Home Mangalorean News Kannada News ರೊಜಾರಿಯೊ ಸ್ಕೂಲ್ – ಹೊಯಿಗೆ ಬಜಾರ್ ರಸ್ತೆ ಗುದ್ದಲಿಪೂಜೆ 

ರೊಜಾರಿಯೊ ಸ್ಕೂಲ್ – ಹೊಯಿಗೆ ಬಜಾರ್ ರಸ್ತೆ ಗುದ್ದಲಿಪೂಜೆ 

Spread the love

ರೊಜಾರಿಯೊ ಸ್ಕೂಲ್ – ಹೊಯಿಗೆ ಬಜಾರ್ ರಸ್ತೆ ಗುದ್ದಲಿಪೂಜೆ 

ಮಂಗಳೂರು : ನಗರದ ರೊಜಾರಿಯೋ ಸ್ಕೂಲ್ ನಿಂದ ಹೊಯಿಗೆ ಬಜಾರ್ ಗೆ ಹೋಗುವ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ ಆರ್ ಲೋಬೊರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ರೊಜಾರಿಯೋ ಸ್ಕೂಲ್ ಹೊಯಿಗೆ ಬಜಾರ್ ರಸ್ತೆಯು ಬಹಳ ಜನನಿಬಿಡ ರಸ್ತೆಯಾಗಿದ್ದು, ಬಂದರು ಕಡೆಗೆ ಹೋಗುವ ಘನವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಈ ರಸ್ತೆಯ ಅಭಿವೃದ್ಧಿಯು ತೀರಾ ಅಗತ್ಯವಾಗಿರುವುದರಿಂದ ಕರ್ನಾಟಕ ಸರಕಾರದ ಲೋಕೊಪಯೋಗಿ ಇಲಾಖೆಯವರ ಸುಮಾರು ರೂ.75 ಲಕ್ಷ ಮಂಜುರಾತಿ ದೊರೆತಿದೆ. ಸುಮಾರು 400 ಮೀಟರ್ ಉದ್ದದ ಈ ರಸ್ತೆಯ ಅಗಲ 700 ಮೀಟರ್ ಆಗಿರುತ್ತದೆ. ಮುಂದಿನ ಮೂರು ತಿಂಗಳ ಒಳಗೆ ಕಾಮಗಾರಿಯು ಪೂರ್ತಿಯಾಗಿ ಲೋಕರ್ಪಣೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಪೋರೇಟರ್ ಅಬ್ದುಲ್ ಲತೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಮ್, ವಾರ್ಡ್ ಅಧ್ಯಕ್ಷ ಸುಧಾಕರ ಶೆಣೈ, ಟಿ.ಕೆ ಸುಧೀರ್, ರಮಾನಂದ ಪೂಜಾರಿ, ರಫೀಕ್ ಕಣ್ಣೂರು ಮೊಹಮ್ಮದ್ ನವಾಝ್, ಅಶೋಕ್, ಇಮ್ರಾನ್, ಯೂಸುಫ್ ಉಚ್ಚಿಲ್, ಆಸೀಫ್ ಬೆಂಗರೆ, ಗುತ್ತಿಗೆದಾರ ಎಂ.ಜಿ ಹುಸೈನ್, ಲೋಕೊಪಯೋಗಿ ಇಲಾಖೆಯ ಇಂಜಿನಿಯರ್ ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version