ರಿಯಾದಿನಲ್ಲಿ ಮಿತ್ತಬೈಲ್ ಉಸ್ತಾದ್ ಅನುಸ್ಮರಣೆ

Spread the love

ರಿಯಾದಿನಲ್ಲಿ ಮಿತ್ತಬೈಲ್ ಉಸ್ತಾದ್ ಅನುಸ್ಮರಣೆ

ಇತ್ತೀಚಿಗೆ ನಮ್ಮನ್ನಗಲಿದ ಸಮಸ್ತ ಕೇರಳ ಜಮಿಯ್ಯತ್ತುಲ್ ಉಲೇಮಾದ ಉಪಾಧ್ಯಕ್ಷರೂ, ಹಿರಿಯ ವಿದ್ವಾಂಸರೂ ಆದ ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ರವರ ಅನುಸ್ಮರಣೆ ಕಾರ್ಯಕ್ರಮ ಜ. 18ರಂದು ಸೌದಿ ಅರೇಬಿಯಾದ ರಿಯಾದಿನಲ್ಲಿ ಜರುಗಿತು. ರಿಯಾದಿನ ಕರ್ನಾಟಕ ಸಮಸ್ತ ಸಂಘಟನೆಗಳ ಒಕ್ಕೂಟದಿಂದ ನಡೆದ ಕಾರ್ಯಕ್ರಮದಲ್ಲಿ ಖತಾಮುಲ್ ಕುರಾನ್, ತಹಲೀಲ್ ಸಮರ್ಪಣೆ, ಅನುಸ್ಮರಣೆ ಮತ್ತು ಮಯ್ಯಿತ್ ನಮಾಜು ನಿರ್ವಹಿಸಲಾಯಿತು.

ಕಾರ್ಯಕ್ರಮವನ್ನು ಶಂಸುಲ್ ಉಲೇಮಾ ಇಸ್ಲಾಮಿಕ್ ಅಕಾಡಮಿ ವಾದಿತ್ವಯ್ಯಬ ಕೀನ್ಯಾದ ಬಹು. ಅಬ್ದುಲ್ ಜಬ್ಬಾರ್ ಆಝರಿ ಬೆಳ್ಳಾರೆ ಉದ್ಘಾಟಿಸಿದರು. ಸಮಸ್ತ ಕೇರಳ ಇಸ್ಲಾಮಿಕ್ ಸೆಂಟರ್ ರಿಯಾದ್ ಸಮಿತಿಯ ಧಹ್ವಾ ವಿಂಗ್ ನ ಸಂಚಾಲಕರಾದ ಬಹು. ಮೊಹಮ್ಮದ್ ಅಲಿ ಫೈಝಿ ದುಃಅ ಗೈದರು. ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡಮಿಯ ಬಹು. ಮೊಹಮ್ಮದ್ ಆರಿಫ್ ಬಾಖವಿ ನೆಲ್ಯಾಡಿ, ಕರ್ನಾಟಕ SಏSSಈ ರಿಯಾದ್ ಸಮಿತಿಯ ನಿರ್ದೇಶಕರರಾದ ಬಹು. ಅಬ್ದುಲ್ ಲತೀಫ್ ಮಿಸ್ಬಾಹಿ ಬೆಳಂದೂರು ಮತ್ತು ಕರ್ನಾಟಕ  SಏSSಈ ರಿಯಾದ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಆರಂಬೂರು ಮಿತ್ತಬೈಲ್ ಉಸ್ತಾದರ ಕುರಿತು ಅನುಸ್ಮರಣಾ ಪ್ರಭಾಷಣಗೈದರು.

ಕರ್ನಾಟಕ  SಏSSಈ ರಿಯಾದ್ ಸಮಿತಿಯ ಉಪಾದ್ಯಕ್ಷರರಾದ ಹಸನ್ ಹಾಜಿ ಅರ್ಕಾನರವರು ಅಧ್ಯಕ್ಷತೆ ವಹಿಸಿದ್ದರು. ಶಂಸುಲ್ ಉಲೇಮಾ ಇಸ್ಲಾಮಿಕ್ ಅಕಾಡಮಿ ವಾದಿತ್ವಯ್ಯಬ ಕೀನ್ಯಾದ ರಿಯಾದ್ ಸಮಿತಿಯ ಅಧ್ಯಕ್ಷರಾದ ಅನ್ವರ್ ತುಂಬೆ, ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡಮಿಯ ರಿಯಾದ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಾಯರ್, ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ಇದರ ರಿಯಾದ್ ಸಮಿತಿಯ ಕೋಶಾಧಿಕಾರಿ ಶಾಹುಲ್ ಹಮೀದ್ ಉಚ್ಚಿಲ, ಕೆ.ಎಂ.ಸಿ.ಸಿ. ಮಂಜೇಶ್ವರ ಮಂಡಲ ರಿಯಾದ್ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಕುಂಜ್ಹಿ ಸಫಾ ಮಕ್ಕಾ, ಕಾರ್ಯದರ್ಶಿ ರಹೀಮ್ ಸೋಂಕಾಲ್ ಮುಖ್ಯ ಅತಿಥಿಗಳಾಗಿದ್ದರು.

ಇದೇ ಸಂದರ್ಭದಲ್ಲಿ ಜನವರಿ 25ರಂದು ರಾತ್ರಿ 7.30 ಕ್ಕೆ ರಿಯಾದಿನ ಕ್ಲಾಸಿಕ್ ಆಡಿಟೋರಿಯಂ ಬಥ ದಲ್ಲಿ ನಡೆಯಲಿರುವ SಏSSಈ ಮಾನವ ಸರಪಳಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.   ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ರಿಯಾದ್ ಸಮಿತಿಯ ಕಾರ್ಯದರ್ಶಿ ಸಿರಾಜ್ ತೋಡಾರು ಸ್ವಾಗತಿಸಿ, ಕರ್ನಾಟಕ  SಏSSಈ ರಿಯಾದ್ ಸಮಿತಿಯ ಕೋಶಾಧಿಕಾರಿ ಶಾಫಿ ತೋಡಾರು ವಂದಿಸಿದರು.


Spread the love