Home Mangalorean News Kannada News ರೋಟರಿ ‘ಸ್ವಹಿತ ಮೀರಿದ ಸೇವೆ ಮಾಡುತ್ತಿದೆ : ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ

ರೋಟರಿ ‘ಸ್ವಹಿತ ಮೀರಿದ ಸೇವೆ ಮಾಡುತ್ತಿದೆ : ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ

Spread the love

ರೋಟರಿ ‘ಸ್ವಹಿತ ಮೀರಿದ ಸೇವೆ ಮಾಡುತ್ತಿದೆ :  ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ

ಉಡುಪಿ: 1905 ರಲ್ಲಿ ಕೇವಲ ಸ್ನೇಹ ಮತ್ತು ಒಡನಾಟಕೊಸ್ಕರ 4 ಮಿತ್ರರಿಂದ ಅಮೇರಿಕಾದ ಚಿಕಾಗೋ ನಗರದಲ್ಲಿ ಸ್ಥಾಪಿಸಲ್ಪಟ್ಟ ಅಂತರಾಷ್ಟ್ರೀಯ ರೋಟರಿಯು ವಿಶ್ವದಾದ್ಯಂತ ಪಸರಿಸಿ ಪ್ರಸ್ತುತ 212 ಕ್ಕೂ ಹೆಚ್ಚು ದೇಶಗಳಲ್ಲಿ 35325 ಕ್ಕೂ ಮಿಕ್ಕಿದ ಸದಸ್ಯ ಸಂಸ್ಥೆಗಳಿಂದ 12.25 ಲಕ್ಷಕ್ಕೂ ಮಿಕ್ಕಿ ಸದಸ್ಯರು ‘ಸ್ವಹಿತ ಮೀರಿದ ಸೇವೆ’ಯನ್ನು ಸಮಾಜಮುಖಿಯಾಗಿ ಮಾಡುತ್ತಿದೆ ಎಂದು ರೋಟರಿ ಜಿಲ್ಲೆ 3182, ವಲಯ 4ರ ಸಹಾಯಕ ಗವರ್ನರ್ ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ ತಿಳಿಸಿದರು

rotay logo

ಕಳೆದ 42 ವರ್ಷಗಳಿಂದ 8 ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ 3180 ಆಡಳಿತಾತ್ಮಕ ದ್ರಷ್ಟಿಯಿಂದ 2016-17 ರ ಸಾಲಿಗೆ ತಲಾ 4 ಕಂದಾಯ ಜಿಲ್ಲೆಗಳನ್ನು ಒಳಗೊಂಡಂತೆ ರೋಟರಿ ಜಿಲ್ಲೆ 3181 ಮತ್ತು ರೋಟರಿ ಜಿಲ್ಲೆ 3182 ಆಗಿ ವಿಭಜನೆಗೊಂಡು ಇಂದು ವಿದ್ಯುಕ್ತವಾಗಿ ಕಾರ್ಯಾರಂಭಿಸಿದೆ. ನಮ್ಮ ಉಡುಪಿ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು ರೋಟರಿ ಜಿಲ್ಲೆ 3182 ರ ವ್ಯಾಪ್ತಿಗೆ ಬರುತ್ತವೆ. ಹೊಸ ಜಿಲ್ಲೆಯೊಂದಿಗೆ 11 ಹೊಸ ವಲಯಗಳು 78 ರೋಟರಿ ಸಂಸ್ಥೆಗಳಿಂದ ಹಲವಾರು ಕಾರ್ಯಕ್ರಮಗಳು, ಯೋಜನೆಗಳು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಲಿವೆ. ರೋಟರಿ ಪೆರ್ಡೂರು, ಪರ್ಕಳ, ಉಡುಪಿ ಮಣಿಪಾಲ, ಮಣಿಪಾಲ ಹಿಲ್ಸ್, ಮಣಿಪಾಲ ಟೌನ್ ಉಡುಪಿ-ಉದ್ಯಾವರ ಮತ್ತು ಕಟಪಾಡಿ ಸಂಸ್ಥೆಗಳು ನಮ್ಮೀ ವಲಯ 4 ರಲ್ಲಿ ಸಹಾಯಕ ಗವರ್ನರ್ ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿಯವರ ಮುಂದಾಳತ್ವದಲ್ಲಿ ಕಾರ್ಯನಿರ್ವಹಿಸಲಿವೆ.
2016-17 ರ ರೋಟರಿ ವರ್ಷದಲ್ಲಿ ರೋಟರಿ ಅಂತರಾಷ್ಟ್ರೀಯ ಅಧ್ಯಕ್ಷ ಜಾನ್ ಎಫ್. ಜರ್ಮ್ ರವರು ಧ್ಯೇಯವಾಕ್ಯ ‘ಮನುಕುಲದ ಸೇವೆಯಲ್ಲಿ ರೋಟರಿ’ಯಡಿಯಲ್ಲಿ ಈ ಕೆಳಗಿನ ಮೂರು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆಗಳನ್ನು ರೂಪಿಸಿ ಕಾರ್ಯಕ್ರಮಗಳನ್ನು ನಡೆಸುವರೇ ಕರೆನೀಡಿದ್ದಾರೆ. ಕೊಳವೆ ಬಾವಿಗಳನ್ನು ತೋಡಿಸುವುದರ ಮೂಲಕ ತಾಯಿಯಂದಿರು ನೀರಿಗಾಗಿ ನಡೆಯುವುದನ್ನು ತಪ್ಪಿಸಿ, ಶಾಲೆಗಳಲ್ಲಿ ಶೌಚಾಲಯ ಕಟ್ಟಿಸುವುದರ ಮೂಲಕ ಹೆಣ್ಣು ಮಗು ಶಾಲೆ ಬಿಡುವುದನ್ನು ನಿಲ್ಲಿಸಿ ಮತ್ತು ಪೆÇೀಲಿಯೋ ನಿರ್ಮೂಲನೆ.
ರೋಟರಿ ಅಂತರಾಷ್ಟ್ರೀಯ ಅಧ್ಯಕ್ಷರ ಕರೆಗೆ ಅನುಗುಣವಾಗಿ ರೋಟರಿ ಜಿಲ್ಲೆ 3182 ರ ಪ್ರಥಮ ಜಿಲ್ಲಾ ಗವರ್ನರ್ ಮೂಡಿಗೆರೆಯ ಡಿ. ಎಸ್. ರವಿಯವರು ತಮ್ಮ 4 ಜಿಲ್ಲಾ ಯೋಜನೆಗಳನ್ನು ರೂಪಿಸಿ ರೋಟರಿ ಸದಸ್ಯರುಗಳಿಗೆ ತಮ್ಮ ತಮ್ಮ ಊರುಗಳಲ್ಲಿ ಅಗತ್ಯತೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವರೇ ವಿನಂತಿಸಿರುತ್ತಾರೆ. ವಲಯ 4ರಲ್ಲಿ ನೂತನವಾಗಿ 10 ಇಂಟರ್ಯಾಕ್ಟ್, 2 ರೋಟರಿ, 2 ರೋಟರಿ ಗ್ರಾಮೀಣ ದಳ, 5 ರೋಟರ್ಯಾಕ್ಟ್ ಕ್ಲಬ್ ಗಳನ್ನು ಹಾಗು 50 ಮಹಿಳೆಯರು ಸೇರಿ 200 ಜನ ಹೊಸ ಸದಸ್ಯರನ್ನು ರೋಟರಿ ಕುಟುಂಬಕ್ಕೆ ಸೇರಿಸಿಕೊಳ್ಳುವ ಉದ್ದೇಶ ನಮ್ಮದು. ಅಂತರಾಷ್ಟ್ರೀಯ ದತ್ತಿನಿಧಿಗೆ ಗರಿಷ್ಠ ಮಟ್ಟದ ದೇಣಿಗೆಯನ್ನು ನೀಡುವ ಪಣ ತೋಟ್ಟಿದ್ದೇವೆ.
ಸ್ವಚ್ಛ ವಿದ್ಯಾಲಯ, ಶಾಲಾ ವಿದ್ಯಾರ್ಥಿಗಳ ದ್ರಷ್ಟಿ ಪರೀಕ್ಷೆ, ರೈತ ಮಿತ್ರ ಮತ್ತುವಿದ್ಯಾರ್ಥಿಗಳಿಗೆ ವ್ರತ್ತಿ ಮಾರ್ಗದರ್ಶನ ಒಟ್ಟಿನಲ್ಲಿ ನೂತನ ಜಿಲ್ಲೆಯ ಹಲವಾರು ಸವಾಲುಗಳನ್ನು ದಕ್ಷವಾಗಿ ಎದುರಿಸಿ ತಮ್ಮ ತಮ್ಮ ರೋಟರಿ ಸಂಸ್ಥೆಗಳನ್ನು ಮುನ್ನೆಡೆಸಿ ಮೇಲ್‍ಸ್ಥರದಲ್ಲಿ ಇರಿಸುವ ಮತ್ತು ಹೊಸ ರೋಟರಿ ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಮಾಡುವ ಜವಾಬ್ದಾರಿ 2016-17 ನೇ ಸಾಲಿನ ರೋಟರಿ ನಾಯಕರುಗಳ ಮುಂದಿರುವ ವಿಚಾರವನ್ನು, ಹೊಸ ರೋಟರಿ ಜಿಲ್ಲೆ 3182 ರ ಶುಭಾರಂಭದ ಈ ಶುಭ ದಿನದಂದು ವಲಯ 4 ರ ಎಲ್ಲಾ ರೋಟರಿ ಸದಸ್ಯರ ಪರವಾಗಿ ಸಹಾಯಕ ಗವರ್ನರ್ ರೊ. Pಊಈ. ಸುಬ್ರಹ್ಮಣ್ಯ ಬಾಸ್ರಿ ಮತ್ತು ವಲಯ ತರೆಬೇತುದಾರ ರೊ. ಡಾ| ಎ.ಗಣೇಶರವರು ಪತ್ರಿಕಾ ಗೋಷ್ಟಿಯಲ್ಲಿ ಹೇಳಿಕೆ ನೀಡಿರುತ್ತಾರೆ.
ಪತ್ರಿಕಾ ಗೊಷ್ಟಿಯಲ್ಲಿ ವಲಯ ಸೇನಾನಿಗಳಾದ ಸುರೇಶ್ ವಿ.ಬೀಡು, ಜಗದೀಶ್ ಕಾಮತ್, ವಲಯ ತರಬೇತುದಾರ ಡಾ| ಎ.ಗಣೇಶ್, ಉಡುಪಿ ರೋಟರಿ ಅಧ್ಯಕ್ಷ ಡಾ| ಸುರೇಶ್ ಶೆಣ್ಯೆ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯ, ಐ.ಕೆ.ಜಯಚಂದ್ರ, ರಾಮಚಂದ್ರ ಐತಾಳ್, ರಾಜೇಶ್ ಪಣಿಯಾಡಿ ಉಪಸ್ಥಿತರಿದ್ದರು


Spread the love

Exit mobile version