ರಾ.ಹೆ. 66 ಕಾಮಗಾರಿ ವಿಳಂಬ; ಸಾಸ್ತಾನದಲ್ಲಿ ಟೋಲ್ ಸಂಗ್ರಹ ನಿಲ್ಲಿಸುವಂತೆ ಎಸಿ ಕೋರ್ಟ್ ನೋಟಿಸ್

Spread the love

ರಾ.ಹೆ. 66 ಕಾಮಗಾರಿ ವಿಳಂಬ; ಸಾಸ್ತಾನದಲ್ಲಿ ಟೋಲ್ ಸಂಗ್ರಹ ನಿಲ್ಲಿಸುವಂತೆ ಎಸಿ ಕೋರ್ಟ್ ನೋಟಿಸ್

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ವಿಳಂಬದ ಹಿನ್ನಲೆಯಲ್ಲಿ ಕಾಮಾಗಾರಿ ಪೂರ್ಣಗೊಳ್ಳುವ ವರೆಗೆ ಸಾಸ್ತಾನದಲ್ಲಿ ಟೋಲ್ ಸಂಗ್ರಹ ಯಾಕೆ ನಿಲ್ಲಿಸಬಾರದು ಎಂದು ಕಾರಣ ಕೇಳಿ ನವಯುಗ ಕಂಪೆನಿಗೆ ಕುಂದಾಪುರ ಸಹಾಯಕ ಆಯುಕ್ತರ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕುಂದಾಪುರ ಸಹಾಯಕ ಕಮೀಷನರ್ ಭೂಬಾಲನ್ ಅವರು ನೋಟಿಸನ್ನು ಜಾರಿಗೊಳಿಸಿದ್ದು, ರಾಷ್ಟ್ರೀಯ ಹೆದ್ದಾರಿಯ ಉಡುಪಿ ಕರಾವಳಿ ವೃತ್ತದ ಬಳಿ ಅಂಡರ್ ಪಾಸ್ ಮತ್ತು ಕುಂದಾಪುರದ ಶಾಸ್ತ್ರಿ ಪಾರ್ಕ್ ಬಳಿ ಪ್ಲೈಓವರ್ ಬಳಿ ಕಾಮಗಾರಿ ವಿಳಂಬವಾಗಿದ್ದು ಸುಮಾರು ಆರು ವರ್ಷಗಳಿಂದ ನಿರಂತರ ಕಾಮಗಾರಿ ಬಳಿಕವು ಪೂರ್ಣಗೊಳದ ಯೋಜನೆಯಿಂದ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ.

ಕರಾವಳಿ ವೃತ್ತ ಮತ್ತು ಶಾಸ್ತ್ರಿ ಪಾರ್ಕ್ ಬಳಿ ಮುಗಿಯದ ಕಾಮಗಾರಿ ಹಿನ್ನಲೆಯಲ್ಲಿ ಸಾಕಷ್ಟು ಅಪಘಾತಗಳು‌ ಮತ್ತು ನಿತ್ಯವು ಟ್ರಾಫಿಕ್ ಗೊಂದಲ‌ ನಿರ್ಮಾಣವಾಗಿದ್ದು ಈ ಹಿನ್ನಲೆಯಲ್ಲಿ ಸೆಕ್ಷನ್ 133 ಕ್ರಿಮಿನಲ್ ಪ್ರೋಸಿಜರ್ ಕೋಡ್ 1973, 1 ಅಡಿಯಲ್ಲಿ ಸಹಾಯಕ ಆಯುಕ್ತರ ಕೋರ್ಟ್ ನೋಟಿಸ್ ಜಾರಿ‌ ಮಾಡಿದೆ.

ಅಲ್ಲದೆ ಜೂನ್ 6 ರಂದು ನಡೆಯುವ ಕುಂದಾಪುರ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗುವಂತೆ ನೋಟಿಸು ಜಾರಿ ಮಾಡಿದ ಎಸಿ ಭೂಪಾಲನ್ ಅಂದು ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾದ ಕುರಿತು ಮಾಹಿತಿ‌ ನೀಡುವಂತೆ ಸೂಚಿಸಿದ್ದು, ಕಾಮಗಾರಿ ಮುಗಿಯುವ ವರೆಗೆ ಸಾಸ್ತಾನ‌ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ಯಾಕೆ ನಿಲ್ಲಿಸಬಾರದು ಎಂದು ಕಾರಣ ಕೇಳಿ ನೋಟಿಸಿನಲ್ಲಿ ತಿಳಿಸಿದ್ದಾರೆ.


Spread the love