ರೋಗಿಯೊಬ್ಬ ನರಳುತ್ತಿರುವ ವಿಡಿಯೋ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯದ್ದಲ್ಲ – ಅಧೀಕ್ಷಕರ ಸ್ಪಷ್ಟನೆ
ಮಂಗಳೂರು: ಮಾಸ್ಕ್ ಧರಿಸಿದ ರೋಗಿಯೊಬ್ಬರು ಆಸ್ಪತ್ರೆಯಲ್ಲಿ ನರಳಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ವೆನ್ಲಾಕ್ ಆಸ್ಪತ್ರೆಯ ದೃಶ್ಯ ಎಂದು ಸಂದೇಶದಲ್ಲಿ ಬರೆಯಲಾಗಿದೆ. ಆದರೆ ಇದು ವೆನ್ ಲಾಕ್ ಆಸ್ಪತ್ರೆಯ ವಿಡಿಯೋ ಅಲ್ಲ ಎಂದು ಆಸ್ಪತ್ರೆಯ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಆಸ್ಪತ್ರೆ ಅಧೀಕ್ಷಕರು, ರೋಗಿಯು ವೆನ್ ಲಾಕ್ ಆಸ್ಪತ್ರೆ ಬೆಡ್ ನಲ್ಲಿ ನರಳಾಡುತ್ತಿರುವ ಎನ್ನಲಾಗುವ ಎರಡು ವೀಡಿಯೋ ದೃಶ್ಯಾವಳಿ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದು, ಇದು ವೆನ್ ಲಾಕ್ ಆಸ್ಪತ್ರೆಯ ದೃಶ್ಯವಲ್ಲ. ಅಲ್ಲದೇ ವೆನ್ ಲಾಕ್ ನಲ್ಲಿ ನೀಲಿಬಣ್ಣದ ಹಾಸಿಗೆ ಬಳಸಲಾಗುತ್ತಿಲ್ಲ ಎಂದು ವೆನ್ ಲಾಕ್ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, ಈ ರೀತಿ ವದಂತಿ, ಅಪಪ್ರಚಾರ ಮಾಡುವುದರ ಬಗ್ಗೆ ವೆನ್ ಲಾಕ್ ಅಧೀಕ್ಷಕರು ನಾಳೆ ಪೊಲೀಸ್ ದೂರು ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.