Home Mangalorean News Kannada News ರೋಡೊಂದು ನೆನಪು………. ಎದೆಯಾಳದಲ್ಲಿ, ಬೆಳಾಲು ರಸ್ತೆಯಲ್ಲಿ ಪ್ರಯಾಣಿಸಲು ನರಕಯಾತನೆ

ರೋಡೊಂದು ನೆನಪು………. ಎದೆಯಾಳದಲ್ಲಿ, ಬೆಳಾಲು ರಸ್ತೆಯಲ್ಲಿ ಪ್ರಯಾಣಿಸಲು ನರಕಯಾತನೆ

Spread the love

ರೋಡೊಂದು ನೆನಪು………. ಎದೆಯಾಳದಲ್ಲಿ, ಬೆಳಾಲು ರಸ್ತೆಯಲ್ಲಿ ಪ್ರಯಾಣಿಸಲು ನರಕಯಾತನೆ!

ಉಜಿರೆ: ರೋಡಿನೊಳಗೆ ತೋಡೋ, ತೋಡಿನೊಳಗೆ ರೋಡೋ, ರೋಡು – ತೋಡುಗಳೆರಡೂ ನಿನ್ನೊಳಗೋ? ರೋಡೊಂದು ನೆನಪು, ಎದೆಯಾಳದಲ್ಲಿ! ಎಂದು ಉಜಿರೆಯಿಂದ ಬೆಳಾಲು ರಸ್ತೆಯಲ್ಲಿ ನಿತ್ಯ ಪ್ರಯಾಣಿಸುವ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನಗಳ ಚಾಲಕರು – ಮಾಲಕರು ಜಪಿಸುವಂತಾಗಿದೆ. ಎಂತಹ ನಾಸ್ತಿಕರೂ ಇಲ್ಲಿ ಆಸ್ತಿಕರಾಗುತ್ತಾರೆ. ಏಕೆಂದರೆ ದೇವರ ಅನುಗ್ರಹವಿಲ್ಲದಿದ್ದರೆ, ಗುರಿ ಮುಟ್ಟುವುದು ಗ್ಯಾರಂಟಿ ಇಲ್ಲ!

ಉಜಿರೆಯಿಂದ ಬೆಳಾಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆ ಬೆಳಾಲು ಕ್ರಾಸ್‍ನಿಂದ ಸುಮಾರು ಒಂದು ಕಿ.ಮೀ. ದೂರ ತೀರಾ ಹದಗೆಟ್ಟಿದೆ. ರಸ್ತೆಯೇ ನಾಪತ್ತೆಯಾಗಿದೆ ಎಂದು ಕೆಲವರ ಅಂಬೋಣ.

ಸಂಬಂಧಪಟ್ಟವರ ಗಮನಕ್ಕೆ ಹಲವು ಬಾರಿ ಮನವಿ ಅರ್ಪಿಸಿದರೂ ಪ್ರತಿಫಲ ಮಾತ್ರ ಶೂನ್ಯ! ರಿಕ್ಷಾ ಚಾಲಕರು ಒಮ್ಮೆ ಶ್ರಮದಾನ ಮಾಡಿ ತಾತ್ಕಾಲಿಕವಾಗಿ ಭೀಮಗಾತ್ರದ ಹೊಂಡಗಳನ್ನು ಮುಚ್ಚಿ ಸಂಚಾರ ಯೋಗ್ಯ ರಸ್ತೆಯಾಗಿ ಮಾಡಿದರು. ಆದರೆ ಇದೀಗ ಜಡಿಮಳೆ ಪ್ರಾರಂಭವಾಗಿದ್ದು ಈ ರಸ್ತೆಯಲ್ಲಿ ಸಂಚಾರ ನರಕಯಾತನೆಯಾಗಿದೆ. ದ್ವಿಚಕ್ರ ವಾಹನ ಸವಾರರು, ತ್ರಿಚಕ್ರ ವಾಹನಗಳು ಸರ್ಕಸ್ ಮಾಡಿಕೊಂಡೇ ಹೋಗಬೇಕಾಗುತ್ತದೆ. ಪಾದಚಾರಿಗಳ ಗೋಳು ಹೇಳ ತೀರದು. ನಿತ್ಯವೂ ಕೆಸರಿನ ಅಭಿಷೇಕ ಉಚಿತವಾಗಿ! ರಸ್ತೆ ಆದಷ್ಟು ಬೇಗ ದುರಸ್ತಿಯಾಗಲಿ. ಸಂಚಾರ ಸುಖಕರವಾಗಲಿ ಎಂದೇ ಎಲ್ಲರ ಆಶಯ, ಅಪೇಕ್ಷೆ ಆಗಿದೆ.


Spread the love

Exit mobile version