ರಾಷ್ಟ್ರ ಮಟ್ಟದ ಶೋಟಿಂಗ್ ಸ್ಟಾರ್ಸ ಮಾಧ್ಯಮೋತ್ಸವದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗಕ್ಕೆ ಪ್ರಶಸ್ತಿ
ವಿದ್ಯಾಗಿರಿ: ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ಎರಡು ದಿನಗಳ ರಾಷ್ಟ್ರ ಮಟ್ಟದ ಶೋಟಿಂಗ್ ಸ್ಟಾರ್ಸ ಮಾಧ್ಯಮೋತ್ಸವದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗವು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ಈ ಉತ್ಸವದಲ್ಲಿ ವಿದ್ಯಾರ್ಥಿಗಳಿಗಾಗಿ ಡಾಕ್ಯೂಮೆಂಟರಿ, ಕಿರುಚಿತ್ರ, ನ್ಯೂಸ್ ಬುಲೆಟಿಂಗ್, ರೇಡಿಯೋಜಾಕಿ, ಮೂವಿ ಪೆÇ್ರೀಫ್, ಜಾಮ್, ಸ್ಟೋರಿಟೆಲ್ಲಿಂಗ್, ಪೆÇೀಸ್ಟರ್ ಮೇಕಿಂಗ್, ಟ್ರಜರ್ ಹನ್ಟ್, ಡುಡಲ್‍ಆರ್ಟ್,ಮೂವಿ ಕ್ವಿಜ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಆಳ್ವಾಸ್ ಕಾಲೇಜಿನ ಶ್ರೇಯಾ ಮತ್ತುರುಡಾ ಟ್ರಜರ್ ಹನ್ಟ್ ಪ್ರಥಮ, ಸನ್ನಿದಿ ಡೋಡಲ್‍ಆರ್ಟ್ ಪ್ರಥಮ ಮತ್ತು ಪೆÇೀಸ್ಟರ್ ಮೆಕಿಂಗ್ ದ್ವೀತೀಯ, ರೇಡಿಯೋಜಾಕಿಚೈತ್ರ ಪ್ರಥಮ, ಮೂವಿ ಕ್ವಿಜ್ ಟೆನ್ಸೀಲ್, ಅಭಿನಂದನ್,ರಾಹುಲ್ ಪ್ರಥಮ, ಗಗನ್‍ದೀಪ್ ಜಾಮ್ ಪ್ರಥಮ, ಮೋಕ್ ಸೆಲೆಬ್ರೆಟಿ ಪ್ರೆಸ್ ಶ್ರೇಯಾ, ಸ್ಟೋರಿಟೆಲ್ಲಿಂಗ್ ಶುಶಾಂತ್ ದ್ವಿತೀಯ,ಮೂವಿ ಸ್ಪೂಫ್ ಶುಶಾಂತ್, ತೇಜು, ದೀಪ್ತಿ, ಅಭಿಷೇಕ್, ತಂಡ ದ್ವಿತೀಯ, ಅಕ್ಷಯ್‍ರೈ ಹಾಗೂ ಹವ್ಯಶ್ರೀ ಒಳಗೊಂಡಂತೆ ದ್ವಿತೀಯ ಸ್ಥಾನವನ್ನು ಬಾಚಿಕೊಂಡರು.
ಸಿನೆಮಾ ನಿರ್ದೇಶಕಆದರ್ಶ ಹೆಚ್‍ಈಶ್ವರಪ್ಪ, ಸಂತ ಅಲೋಶಿಯಸ್ ಕಾಲೇಜಿನಆಡ್ಮಿನಿ ಬ್ಲಾಕ್ ನಿರ್ದೇಶಕಡಾ.ಅಲ್ವಿನ್‍ಡಿಸಾ, ಕಾಲೇಜಿನ ಪ್ರಾಂಶುಪಾಲ ಡಾ.ಪಾದರ್ ಪ್ರವೀಣ್ ಮಾರ್ಟಿಸ್, ವಿಭಾಗದ ಮುಖ್ಯಸ್ಥ ಪಾದರ್ ಡಾ ಮೆಲ್ವಿನ್ ಪಿಂಟೋ, ಕಾರ್ಯಕ್ರಮ ಸಂಯೋಜಕಿ ಭವ್ಯ ಪ್ರಶಸ್ತಿಯನ್ನು ವಿತರಿಸಿದರು.
ಉಪನ್ಯಾಸಕರಾದ ದೇವಿಶ್ರೀ ಶೆಟ್ಟಿ ಹಾಗೂ ಶ್ರೀ ಗೌರಿ ಜೋಷಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಬಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.