Home Mangalorean News Kannada News ರೊಜಾರಿಯೋ ಕೆಥೆಡ್ರಲ್‌ನಲ್ಲಿ 14 ಜೋಡಿಗಳ ಸಾಮೂಹಿಕ ವಿವಾಹ

ರೊಜಾರಿಯೋ ಕೆಥೆಡ್ರಲ್‌ನಲ್ಲಿ 14 ಜೋಡಿಗಳ ಸಾಮೂಹಿಕ ವಿವಾಹ

Spread the love

ಮಂಗಳೂರು: ರೋಜಾರಿಯೋ ಕೆಥೆಡ್ರಲ್‌ನಲ್ಲಿ ಸ್ಥಳೀಯ ಸಂತ ವಿನ್ಸೆಂಟ್‌ ಡಿ. ಪೌಲ್ ಸೊಸೈಟಿ ವತಿಯಿಂದ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 14 ಜೋಡಿಗಳ ವಿವಾಹ ನಡೆಯಿತು.

ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೆ. ಡಾ. ಅಲೋಶಿಯಸ್‌ ಡಿ’ಸೋಜಾ ಕ್ರೈಸ್ತ ಧಾರ್ಮಿಕ ವಿವಾಹದ ವಿಧಿ ವಿಧಾನಗಳನ್ನು ನಡೆಸಿ ಕೊಟ್ಟರು. ದಾಂಪತ್ಯ ಜೀವನದಲ್ಲಿ ಸಂತೋಷವಲ್ಲದೆ ದುಃಖವನ್ನೂ ಹಂಚಿಕೊಳ್ಳುವುದು ಅಗತ್ಯವಿದ್ದು  ದಂಪತಿಗಳು ಪರಸ್ಪರ ಪ್ರೀತಿಯಿಂದ ಬಾಳಬೇಕೆಂದು ಬಿಷಪ್‌ ನವ ದಂಪತಿಗಳನ್ನು ಆರ್ಶಿವದಿಸಿದರು.

ಧರ್ಮ ಪ್ರಾಂತದ ಪ್ರಧಾನ ಗುರು ಮೊ. ಡೆನ್ನಿಸ್‌ ಮೊರಾಸ್‌ ಪ್ರಭು ಪ್ರವಚನ ನೀಡಿದರು. ನಂತರ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಕರ್ನಾಟಕ ಎಜನ್ಸ್ಪಿಸ್‌ ಸಂಸ್ಥೆಯ ಮುಖ್ಯಸ್ಥ ರಿಜಾರ್ಡ್‌ ರೊಡ್ರಿಗಸ್‌, ಎಸ್‌.ವಿ.ಪಿ. ಕೇಂದ್ರೀಯ ಸಮಿತಿ ಅಧ್ಯಕ್ಷ ಹೆರಾಲ್ಡ್‌ ಮೊಂತೇರೊ ಮತ್ತಿತರ ಪ್ರಮುಖರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ರೊಜಾರಿಯೊ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ಫಾ. ಜೆ.ಬಿ. ಕ್ರಾಸ್ತಾ ಸ್ವಾಗತಿಸಿದರು. ಎಸ್‌.ವಿ.ಪಿ. ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾದ ಸಿ.ಜೆ. ಸೈಮನ್‌ ಮತ್ತು ಮೇರಿ ಜೆ. ಪಿಂಟೊ ವಂದಿಸಿದರು.

 

 


Spread the love

Exit mobile version