ರೊಜಾರಿಯೋ ಚರ್ಚಿಗೆ ಮೇಯರ್ ಭೇಟಿ
ಮಂಗಳೂರು ಮಹಾ ನಗರಪಾಲಿಕೆ ವತಿಯಿಂದ ಮೇಯರ್ ಬಾಸ್ಕರ ಕೆ. ರವರು ರೊಜಾರಿಯೊ ಕಾಥೆಡ್ರೆಲ್‍ಗೆ ಭೇಟಿ ನೀಡಿ ಮಂಗಳೂರು ಮಹಾ ನಗರ ಪಾಲಿಕೆ ವತಿಯಿಂದ ರಸ್ತೆ ದುರಸ್ತಿ, ದಾರಿ ದೀಪ, ರಸ್ತೆ ಸುಚಿತ್ವ, ಕುಡಿಯುವ ನೀರು ಬಗ್ಗೆ ಪರೀಶೀಲನೆ ನಡೆಸಿ ಸಮಿತಿಯ ಪ್ರಮುಖರೊಡನೆ ಮಾತುಕತೆ ನಡೆಸಿದರು.
ಮಹಾನಗರ ಪಾಲಿಕೆಯಿಂದ ಎಲ್ಲಾ ಸಿದ್ದತೆಗಳು ನಡೆದಿದ್ದು, ಅಧಿಕಾರಿಗಳು ಎಲ್ಲಾ ಕೆಲಸಗಳು ಪೂರ್ಣಗೊಳ್ಳುವಂತೆ ಅದೇಶಿಸಿದರು. ಉಪಮೇಯರ್ ಮಹಮ್ಮದ್ , ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನವೀನ್ ಡಿಸೋಜ, ಮುಖ್ಯ ಸಚೇತಕರಾದ ಶಶಿಧರ್ ಹೆಗ್ಡೆ, ಕೊರ್ಪೆರೇಟರ್ ಲತೀಫ್, ಲ್ಯಾನ್ಸಿಲೋಟ್ ಪಿಂಟೊ, ಪ್ರವೀಣ್ ಚಂದ್ರ ಅಳ್ವ, ಕಾರ್ಯಕ್ರಮದ ಸಂಯೋಜಕರಾದ ವಂ| ಜೆ.ಬಿ ಕ್ರಾಸ್ತಾ ಸಂಚಾಲಕರಾದ ಸುಶೀಲ್ ನೊರೊನ್ಹಾ ಹಾಗೂ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.