Home Mangalorean News Kannada News ರಾ.ಹೆ. ವಿಭಾಜಕಗಳ ನಡುವೆ ನಿರ್ಮಿಸಿದ ಕಂದಕಗಳ ಕಂಬಿ ಕಿತ್ತುಹಾಕುವವರ ವಿರುದ್ದ ಪ್ರಕರಣ ದಾಖಲು; ಜಿಲ್ಲಾಧಿಕಾರಿ

ರಾ.ಹೆ. ವಿಭಾಜಕಗಳ ನಡುವೆ ನಿರ್ಮಿಸಿದ ಕಂದಕಗಳ ಕಂಬಿ ಕಿತ್ತುಹಾಕುವವರ ವಿರುದ್ದ ಪ್ರಕರಣ ದಾಖಲು; ಜಿಲ್ಲಾಧಿಕಾರಿ

Spread the love

ರಾ.ಹೆ. ವಿಭಾಜಕಗಳ ನಡುವೆ ನಿರ್ಮಿಸಿದ ಕಂದಕಗಳ ಕಂಬಿ ಕಿತ್ತುಹಾಕುವವರ ವಿರುದ್ದ ಪ್ರಕರಣ ದಾಖಲು; ಜಿಲ್ಲಾಧಿಕಾರಿ

ಉಡುಪಿ: ರಾಷ್ಟ್ರೀಯ ಹೆದ್ದಾರಿಯ ವಿಭಾಜಕಗಳ ನಡುವೆ ನೀರು ಹರಿದು ಹೋಗಲು ನಿರ್ಮಿಸಿರುವ ಕಂದಕಗಳಿಗೆ ತಡೆಯಾಗಿ ನಿರ್ಮಿಸಿದ ಕಂಬಿಗಳನ್ನು ಕಿತ್ತುಹಾಕುವವರ ವಿರುದ್ದ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಉಡುಪಿ ಜಿಲ್ಲಾದಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ರಾಷ್ಟ್ರೀಯ ಹೆದ್ದಾರಿಯ ವಿಭಾಜಕಗಳ ನಡುವೆ ನೀರು ಹರಿದು ಹೋಗಲು ನಿರ್ಮಿಸಿರುವ ಕಂದಕಗಳ ಮೂಲಕ ಅನೇಕ ದ್ವಿಚಕ್ರ ವಾಹನ ಸವಾರರು ರಸ್ತೆಯನ್ನು ದಾಟಿ ಹೋಗುತ್ತಿದ್ದು ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಫಘಾತಗಳು ಸಂಭವಿಸುತ್ತಿದ್ದು, ಈ ಮೂಲಕ ತಮ್ಮ ಪ್ರಾಣವನ್ನು ಅಪಾಯಕ್ಕೊಡುತ್ತಿರುವುದಲ್ಲದೆ ಇತರ ಪಾದಾಚಾರಿಗಳು ಹಾಗೂ ವಾಹನ ಸವಾರರ ಜೀವಕ್ಕೂ ಅಪಾಯವನ್ನುಂಟು ಮಾಡುತ್ತಿದ್ದಾರೆ. ಇದನ್ನು ತಡೆಯುವ ಸಲುವಾಗಿ ಕಾಮಾಗಾರಿ ಸಂಸ್ಥೆಯ ಸದ್ರಿ ಕಂದಕಗಳಿಗೆ ತಡೆಯಾಗಿ ಕಂಬಿಗಳನ್ನು ನಿರ್ಮಾಣಮಾಡಿದ್ದು, ಕೆಲವೊಂದು ವಾಹನ ಸವಾರರು ಇವುಗಳನ್ನು ಕಿತ್ತು ಹಾಕಿ ರಸ್ತೆ ದಾಟುತ್ತಿರುವ ಪ್ರಕರಣಗಳು ಕಂಡುಬಂದಿರುತ್ತದೆ.

ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇನ್ನು ಮುಂದೆ ಯಾವುದಾದರೂ ವಾಹನ ಸವಾರರು ಕಂದಕಗಳಿಗೆ ತಡೆಯಾಗಿ ನಿರ್ಮಿಸಿದ ಕಂಬಿಗಳನ್ನು ಕಿತ್ತುಹಾಕುವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.


Spread the love

Exit mobile version