ರೋಶನಿ ನಿಲಯದಲ್ಲಿ ಅಂತರಾಷ್ಟ್ರೀಯ ವಿಚಾರ ಸಂಕಿರಣ

Spread the love

ರೋಶನಿ ನಿಲಯದಲ್ಲಿ ಅಂತರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು: ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯದಲ್ಲಿ ಸ್ಪಂದನ- ನೈಜತೆಯ ಕಡೆಗೆ ನಿಲುವು 2018 “ ವೈವಿದ್ಯತೆಯಿಂದ ಸೇರ್ಪಡೆಯ ಕಡೆಗೆ ಸಮಾಜ ಕಾರ್ಯದ ಮಜಲುಗಳು” ಎಂಬ ವಿಷಯದ ಬಗ್ಗೆ ಎರಡು ದಿನದ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಹಾಗು ಫೆ 16 ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಬಿ.ಎಸ್. ನಾಗೇಂದ್ರ ಪ್ರಕಾಶ್ ಇವರು ವಿಚಾರ ಸಂಕಿರಣ ವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಡಾ.ಪ್ರಕಾಶ್‍ರವರು ಸಂದರ್ಭ್ರೋಚಿತ ವಿಷಯದ ಆಯ್ಕೆಗೆ ಸಂಸ್ಥೆಯನ್ನು ಶ್ಲಾಘಿಸಿದರು. ವೈವಿದ್ಯಯಿಂದ ಸೇರ್ಪಡೆಯ ಕಡೆಗೆ ಸ್ಪಂದನವು ಒಂದು ಸೇತುವೆ ಹಾಗೂ ಈ ಬದಲಾವಣೆಯಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳು ರಾಯಭಾರಿಗಳು ಎಂದು ಪ್ರಶಂಶಿಸಿದರು. ಭಾರತೀಯ ಚರಿತ್ರೆಯು ಸಮಾಜಿಕ, ಆರ್ಥಿಕ ಹಾಗು ಧಾರ್ಮಿಕ ವೈವಿದ್ಯತೆಯನ್ನು ಹೊಂದಿದ್ದರೂ ಸಮಾನತೆಯ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಂಗಳೂರು ಪರಿಸರದ ಸೂಚ್ಯಾಂಕದಲ್ಲಿ ತೃತೀಯ ಸ್ಥಾನದಲ್ಲಿದ್ದು ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನಗಳಿಸಬೇಕೆಂದು ಯುವ ಜನತೆಯಲ್ಲಿ ಸವಾಲೊಡ್ಡಿದರು. ಉತ್ತಮ ಸಮಾಜದ ನಿರ್ಮಾಣದ ಪ್ರಾರಂಭಿಕೆಯಲ್ಲಿ ಸ್ಪಂದನ ಹಾಗೂ ರೋಶನಿ ನಿಲಯವು ಬದಲಾವಣೆಯ ಪ್ರತಿನಿಧಿಗಳಾಗಬೇಕೆಂದು ಎಂದು ಹೇಳುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಅ ಡಾ. ಜೋಸೆಫ್ ವ್ರಾಂಕ ಯುನೈಟೆಡ್ ನೇಶನ್ ಇನ್ ಜೆನೆವಾದ  ಪ್ರತಿನಿಧಿ ಹಾಗು ಸಮಾಜಕಾರ್ಯ ಸ್ಪ್ರಿಂಜ್ ಫೀಲ್ಡ್ ಕಾಲೇಜು ಮಸಾಜು ಸೆಟ್ಸ್ ನ ಪ್ರಾಧ್ಯಾಪಕರಾಗಿರುವ ಇವರು ಮಾನವ ಹಕ್ಕುಗಳು, ಸಮಾಜಿಕ ನ್ಯಾಯ ಮತ್ತು ವೈವಿದ್ಯತೆ ಮತ್ತು ಸೇರ್ಪಡೆ ಎಂಬ ವಿಷಯದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ಜೆನೆವಾದ ಸ್ಥಳೀಯರ ಮದ್ಯಪಾನ ಹಾಗು ಅತ್ಮಹತ್ಯಾ ಪ್ರವೃತ್ತಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು

ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೊಫಿಯಾ ಎನ್ ರವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿಚಾರ ಸಂಕಿರಣದ ಎರಡು ಮುಖ್ಯ ಅಂಶಗಳಾದ ವೈವಿದ್ಯತೆ ಮತ್ತು ಸೇರ್ಪಡೆ ಎಂಬ ಅಂತರ್ ಸಂಬಂಧಿತ ವಿಷಯಗಳ ಬಗ್ಗೆ ಸ್ಪಂದಿಸುವುದೇ ಮುಖ್ಯವಾದ ವಿಷಯ ಎಂದು ತಿಳಿಸಿದರು. ಮೌಲ್ಯಗಳನ್ನು ಹಾಳುಗೈಯುವ ಅನ್ಯಾಯ ಮತ್ತು ಬಹಿಷ್ಕಾರ ಎಂಬುವುದು ಈ ಜಗತ್ತಿನಲ್ಲಿ ಉಲ್ಬಣಿಸುತ್ತಿರುವ ವಿಷಯಗಳಾಗಿದ್ದು ವೈವಿದ್ಯತೆ ಮತ್ತು ಸೇರ್ಪಡೆಯು ಸಮಾಜಕಾರ್ಯ ಕ್ಷೇತ್ರಕ್ಕೆ ತುಂಬಾ ನಿಕಟವಾಗಿರುವಂತಹದ್ದು ಎಂದು ಪ್ರಸ್ತಾಪಿಸಿದರು

ವಿದ್ಯಾರ್ಥಿ ಸಂಚಾಲಕರಾದ ಕುಮಾರಿ ಸೂಸನ್ ಜೋರ್ಜ್ ರವರು ವಿಚಾರ ಸಂಕಿರಣದಲ್ಲಿ ನೆರೆದ ಗಣ್ಯರನ್ನು ಹಾಗೂ ಪ್ರತಿನಿಧಿಗಳನ್ನು ಸ್ವಾಗತಿಸಿದರು ಡಾ. ರಮೀಳಾ ಶೇಖರ್ ಡೀನ್ ಸಮಾಜ ಕಾರ್ಯ ವಿಭಾಗ ರೋಶನಿ ನಿಲಯ ಇವರು ವಿಚಾರ ಸಂಕಿರಣದ ವಿಷಯವನ್ನು ಪರಿಚಯಿಸಿದರು.


Spread the love