವಾಪಸಾದಲ್ಲಿ 75 ರೂ. ಮಾಸಿಕ 50 ಬಾರಿ ಒಂದು ಬಾರಿ ಪ್ರಯಾಣಿಸುವುದಿದ್ದಲ್ಲಿ ಮಾಸಿಕ ಪಾಸ್ಗೆ 1675 ರೂ. ಹಾಗೂ ಖಾಸಗಿ ವಾಹನಗಳ ಮಾಸಿಕ ಪಾಸ್ಗೆ 340 ರೂ. ದರವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿಗದಿಪಡಿಸಿದೆ.
ಲೈಟ್ ಕಮರ್ಷಿಯಲ್ ವಾಹನ, ಸಾಗಾಣಿಕಾ ವಾಹನಗಳು ಮತ್ತು ಮಿನಿ ಬಸ್ಗಳಿಗೆ ಒಂದಾವರ್ತಿಗೆ 80, 24 ಗಂಟೆಯ ಒಳಗಾಗಿ 120, ಮಾಸಿಕ 50 ಬಾರಿ ಒಂದು ಬಾರಿಯ ಪ್ರವೇಶಗಳಿಗೆ ಮಾಸಿಕ ಪಾಸ್ ದರ 2,705 ರೂ. ಆಗಿದೆ. ಘನ ವಾಹನಗಳಿಗೆ ಮತ್ತು ಎರಡು ಆಕ್ಸೆಲ್ಗಳನ್ನು ಹೊಂದಿರುವ ವಾಹನಗಳಿಗೆ ಒಂದು ಬಾರಿಗೆ 170, 24 ಗಂಟೆಗಳೊಳಗೆ ವಾಪಸಾದರೆ 255, ಮಾಸಿಕ ಪಾಸ್ ದರವು 5,665 ನಿಗದಿಪಡಿಸಲಾಗಿದೆ. ಜೆಸಿಬಿ. ಹೆವಿ ಅರ್ಥ್ ಮೂವರ್ಗಳು ಮುಂತಾದವುಗಳಿಗೆ 265, 400, 8885ರೂ. ಮಾಸಿಕ ಪಾಸ್ ದರ ನಿಗದಿಯಾಗಿದೆ. 7 ಆಕ್ಸೆಲ್ಗಳನ್ನು ಹೊಂದಿರುವ ಭಾರಿ ಘನ ವಾಹನಗಳಿಗೆ 325, 485 ಹಾಗೂ 10,820 ರೂ. ದರ ವಿಧಿಸಲಾಗಿದೆ.